ನೆಗೆಟಿವ್ ಪ್ರಚಾರದ ನಡುವೆಯೂ 100 ಕೋಟಿ ಕ್ಲಬ್ ಸೇರಿದ ಕಂಗುವಾ ಸಿನಿಮಾ

kanguva
18/11/2024

ಕಾಲಿವುಡ್ ಸೂಪರ್ ಸ್ಟಾರ್ ಸೂರ್ಯ ಅಭಿನಯದ ಕಂಗುವಾ ಸಿನಿಮಾ, ನೆಗೆಟಿವ್ ಪ್ರಚಾರದ ನಡುವೆಯೂ ಮೂರೇ ದಿನದಲ್ಲಿ 100 ಕೋಟಿ ರೂ. ಕ್ಲಬ್ ​ಗೆ ಸೇರಿದೆ. ಸಿನಿಮಾವನ್ನು ಸೋಲಿಸಲು ಸಾಕಷ್ಟು ನೆಗೆಟಿವ್ ಪ್ರಚಾರಗಳನ್ನು ನಡೆಸಲಾಗುತ್ತಿರುವ ಬಗ್ಗೆ ಚಿತ್ರ ತಂಡ ಆಕ್ರೋಶ ಕೂಡ ವ್ಯಕ್ತಪಡಿಸಿದೆ.

ಈ ಸಿನಿಮಾ ವಿಶ್ವದಾದ್ಯಂತ 127 ಕೋಟಿ ರೂ. ಗಳಿಕೆ ಮಾಡಿದೆ.  ಓಪನಿಂಗ್ ನಲ್ಲಿ ಕಂಗುವಾ ಬಾಕ್ಸ್ ಆಫೀಸ್ ನಲ್ಲಿ ಅಬ್ಬರಿಸಿತ್ತು. ಆದರೆ ಎರಡನೇ ದಿನ ಗಳಿಕೆಯಲ್ಲಿ  ಕೊಂಚ ಇಳಿಕೆಯಾಗಿತ್ತು. ಇದಕ್ಕೆ ನೆಗೆಟಿವ್ ಪ್ರಚಾರ ಕಾರಣ ಎಂದು ಸಿನಿಮಾ ತಂಡ ಬೇಸರ ವ್ಯಕ್ತಪಡಿಸಿತ್ತು. ಇದರ ಬೆನ್ನಲ್ಲೇ ಮೂರನೇ ದಿನ ಮತ್ತೆ ಬಾಕ್ಸ್ ಆಫೀಸ್ ನಲ್ಲಿ ಕಂಗುವಾ ಮೋಡಿ ಮಾಡಿದೆ.

ಈ ಸಿನಿಮಾವನ್ನು ಶಿವ ನಿರ್ದೇಶನ ಮಾಡಿದ್ದಾರೆ.  ದಿಶಾ ಪಟಾನಿ ಮತ್ತು ಬಾಬಿ ಡಿಯೋಲ್ ಪ್ರಮುಖ ಪಾತ್ರಗಳಲ್ಲಿ ಮಿಂಚಿದ್ದಾರೆ. ಇಡೀ ಕುಟುಂಬ ಸಮೇತವಾಗಿ ಈ ಚಿತ್ರವನ್ನು ನೋಡಬಹುದು ಎನ್ನುವ ಅಭಿಪ್ರಾಯ ಸಿನಿಪ್ರಿಯರಿಂದ ಕೇಳಿ ಬಂದಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ

Exit mobile version