ದೇವರಾಜ ಅರಸರ ದುರಂತ ಅಂತ್ಯಕ್ಕೆ ಕಾಂಗ್ರೆಸ್ ಕಾರಣ | ರಘು ಆರ್.ಕೌಟಿಲ್ಯ ಆರೋಪ
ಮೈಸೂರು: ಕಾಂಗ್ರೆಸ್ ಡಿ.ದೇವರಾಜ ಅವರನ್ನು ಬಳಸಿಕೊಂಡು, ಕೊನೆಗಾಲದಲ್ಲಿ ಹೀನಾಯವಾಗಿ ಕಂಡಿತು. ಅವರನ್ನು ವ್ಯಕ್ತಿಗತ ತೇಜೋವಧೆ ಮಾಡುವ ಮೂಲಕ ದುರಂತಮಯ ಅಂತ್ಯಕ್ಕೆ ಕಾರಣವಾಯಿತು ಎಂದು ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ರಘು ಆರ್. ಕೌಟಿಲ್ಯ ಆರೋಪಿಸಿದರು.
ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ನಗರದ ಬಿಜೆಪಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಡಿ.ದೇವರಾಜ ಅರಸು ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಾನ ಸಮಾಜವನ್ನು ಕಟ್ಟುವ ಮೂಲಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದ ದೇವರಾಜು ಅರಸು ಅವರ ವಿರುದ್ಧ ಅಪಪ್ರಚಾರಗಳನ್ನು ನಡೆಸಲಾಯಿತು. ಅವರು ಭ್ರಷ್ಟರಾಗಿದ್ದರು ಎಂದೆಲ್ಲ ಬಿಂಬಿಸಲಾಗುತ್ತಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ದೇವರಾಜ ಅರಸರು ಸಮಾನತೆಯ ಸಮಾಜವನ್ನು ಕಟ್ಟುವ ಮೂಲಕ ಜನಪರ ಕಾರ್ಯಕ್ರಮಗಳನ್ನು ನೀಡಿದ್ದರು. ಎಲ್ಲ ವರ್ಗಗಳ ಅಭಿವೃದ್ಧಿಗೂ ಶ್ರಮಿಸಿದರು. ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದರು. 12ನೇ ಶತಮಾನದ ಬಸವಣ್ಣನವರ ಕಲ್ಪನೆಯನ್ನು ಅನುಷ್ಠಾನಕ್ಕೆ ತಂದವರಾಗಿದ್ದಾರೆ. ಅವರ ಚಿಂತನೆಗಳನ್ನು ಎದೆಗೆ ಅಪ್ಪಿಕೊಂಡು, ಅನುಷ್ಠಾನಕ್ಕೆ ತಂದವರು ಬಿ.ಎಸ್.ಯಡಿಯೂರಪ್ಪನವರು ಎಂದು ಅವರು ಹೇಳಿದರು.
ಇನ್ನಷ್ಟು ಸುದ್ದಿಗಳು…
ಕೊವಿಡ್ ಲಸಿಕೆ ಪಡೆದು 20 ದಿನಗಳಲ್ಲಿ ಈ ಲಕ್ಷಣಗಳು ಕಂಡು ಬಂದರೆ ನಿರ್ಲಕ್ಷಿಸದಿರಿ!
ನರ್ಸ್ ನ ನಗ್ನ ಚಿತ್ರ ತೆಗೆದು ಲೈಂಗಿಕ ಕ್ರಿಯೆ ನಡೆಸಲು ಬ್ಲ್ಯಾಕ್ ಮೇಲ್ | ವೈದ್ಯನ ವಿರುದ್ಧ ದೂರು
ರಾಜೀವ್ ಗಾಂಧಿ 77ನೇ ಜನ್ಮ ದಿನಾಚರಣೆ: ವೀರಭೂಮಿಯಲ್ಲಿ ನಮನ ಸಲ್ಲಿಸಿ, ಕಾಲ ಕಳೆದ ರಾಹುಲ್ ಗಾಂಧಿ
ಅಫ್ಘಾನಿಸ್ತಾನದಲ್ಲಿ ಸಿಲುಕಿದ ಕರ್ನಾಟಕ ಮೂಲದ ಇಬ್ಬರು ಕ್ರೈಸ್ತ ಧರ್ಮಗುರುಗಳು!
ಅಫ್ಘಾನ್ ಅಧ್ಯಕ್ಷ ಅಶ್ರಫ್ ಘನಿ ಯಾವ ದೇಶದಲ್ಲಿ ಆಶ್ರಯ ಪಡೆದಿದ್ದು ಗೊತ್ತಾ? | ಕೊನೆಗೂ ಬಯಲಾಯ್ತು ರಹಸ್ಯ