ಮನೆಯಲ್ಲಿದ್ದ ದೇವರ ಫೋಟೋ ತೆಗೆದು ಅಂಬೇಡ್ಕರ್ ಫೋಟೋ ಇಟ್ಟ ದಲಿತ ಬಾಲಕನ ಕುಟುಂಬಸ್ಥರು
ಕೋಲಾರ: ಜಿಲ್ಲೆಯ ಮಾಲೂರು ತಾಲ್ಲೂಕಿನ ಉಳ್ಳೇರಹಳ್ಳಿಯ ಗ್ರಾಮ ದೇವತೆ ಭೂತಮ್ಮನ ಮೆರವಣಿಗೆ ವೇಳೆ ದಲಿತ ಬಾಲಕ ದೇವರ ಮೂರ್ತಿ ಮುಟ್ಟಿದ್ದಾನೆ ಎಂದು ಆರೋಪಿಸಿ ಆತನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ ಘಟನೆಯ ಬೆನ್ನಲ್ಲೇ ಇದೀಗ ದಲಿತ ಬಾಲಕನ ಮನೆಯಲ್ಲಿದ್ದ ದೇವರ ಫೋಟೋಗಳನ್ನು ತೆರವುಗೊಳಿಸಲಾಗಿದ್ದು, ದೇವರ ಫೋಟೋದ ಜಾಗದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಫೋಟೋವನ್ನು ಅಳವಡಿಸಲಾಗಿದೆ.
ಘಟನೆಯ ಬಳಿಕ ಬಾಲಕನ ಮನೆಗೆ ಧಾವಿಸಿದ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆಯವರು ಕುಟುಂಬಕ್ಕೆ ಅರಿವು ಮೂಡಿಸಿದ್ದು, “ನಿಮ್ಮ ಮನೆಯಲ್ಲಿ ಅಂಬೇಡ್ಕರ್ ಫೋಟೋ ಇರಬೇಕೇ ಹೊರತು ದೇವರ ಫೋಟೋ ಅಲ್ಲ” ಎಂದು ತಿಳಿಸಿದ್ದಾರೆ.
ಸಂಘಟನೆಗಳು ಜಾಗೃತಿ ಮೂಡಿಸಿದ ಬಳಿಕ, ಬಾಲಕನ ಕುಟುಂಬಸ್ಥರು ಮನೆಯಲ್ಲಿದ್ದ ವೆಂಕಟೇಶ್ವರ ದೇವರ ಫೋಟೋವನ್ನು ತೆಗೆದು ಅಂಬೇಡ್ಕರ್ ಹಾಗೂ ಬುದ್ಧನ ವಿಗ್ರಹವನ್ನು ತಮ್ಮ ಮನೆಯಲ್ಲಿರಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka