ದೇವರ ಪ್ರಸಾದ ಸೇವಿಸಿ ಭಕ್ತರು ಅಸ್ವಸ್ಥ: 12 ಮಕ್ಕಳು ಸಹಿತ 50 ಮಂದಿ ಅಸ್ವಸ್ಥ
ಕೋಲಾರ: ದೇವರ ಪ್ರಸಾದ ಸ್ವೀಕರಿಸಿ ಭಕ್ತರು ಅಸ್ವಸ್ಥಗೊಂಡ ಘಟನೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಬೈರಗಾನಹಳ್ಳಿ ಗ್ರಾಮದ ಗಂಗಮ್ಮ ದೇವಾಲಯದಲ್ಲಿ ನಡೆದಿದ್ದು, ಪ್ರಸಾದ ಸೇವಿಸಿದ ಬಳಿಕ ಭಕ್ತರಿಗೆ ವಾಂತಿ, ಬೇದಿ ಆರಂಭವಾಗಿದೆ ಎನ್ನಲಾಗಿದೆ.
ಗ್ರಾಮದ ಗಂಗಮ್ಮ ದೇವಾಲಯದಲ್ಲಿ ಹೊಸ ವರ್ಷದ ಪ್ರಯುಕ್ತ ವಿಶೇಷ ಪೂಜೆ ಹೋಮ ಏರ್ಪಡಿಸಲಾಗಿತ್ತು. ಪೂಜೆಗೆ ಗ್ರಾಮಸ್ಥರು ಸೇರಿದಂತೆ ಅಕ್ಕ ಪಕ್ಕದ ಗ್ರಾಮದ ನೂರಾರು ಜನರು ಬಂದಿದ್ದರು. ಪೂಜೆಯ ಬಳಿಕ ದೇವಸ್ಥಾನಕ್ಕೆ ಬಂದಿದ್ದ ಭಕ್ತರಿಗೆ ಕೇಸರಿ ಬಾತ್ ಹಾಗೂ ಚಿತ್ರನ್ನ ರೂಪದಲ್ಲಿ ಪ್ರಸಾದ ನೀಡಲಾಗಿತ್ತು. ಪ್ರಸಾದ ಸೇವಿಸಿದ ಕೆಲವೇ ಹೊತ್ತಿನಲ್ಲಿ ಭಕ್ತರಿಗೆ ವಾಂತಿ ಬೇದಿ ಆರಂಭವಾಗಿದ್ದು, ಭಕ್ತರು ಅಸ್ವಸ್ಥರಾಗಿದ್ದಾರೆ. ಅಸ್ವಸ್ಥರನ್ನು ಇಲ್ಲಿನ ಶ್ರೀನಿವಾಸಪುರ ತಾಲೂಕು ಸರ್ಕಾರಿ ಆಸ್ಪತ್ರೆ ಹಾಗೂ ಕೆಲವು ಖಾಸಗಿ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ.
ಸುಮಾರು 12 ಜನ ಮಕ್ಕಳು ಸೇರಿದಂತೆ ಸುಮಾರು 50 ಕ್ಕೂ ಹೆಚ್ಚು ಜನ ವಿವಿಧ ಆಸ್ಪತ್ರೆಗಳಿಗೆ ಬಂದು ದಾಖಲಾಗಿದ್ದಾರೆ. ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ತಾಲೂಕು ವೈದ್ಯಾಧಿಕಾರಿಗಳು ಹಾಗೂ ಪೊಲೀಸರು ದೌಡಾಯಿಸಿ ಪರಿಶೀಲನೆ ನಡೆಸಿದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
“ಪಡಿತರ ಚೀಟಿದಾರರಿಗೆ ಸೀಮೆ ಎಣ್ಣೆಯ ಬದಲು 5 ಕೆ.ಜಿ ಎಲ್ ಪಿಜಿ ಗ್ಯಾಸ್”
50 ರೂಪಾಯಿ ಕದ್ದಿದ್ದಕ್ಕೆ ಮಗನನ್ನು ಥಳಿಸಿ ಕೊಂದ ತಂದೆ
ಭೀಮ ಕೋರೆಗಾಂವ್ ಕದನ- ಜಾತಿ ಸಂಕೋಲೆಯಿಂದ ಶಿಕ್ಷಣ ಬಿಡುಗಡೆಯಾದ ದಿನ
15-18ವರ್ಷದವರಿಗೆ ಕೊರೊನಾ ಲಸಿಕೆ : ಇಂದಿನಿಂದಲೇ ನೋಂದಣಿ ಪ್ರಕ್ರಿಯೆ ಆರಂಭ