ಇಲ್ಲಿ ದೇವರಿಗೆ ಹೆಣ್ಣಿನ ಬೆತ್ತಲೆ ದೇಹವೇ ನೈವೇದ್ಯ; ಪುಂಡು ಪೋಕರಿಗಳ ವಿಕೃತ ಆಸೆಗೆ ದೇವರ ಬಣ್ಣ
ಯಾದಗಿರಿ: ಇಂತಹ ಆಚರಣೆಗಳನ್ನೆಲ್ಲ ಪ್ರಶ್ನಿಸಿದರೆ ಒಂದೋ ಧರ್ಮ ವಿರೋಧಿ, ಇಲ್ಲವೇ ನಾಸ್ತಿಕ ಎಂಬ ಪಟ್ಟವನ್ನು ಪಡೆಯುವುದು ಖಂಡಿತಾ. ಆದರೆ, ಈ ಘಟನೆಯಂತೂ ಅಮಾನವೀಯವಾಗಿದೆ. ದೇವರು ಎಂದರೆ ಆತ ಸೃಷ್ಟಿಕರ್ತ, ಸಕಲ ಜೀವ ರಾಶಿಗಳಿಗೆ ಆತ ತಂದೆಯಂತೆ. ಈ ತಂದೆ(ದೇವರು)ಯನ್ನು ಮೆಚ್ಚಿಸಲು ಮಕ್ಕಳು ಬೆತ್ತಲೆ ದೇಹವನ್ನು ಪ್ರದರ್ಶಿಸುವ ನೀಚ ಘಟನೆಯೊಂದು ಯಾದಗಿರಿಯ ಸುರಪುರದಲ್ಲಿ ನಡೆದಿದೆ.
ನಡು ಬೀದಿಯಲ್ಲಿ ಮಹಿಳೆಯೋರ್ವಳನ್ನು ಕೇವಲ ಸೊಪ್ಪುಗಳನ್ನು ಮೈಮೇಲೆ ಕಟ್ಟಿ ದೇವರ ಹೆಸರಿನಲ್ಲಿ ಬೆತ್ತಲೆ ಸೇವೆ ಮಾಡಿಸಲಾಗಿದೆ. ದೇವರು ಬೆತ್ತಲೆ ಮಹಿಳೆಯ ದೇಹವನ್ನು ಕಂಡು ಸಂತುಷ್ಟ ಹೊಂದಿದನೋ ಗೊತ್ತಿಲ್ಲ. ಆದರೆ ಭಕ್ತರ ರೂಪದ ಪುಂಡು ಪೋಕರಿ, ಪೂಜಾರಿಗಳಂತೂ ಇಂತಹ ಕೃತ್ಯಕ್ಕೆ ಸಾಕ್ಷಿಯಾಗಿದ್ದಾರೆ. ಇಂತಹ ಆಚರಣೆ ಯಾದಗಿರಿಯ ಹಲವೆಡೆಗಳಲ್ಲಿ ಇನ್ನೂ ಜೀವಂತವಾಗಿದೆ
ದೇವರು ತಾನೇ ಸೃಷ್ಟಿಸಿದ ತನ್ನ ಹೆಣ್ಣು ಮಕ್ಕಳ ಬೆತ್ತಲೆ ದೇಹವನ್ನು ಕಂಡು ಸಂತುಷ್ಟನಾಗುತ್ತಾನೆಯೇ ? ಇಂತಹ ಅನಿಷ್ಠ ಪದ್ಧತಿಗಳು ಇನ್ನೂ ಜೀವಂತವಾಗಿರುವುದು ನಿಜಕ್ಕೂ ಮಾನವ ಕುಲಕ್ಕೆ ಅವಮಾನವಾಗಿದೆ.
ಮೂಢನಂಬಿಕೆಗಳಿಂದಾಗಿ ದೇಶದಲ್ಲಿ ಎಷ್ಟೋ ಅನಾಹುತಗಳು ಇಂದಿಗೂ ನಡೆಯುತ್ತಿದೆ. ಪುಂಡು ಪೋಕರಿಗಳು ತಮ್ಮ ವಿಕೃತ ಆಸೆಗಳನ್ನು ಪೂರೈಸಿಕೊಳ್ಳಲು ಮಾಡಿರುವ ಬೆತ್ತಲೆ ಸೇವೆ ಇಂದಿಗೂ ಚಾಲ್ತಿಯಲ್ಲಿದೆ. ಇದರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕಿದೆ. ಇಲ್ಲವಾದರೆ, ಕರ್ನಾಟಕ ಇನ್ನೊಂದು ಉತ್ತರ ಪ್ರದೇಶವಾಗಿ ಮಾರ್ಪಡುವ ಕಾಲ ಬಹಳ ದೂರವೇನಿಲ್ಲ ಎಂಬ ಮಾತುಗಳು ಸದ್ಯ ಕೇಳಿ ಬಂದಿದೆ.