ದೇವಸ್ಥಾನದಲ್ಲಿ ಎಸ್‌ ಸಿ ಮಹಿಳೆಗೆ ಪ್ರಾರ್ಥನೆ ಮಾಡಲು ಅವಕಾಶ ನೀಡದ 20 ಅರ್ಚಕರು: ಪ್ರಕರಣ ದಾಖಲು - Mahanayaka

ದೇವಸ್ಥಾನದಲ್ಲಿ ಎಸ್‌ ಸಿ ಮಹಿಳೆಗೆ ಪ್ರಾರ್ಥನೆ ಮಾಡಲು ಅವಕಾಶ ನೀಡದ 20 ಅರ್ಚಕರು: ಪ್ರಕರಣ ದಾಖಲು

dalitha mahile
19/02/2022

ಚೆನ್ನೈ: ಕಡಲೂರು ಜಿಲ್ಲೆಯಲ್ಲಿರುವ ಚಿದಂಬರಂ ನಟರಾಜ ದೇವಸ್ಥಾನದ ಆವರಣದಲ್ಲಿ ಎಸ್‌ಸಿ ಮಹಿಳೆಯೊಬ್ಬರು ಪ್ರಾರ್ಥನೆ ಮಾಡುವುದನ್ನು ತಡೆದಿರುವ ಘಟನೆ ನಡೆದಿದೆ.

ಈ ಘಟನೆ ಫೆ 15 ನಡೆದಿದ್ದು, ಮಹಿಳೆ ನೀಡಿದ ದೂರಿನ ಆಧಾರದ ಮೇಲೆ 20 ಅರ್ಚಕರ ಮೇಲೆ ಪ.ಜಾತಿ ಮತ್ತು ಪ.ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ 1989ರ ಅಡಿಯಲ್ಲಿ ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಕಡಲೂರು ಪೊಲೀಸ್ ವರಿಷ್ಠಾಧಿಕಾರಿ ತಿರು ಸಿ.ಶಕ್ತಿ ಗಣೇಶನ್ ಹೇಳಿದ್ದಾರೆ.

ನಾವು ಅರ್ಚಕರ ವಿರುದ್ದ ಎಸ್‌ಸಿ,ಎಸ್‌ಸಿ ಕಾಯ್ದೆಯ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಇದು ಖಾಸಗಿ ದೇವಸ್ಥಾನ, ಈ ವೇಳೆ ಭಕ್ತರು ಮತ್ತು ಅರ್ಚಕರ ನಡುವೆ ಕೆಲಕಾಲ ಘರ್ಷಣೆ ನಡೆಯಿತು. ಕೋವಿಡ್ -19 ಕಾರಣ ದೇವಾಲಯದ ಕಮಿಟಿಯು ದೇವಾಲಯದ ಪ್ರವೇಶಕ್ಕೆ ಕೆಲವು ನಿರ್ಬಂಧಗಳನ್ನು ವಿಧಿಸಿದೆ ಎಂದು ಅರ್ಚಕರು ಹೇಳಿದ್ದಾರೆ. ಈ ವಿಚಾರವನ್ನು ಜಿಲ್ಲಾಧಿಕಾರಿಗೂ ತಿಳಿಸಿದ್ದೇವೆ ಎಂದು ಎಸ್ಪಿ ಗಣೇಶನ್ ಹೇಳಿದ್ದಾರೆ.


Provided by

ಘಟನೆಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಒಂದರಲ್ಲಿ, ಒಬ್ಬ ಮಹಿಳೆ ಅಳುತ್ತಿರುವುದನ್ನು ಕಾಣಬಹುದು, ಅವರನ್ನು ದೀಕ್ಷಿತರು ಎಂದು ಕರೆಯಲ್ಪಡುವ ಪುರೋಹಿತರು, ಮತ್ತು ಸ್ಥಳೀಯರ ಗುಂಪು ಸುತ್ತುವರಿದಿರುವುದನ್ನು ಕಾಣಬಹುದಾಗಿತ್ತು. ದೇವಾಲಯಕ್ಕೆ ಪ್ರವೇಶಿಸುವ ವಿಚಾರದಲ್ಲಿ ದೀಕ್ಷಿತರ ಮತ್ತು ಮಹಿಳೆಯರ ನಡುವೆ ತೀವ್ರ ವಾಗ್ವಾದವೂ ನಡೆದಿದೆ.

ಇನ್ನೊಂದು ವಿಡೀಯೊದಲ್ಲಿ, ಮಹಿಳೆ ನಿರ್ಬಂಧಿತ ಪ್ರದೇಶಕ್ಕೆ ಹೋಗಲು ಮೆಟ್ಟಿಲುಗಳನ್ನು ಹತ್ತಲು ಪ್ರಯತ್ನಿಸುತ್ತಿರುವಾಗ ಪುರೋಹಿತರ ಗುಂಪು ಅವಳನ್ನು ಕೂಗುತ್ತಿರುವುದನ್ನೂ ಕಾಣಬಹುದಾಗಿದೆ. ಅರ್ಚಕರು ತನ್ನನ್ನು ಬೆದರಿಸಿ ದೇವಸ್ಥಾನದ ಆವರಣದಿಂದ ವಸ್ತುವನ್ನು ಕದ್ದಿದ್ದಾರೆ ಎಂದು ಸುಳ್ಳು ಆರೋಪ ಹೊರಿಸುತ್ತಿದ್ದಾರೆ ಎಂದು ಮಹಿಳೆ ದೂರು ದಾಖಲಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Bk3PAoJFRvJLUSBPd39m1C

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಕೆಳಜಾತಿಯ ಯುವಕನೊಂದಿಗೆ ಪುತ್ರಿ ಮದುವೆ: ರುಬ್ಬುವ ಕಲ್ಲು ಎತ್ತಿ ಹಾಕಿ ಹೆಂಡತಿ ಮಕ್ಕಳ ಹತ್ಯೆಗೈದು ತಾನೂ ಆತ್ಮಹತ್ಯೆಗೈದ ತಂದೆ

ಆಸ್ತಿ ವಿಚಾರ: ಹೆತ್ತ ತಾಯಿಗೆ ಕ್ರೂರವಾಗಿ ಥಳಿಸಿದ ಮಗ

ಬಹು ನಿರೀಕ್ಷಿತ ‘ಜೇಮ್ಸ್’ ಚಿತ್ರ ಬಿಡುಗಡೆ ದಿನಾಂಕ ಫಿಕ್ಸ್

ಮಹಿಳೆ ಶವ ಪತ್ತೆ: ಅತ್ಯಾಚಾರ, ಕೊಲೆ ಶಂಕೆ

ಬಿಹಾರದಲ್ಲಿ ಅಗ್ನಿ ಅವಘಡ: ಹೊತ್ತಿ ಉರಿದ ಖಾಲಿ ರೈಲು

 

ಇತ್ತೀಚಿನ ಸುದ್ದಿ