“ದೇವಸ್ಥಾನ ತೆರವಿಗೆ ಆದೇಶ ನೀಡಿದ್ದು ಜಿಲ್ಲಾಧಿಕಾರಿ, ವರ್ಗಾವಣೆಯಾಗಿದ್ದು ತಹಶೀಲ್ದಾರ್!” - Mahanayaka

“ದೇವಸ್ಥಾನ ತೆರವಿಗೆ ಆದೇಶ ನೀಡಿದ್ದು ಜಿಲ್ಲಾಧಿಕಾರಿ, ವರ್ಗಾವಣೆಯಾಗಿದ್ದು ತಹಶೀಲ್ದಾರ್!”

uchagani temple
29/09/2021

ಮೈಸೂರು: ಹುಚ್ಚಗಣಿ ಮಹದೇವಮ್ಮ ದೇವಾಲಯ ತೆರವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಥಳೀಯ ಶಾಸಕ ಹರ್ಷವರ್ಧನ್ ಅವರು ಹೊಸ ಟ್ವಿಸ್ಟ್ ನೀಡಿದ್ದು, ದೇವಸ್ಥಾನ ತೆರವಿಗೆ ಆದೇಶ ನೀಡಿದ್ದು, ಜಿಲ್ಲಾಧಿಕಾರಿ. ಆದರೆ ತಹಶೀಲ್ದಾರ್ ನ್ನು ವರ್ಗಾವಣೆ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.

ದೇಗುಲ ಬೀಳಿಸುವುದಕ್ಕೆ  ಆದೇಶ ನೀಡಿರುವುದು ನಂಜನಗೂಡು ತಹಶೀಲ್ದಾರ್ ಮೋಹನ್ ಕುಮಾರಿ ಎಂದು ಭಾವಿಸಿ, ಸರ್ಕಾರ ಅವರನ್ನು ಬೆಂಗಳೂರಿಗೆ ವರ್ಗಾವಣೆ ಮಾಡಿದೆ. ದೇವಸ್ಥಾನ ಬೀಳಿಸುವುದು ಬೇಡ ಎಂದು ತಮ್ಮ ಮೇಲಾಧಿಕಾರಿಯಾದ ಮೈಸೂರು ಜಿಲ್ಲಾಧಿಕಾರಿಗೆ, ತಹಶೀಲ್ದಾರ್ ರಿಪೋರ್ಟ್ ನೀಡಿದ್ದರು ಎಂದು ಹೇಳಲಾಗಿದೆ.

ಮಹದೇವಮ್ಮ ದೇವಸ್ಥಾನವನ್ನು ಉಳಿಸುವಂತೆ ತಹಶೀಲ್ದಾರ್ ಗೆ ರಿಪೋಟ್೯ ಕಳುಹಿಸಿದ್ದೆ. ಅದರಂತೆ ತಹಶೀಲ್ದಾರ್ ಅವರು ಡಿಸಿಗೆ ಪಾಸಿಟಿವ್ ರಿಪೋರ್ಟ್ ಕೊಟ್ಟಿದ್ದಾರೆ. ಆದರೆ, ಯಾವುದೇ ದಾಖಲಾತಿ ಇಲ್ಲದೇ ದೇವಸ್ಥಾನ ಹೇಗೆ ಉಳಿಸುತ್ತೀರಾ? ಎಂದು ಪ್ರಶ್ನಿಸಿ ದೇವಾಲಯ ತೆರವಿಗೆ ಜಿಲ್ಲಾಧಿಕಾರಿ ಆದೇಶ ನೀಡಿದ್ದಾರೆ. ಇದರ ಬಗ್ಗೆ ತಾನು ಸಿಎಂ ಜೊತೆಗೆ ಮಾತನಾಡುತ್ತೇನೆ ಎಂದು ಹರ್ಷವರ್ಧನ್ ಹೇಳಿದ್ದಾರೆ ಎಂದು ವರದಿಯಾಗಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj

ಇನ್ನಷ್ಟು ಸುದ್ದಿಗಳು…

ನಿಮ್ಮ ತಂದೆ ಕೂಡ ಪಂಚೆ ಉಡುವವರಾಗಿರಬಹುದು, ನಿಮ್ಮಂತಹ ಮಗನ ಬಗ್ಗೆ ಅವರೇನು ತಿಳಿಯಬಹುದು? | ಸಿ.ಟಿ.ರವಿಗೆ ಸಿದ್ದು ಗುದ್ದು

ಶಾಕಿಂಗ್ ನ್ಯೂಸ್: ಅಪರಿಚಿತ ತಂಡದಿಂದ ಬೀಡಿ ಬ್ರ್ಯಾಂಚ್ ಗೆ ಹೋಗುತ್ತಿದ್ದ ಬಾಲಕನ ಅಪಹರಣಕ್ಕೆ ಯತ್ನ

ಅತ್ಯಾಚಾರದಿಂದ ಬಾಲಕಿ ಗರ್ಭಿಣಿ: ತಂದೆಗೆ ವಿಷಯ ಹೇಳುತ್ತೇನೆ ಎಂದಿದ್ದಕ್ಕೆ ಯುವಕನಿಂದ ಘೋರ ಕೃತ್ಯ

ಕೃಷ್ಣನ ಚಕ್ರ, ಟಿಪ್ಪುವಿನ ಸಿಂಹಾಸನ ಮಾರಾಟ ಮಾಡಿದ ಆರೋಪಿ ಅರೆಸ್ಟ್!

ಚಿಕ್ಕಮಗಳೂರು: ಪ್ರವಾಸಕ್ಕೆ ತೆರಳಿದ್ದ ವಿದ್ಯಾರ್ಥಿಗಳನ್ನು ತಡೆದು ಸಂಘಪರಿವಾರದ ಸದಸ್ಯರಿಂದ ಹಲ್ಲೆ

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಾಪ್ ಸಂದೇಶ ಕಳುಹಿಸಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ನಾಪತ್ತೆ!

ಕಡಬ: ಯುವತಿಯ ಮೇಲೆ ಅತ್ಯಾಚಾರ, ಗರ್ಭಪಾತ | ಕಾನ್ ಸ್ಟೇಬಲ್ ಅರೆಸ್ಟ್

ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ವಾಟ್ಸಾಪ್ ಸಂದೇಶ ಕಳುಹಿಸಿ ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿ ನಾಪತ್ತೆ!

ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಅಪರಿಚಿತ ವಾಹನ | ನರ್ಸಿಂಗ್ ವಿದ್ಯಾರ್ಥಿ ಸ್ಥಳದಲ್ಲೇ ಸಾವು

19 ತಿಂಗಳ ರಜೆಯ ಬಳಿಕ 1ರಿಂದ 5ನೇ ತರಗತಿವರೆಗೆ ಶಾಲಾರಂಭದ ಸುಳಿವು!

ಇತ್ತೀಚಿನ ಸುದ್ದಿ