ದೇವಸ್ಥಾನದಲ್ಲಿ ಭಕ್ತರು ಬ್ರಾಹ್ಮಣರ ಕಾಲು ತೊಳೆಯುವ ಪದ್ಧತಿ: ಕೇರಳ ಹೈಕೋರ್ಟ್​ನಿಂದ ಸುಮೋಟೋ ಕೇಸ್ ದಾಖಲು - Mahanayaka
9:48 PM Thursday 14 - November 2024

ದೇವಸ್ಥಾನದಲ್ಲಿ ಭಕ್ತರು ಬ್ರಾಹ್ಮಣರ ಕಾಲು ತೊಳೆಯುವ ಪದ್ಧತಿ: ಕೇರಳ ಹೈಕೋರ್ಟ್​ನಿಂದ ಸುಮೋಟೋ ಕೇಸ್ ದಾಖಲು

kerala high court
09/02/2022

ಕೊಚ್ಚಿ: ತ್ರಿಪುಣಿತೂರಿನ ಶ್ರೀ ಪೂರ್ಣತ್ರಯೀಶ ದೇವಸ್ಥಾನದಲ್ಲಿ ‘ಪಂತ್ರಂದು ನಮಸ್ಕಾರಂ’ ಎಂಬ ಧಾರ್ಮಿಕ ವಿಧಿವಿಧಾನವೊಂದರಲ್ಲಿ ಭಕ್ತರು ಪಾಪ ಪರಿಹಾರಕ್ಕಾಗಿ 12 ಬ್ರಾಹ್ಮಣರ ಪಾದಗಳನ್ನು ತೊಳೆಯುವ ಪದ್ಧತಿಯಿದೆ ಎಂಬ ಮಾಧ್ಯಮವೊಂದರ ವರದಿ ಆಧರಿಸಿ ಕೇರಳ ಹೈಕೋರ್ಟ್ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿ, ವಿಚಾರಣೆ ಮುಂದುವರಿಸಿದೆ.

ಕೊಚ್ಚಿನ್ ದೇವಸ್ವಂ ಬೋರ್ಡ್​​ನ ಅಧೀನದಲ್ಲಿ ಬರುವ ತ್ರಿಪುಣಿತೂರಿನ ಶ್ರೀ ಪೂರ್ಣತ್ರಯೀಶ ದೇವಸ್ಥಾನದಲ್ಲಿ ‘ಪಂತ್ರಂದು ನಮಸ್ಕಾರಂ’ ಎಂಬ ಧಾರ್ಮಿಕ ವಿಧಿವಿಧಾನವೊಂದರಲ್ಲಿ ಭಕ್ತರು ಪಾಪ ಪರಿಹಾರಕ್ಕಾಗಿ 12 ಬ್ರಾಹ್ಮಣರ ಪಾದಗಳನ್ನು ತೊಳೆಯುವ ಪದ್ಧತಿಯಿದೆ ಎಂದು ಮಾಧ್ಯಮದ ವರದಿ ಹೇಳಿತ್ತು. ಇದೇ ವಿಚಾರವಾಗಿ ಕೇರಳ ಹೈಕೋರ್ಟ್ ಸುಮೋಟೋ ದೂರು ದಾಖಲಿಸಿಕೊಂಡಿದೆ.

ನ್ಯಾಯಮೂರ್ತಿ ಅನಿಲ್ ಕೆ.ನರೇಂದ್ರನ್ ಮತ್ತು ನ್ಯಾಯಮೂರ್ತಿ ಪಿ.ಜಿ.ಅಜಿತ್‌ಕುಮಾರ್ ಅವರನ್ನೊಳಗೊಂಡ ವಿಭಾಗೀಯ ಪೀಠವು ಪ್ರಕರಣದ ವಿಚಾರಣೆ ನಡೆಸಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೊಚ್ಚಿನ್ ದೇವಸ್ವಂ ಬೋರ್ಡ್‌ನ ವಕೀಲರು, ಸುದ್ದಿಯಲ್ಲಿ ಉಲ್ಲೇಖಿಸಿರುವಂತೆ ಭಕ್ತರು ಬ್ರಾಹ್ಮಣರ ಪಾದವನ್ನು ತೊಳೆಯುವುದಿಲ್ಲ. ದೇವಸ್ಥಾನದ ತಂತ್ರಿ 12 ಅರ್ಚಕರ ಪಾದಗಳನ್ನು ತೊಳೆಯುತ್ತಾನೆ ಎಂದಿದ್ದಾರೆ.

ಈ ಬಗ್ಗೆ ಅಫಿಡವಿಟ್ ಸಲ್ಲಿಸಲು ಕೊಚ್ಚಿನ್ ದೇವಸ್ವಂ ಬೋರ್ಡ್‌ನ ವಕೀಲರಿಗೆ ಎರಡು ವಾರಗಳ ಕಾಲಾವಕಾಶ ನೀಡಲಾಗಿದ್ದು, ಫೆ. 25ರಂದು ನ್ಯಾಯಾಲಯವು ಈ ವಿಷಯವನ್ನು ಮತ್ತೊಮ್ಮೆ ವಿಚಾರಣೆ ನಡೆಸಲಿದೆ.




ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಎಟಿಎಂಗೆ ಹಾನಿ ಮಾಡಿ ಹಣ ಕಳವಿಗೆ ಯತ್ನ: ಆರೋಪಿಯ ಬಂಧನ

ಪ್ರಿಯಾಂಕ್​ ಖರ್ಗೆ ಪತ್ನಿಯ ಮೊಬೈಲ್​ ಕಳವು: ದೂರು ದಾಖಲು

ಮೃತ ಗಂಡನ ನಕಲಿ ದಾಖಲೆ ಸಲ್ಲಿಸಿ ಮೂರು ಕೋಟಿ ರೂ. ವಂಚಿಸಿದ ಪತ್ನಿ

ಇಂಟರ್ವ್ಯೂ ಮುಗಿಸಿ ಬರುತ್ತಿದ್ದವನ ಮೇಲೆ ಟ್ರಾಫಿಕ್ ಪೊಲೀಸ್ ಹಲ್ಲೆ: ಯುವಕನ ಕುತ್ತಿಗೆಗೆ ಗಾಯ

ಅಪರಿಚಿತ ವಾಹನ ಡಿಕ್ಕಿ: ಸ್ಥಳದಲ್ಲೇ ಲಾರಿ ಚಾಲಕ ಸಾವು

 

ಇತ್ತೀಚಿನ ಸುದ್ದಿ