ಕಳೆದು ಕೊಂಡ ಪರ್ಸ್ ಮರಳಿಸಿ ಮಾನವೀಯತೆ ಮೆರೆದ ದೇವರಾಜ್!
24/07/2024
ಕೊಟ್ಟಿಗೆಹಾರ: ಪರ್ಸ್ ಕಳೆದುಕೊಂಡ ಮಹಿಳೆಗೆ ಪರ್ಸ್ ಹಿಂದಿರುಗಿಸುವ ಮೂಲಕ ವ್ಯಕ್ತಿಯೊಬ್ಬರು ಮಾನವೀಯತೆ ಮೆರೆದ ಘಟನೆ ಬಣಕಲ್ ನಲ್ಲಿ ನಡೆದಿದೆ.
ಬಣಕಲ್ ನಲ್ಲಿ ಭಾನುವಾರದಂದು ಓರ್ವ ಮಹಿಳೆ ಪರ್ಸನ್ನು ರಸ್ತೆಯಲ್ಲಿ ಬೀಳಿಸಿ ಹೋಗಿದ್ದರು. ಆ ಪರ್ಸ್ ಸಬ್ಲಿ ದೇವರಾಜ್ ಅವರಿಗೆ ಸಿಕ್ಕಿತ್ತು. ಅದರಲ್ಲಿ ಆಧಾರ್ ಕಾರ್ಡ್ ಪರಿಶೀಲಿಸಿದಾಗ ಪಿಲೋಮಿನಾ ಪಾಯ್ಸ್, ಚನ್ನಡ್ಲು ಎಂದು ವಿಳಾಸ ಇತ್ತು.
ಹೀಗಾಗಿ ಅವರನ್ನು ಕೊಟ್ಟಿಗೆಹಾರಕ್ಕೆ ಕರೆಸಿ ಅವರ 1,500 ನಗದು, ಎಟಿಎಂ ಕಾರ್ಡ್, ಆಧಾರ್ ಕಾರ್ಡ್ ಮತ್ತಿತರ ದಾಖಲೆಗಳು ಇದ್ದುದರಿಂದ ಅವರಿಗೆ ದೇವರಾಜ್ ಅವರು ಹಣದ ಪರ್ಸ್ ಮರಳಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: