ದೇಶಕ್ಕಾಗಿ ಪ್ರಾಣವನ್ನೂ ತೆರಬಲ್ಲೆ: ಅರವಿಂದ್‌ ಕೇಜ್ರಿವಾಲ್‌ - Mahanayaka
3:10 PM Wednesday 5 - February 2025

ದೇಶಕ್ಕಾಗಿ ಪ್ರಾಣವನ್ನೂ ತೆರಬಲ್ಲೆ: ಅರವಿಂದ್‌ ಕೇಜ್ರಿವಾಲ್‌

aravind
31/03/2022

ನವದೆಹಲಿ: ಅರವಿಂದ್‌ ಕೇಜ್ರಿವಾಲ್‌ ಮುಖ್ಯವಲ್ಲ, ಆದರೆ ದೇಶ ಮುಖ್ಯ. ನನ್ನ ದೇಶಕ್ಕಾಗಿ ಪ್ರಾಣವನ್ನೂ ತೆರಬಲ್ಲೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಹೇಳಿದ್ದಾರೆ.

‘ದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಕುರಿತು ತಮ್ಮ ಹೇಳಿಕೆಗೆ ಖಂಡನೆ ವ್ಯಕ್ತಪಡಿಸಿ ಬಿಜೆಪಿ ಬೆಂಬಲಿತ ಪ್ರತಿಭಟನಾಕಾರರು ತಮ್ಮ ಮನೆ ಮೇಲೆ ದಾಳಿ ನಡೆಸಿದ ಬಳಿಕ ಮೊದಲ ಬಾರಿಗೆ ಅವರು ಪ್ರತಿಕ್ರಿಯೆ ನೀಡಿದರು.

ಕೇಂದ್ರದಲ್ಲಿ ಅಧಿಕಾರದಲ್ಲಿರುವ ದೇಶದ ಅತಿ ದೊಡ್ಡ ಪಕ್ಷ ಇಂತಹ ಗೂಂಡಾಗಿರಿ ನಡೆಸಿದರೆ, ಜನರಿಗೆ ಕೆಟ್ಟ ಸಂದೇಶ ರವಾನೆಯಾಗುತ್ತದೆ. ಜನರು ಇದೇ ಸರಿಯಾದ ಮಾರ್ಗ ಎಂದು ಭಾವಿಸುತ್ತಾರೆ. ದೇಶ ಈ ರೀತಿ ಪ್ರಗತಿ ಹೊಂದಲು ಸಾಧ್ಯವಿಲ್ಲ ಎಂದು ಬಿಜೆಪಿ ವಿರುದ್ಧ ಕೇಜ್ರಿವಾಲ್‌ ಹರಿಹಾಯ್ದಿದರು.

‘ದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಕುರಿತು ಅವಹೇಳನಕಾರಿಯಾಗಿ ಮಾತನಾಡಿರುವ ಕೇಜ್ರಿವಾಲ್‌ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿ ಬಿಜೆಪಿ ಬೆಂಬಲಿತರು ಪ್ರತಿಭಟನೆ ನಡೆಸಿದ್ದರು. ಇದೇ ವೇಳೆ ಮುಖ್ಯಮಂತ್ರಿ ಮನೆ ಮೇಲೆ ದಾಳಿಗೆ ಮುಂದಾಗಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಪ್ರತಿಭಟನಾಕಾರರನ್ನು ಬಂಧಿಸಲಾಗಿದೆ.

ಕೇಜ್ರಿವಾಲ್‌ ಅವರನ್ನು ಹತ್ಯೆ ಮಾಡಲು ಬಿಜೆಪಿ ಯತ್ನಿಸುತ್ತಿದೆ ಎಂದು ಎಎಪಿ ಗಂಭೀರ ಆರೋಪ ಮಾಡಿತ್ತು. ತಪ್ಪಿತಸ್ಥರ ವಿರುದ್ಧ ಶಿಸ್ತು ಕ್ರಮ ಆಗಬೇಕು ಎಂದು ಎಎಪಿ ಸಚಿವರು ಹಾಗೂ ಶಾಸಕರು ಆಗ್ರಹಿಸಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಚಪ್ಪಲಿ ಏಟು ತಿನ್ನಬಹುದು ಆದರೆ, ದುಡ್ಡೇಟು ತಿನ್ನೋಕೆ ಆಗಲ್ಲ: ಡಿ.ಕೆ.ಶಿವಕುಮಾರ್ ವಾಗ್ದಾಳಿ

ಇತಿಹಾಸ ತಿರುಚುವುದು ಒಳ್ಳೆ ಬೆಳವಣಿಗೆಯಲ್ಲ: ಎಚ್.ವಿಶ್ವನಾಥ್

ರಂಜಾನ್ ವೇಳೆ ಹಿಂದೂಗಳ ವ್ಯಾಪಾರಕ್ಕೆ ಧಕ್ಕೆ ತರಬೇಡಿ, ಅವರೊಂದಿಗೆ ಸಹಕರಿಸಿ: ಮುಸ್ಲಿಮ್ ಮುಖಂಡರಿಂದ ಮನವಿ

ಮೊಸಳೆಗಳು, ಹಲ್ಲಿಗಳು, ಹಾವುಗಳು: ಆತನ ಜಾಕೆಟ್, ಕಾರಿನಲ್ಲಿತ್ತು 1,700 ಜೀವಿಗಳು

ಇತ್ತೀಚಿನ ಸುದ್ದಿ