ಸಮಾನತೆ ಕಾಣಬೇಕಾದರೆ ಸರ್ಕಾರಿ ಕಚೇರಿಗಳಲ್ಲಿರುವ ದೇವರ ಫೋಟೋ ಕೂಡ ತೆಗೆಯಿರಿ: ನಟ ಚೇತನ್

ಬೆಂಗಳೂರು: ಸಮವಸ್ತ್ರದಲ್ಲಿ ಸಮಾನತೆ ಕಾಣಬೇಕು ಎಂಬ ಒತ್ತಾಯದಂತೆ ಸರ್ಕಾರಿ ಕಚೇರಿ ಮತ್ತು ಶಾಲಾ ಕಾಲೇಜುಗಳಿಂದ ದೇವರ ಚಿತ್ರಗಳನ್ನು ತೆಗೆದು ತಮ್ಮ ತಮ್ಮ ಮನೆಗೆ ವರ್ಗಾಯಿ ಎಂದು ನಟ ಚೇತನ್ ಹೇಳಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಸಮವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ಸರ್ಕಾರಿ ಶಾಲಾ ಸಮವಸ್ತ್ರದಲ್ಲಿ ಹಿಜಾಬ್ , ಟರ್ಬನ್ ಅಥವಾ ಯಾವುದೇ ಧಾರ್ಮಿಕ ಗುರುತುಗಳನ್ನು ತೆಗೆದುಹಾಕುವುದರ ಜೊತೆಗೆ, ಜಾತ್ಯಾತೀತ ಕನ್ನಡಿಗರಾದ ನಾವು ಸರ್ಕಾರಿ ಶಾಲೆಗಳು , ಕಚೇರಿಗಳು , ಬ್ಯಾಂಕುಗಳು , ಪೊಲೀಸ್ ಠಾಣೆಗಳು , ಆಸ್ಪತ್ರೆಗಳು , ಇತ್ಯಾದಿಗಳಿಂದ ಎಲ್ಲಾ ಧಾರ್ಮಿಕ ಭಾವಚಿತ್ರಗಳನ್ನು ತೆಗೆಯಬೇಕೆಂದು ಹೇಳ ಬಯಸುತ್ತೇವೆ ಎಂದಿದ್ದಾರೆ.
ಸಮವಸ್ತ್ರದಲ್ಲಿ ಧಾರ್ಮಿಕ ಸಮಾನತೆ ಕಾಣುವಂತೆ, ಸರ್ಕಾರಿ ಕಛೇರಿ ಮತ್ತು ಶಾಲಾ-ಕಾಲೇಜುಗಳಿಂದ ದೇವರ/ದೇವರುಗಳ ಚಿತ್ರವನ್ನು ತಮ್ಮ ತಮ್ಮ ಮನೆಗೆ ವರ್ಗಾಯಿಸಿ ಎಂದು ಅವರು ಹೇಳಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಟಿಕ್ ಟಾಕ್ ಅಜ್ಜಿ ಎಂದೇ ಪ್ರಖ್ಯಾತರಾಗಿದ್ದ ಕಮಲಜ್ಜಿ ಇನ್ನಿಲ್ಲ
ವಸತಿ ನಿಲಯದ ಊಟ ಸೇವಿಸಿ 14 ವಿದ್ಯಾರ್ಥಿನಿಯರು ಅಸ್ವಸ್ಥ
ವಿದೇಶಕ್ಕೆ ಹೋಗುವುದಾಗಿ ಹೇಳಿ, ಸಮುದ್ರಕ್ಕೆ ಹಾರಿ ವ್ಯಕ್ತಿ ಆತ್ಮಹತ್ಯೆ!
ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಪ್ರಕರಣ: ವಕೀಲ ರಾಜೇಶ್ ಭಟ್ಗೆ ಷರತ್ತುಬದ್ಧ ಜಾಮೀನು