ದೇವಸ್ಥಾನಕ್ಕೆ 20 ಸಾವಿರ ರೂಪಾಯಿ ದೇಣಿಗೆ ನೀಡಿದ ಭಿಕ್ಷುಕಿ! - Mahanayaka
3:02 AM Wednesday 11 - December 2024

ದೇವಸ್ಥಾನಕ್ಕೆ 20 ಸಾವಿರ ರೂಪಾಯಿ ದೇಣಿಗೆ ನೀಡಿದ ಭಿಕ್ಷುಕಿ!

chikkamaglore
23/11/2021

ಚಿಕ್ಕಮಗಳೂರು: ಆ ವೃದ್ಧೆ ದಿನಾ ದೇವಸ್ಥಾನದ ಬಳಿಗೆ ಬರುತ್ತಿದ್ದರಂತೆ. ಎಲ್ಲರೂ ಆಕೆ ಭಿಕ್ಷೆ ಬೇಡಲು ಬರುತ್ತಿದ್ದಾಳೆ ಅಂದುಕೊಂಡು ದೇವಸ್ಥಾನದ ಬಳಿಯಿಂದ ಓಡಿಸಿದ ಘಟನೆ ಕೂಡ ನಡೆದಿತ್ತು ಎನ್ನಲಾಗಿದೆ. ಆದರೆ, ಆ ವೃದ್ಧೆ ದೇವಸ್ಥಾನಕ್ಕೆ ದೇಣಿಗೆ ನೀಡಲು ದೇವಸ್ಥಾನದ ಬಳಿಗೆ ಬರುತ್ತಿದ್ದಳು ಎನ್ನುವುದು ಇದೀಗ ತಿಳಿದು ಎಲ್ಲರೂ ಅಚ್ಚರಿಗೊಳಗಾಗಿದ್ದಾರೆ.

ಕಡೂರು ತಾಲೂಕಿನ ಕೋಟೆ ಪಾತಾಳ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಆಗಮಿಸಿದ ಭಿಕ್ಷುಕಿ ವೃದ್ಧೆ ಆಡಳಿತ ಮಂಡಳಿಯ ಅಧ್ಯಕ್ಷರನ್ನು ಹುಡುಕಾಡಿದ್ದು, ಬಳಿಕ ಇಲ್ಲಿನ ಸ್ವಾಮೀಜಿಯ ಕೈಗೆ ತನ್ನ ದುಡಿಮೆಯ 20 ಸಾವಿರ ರೂಪಾಯಿಯನ್ನು ನೀಡಿ, ಆಂಜನೇಯನಿಗೆ ಬೆಳ್ಳಿಯ ಮುಖವಾಡ ಮಾಡಿಸಿ ಎಂದು ಹೇಳಿ ತೆರಳಿದ್ದಾರೆ.

500 ರೂಪಾಯಿಯ 40 ನೋಟುಗಳನ್ನು ಬಡ ಭಿಕ್ಷುಕಿ ದೇವಸ್ಥಾನಕ್ಕೆ ದೇಣಿಗೆ ನೀಡಿದ್ದಾರೆ. ಜನರು ಯಾರಿಗಾದರೂ 100 ರೂಪಾಯಿ ಸಹಾಯ ಮಾಡಿದರೂ, ಫೇಸ್ ಬುಕ್ ವಾಟ್ಸಾಪ್ ಗಳಲ್ಲಿ ಫೋಟೋ ತೆಗೆಸಿಕೊಂಡು ಪ್ರಚಾರ ಮಾಡುವ ಕಾಲದಲ್ಲಿ ಈ ಬಡ ವೃದ್ಧೆ ದೇವಸ್ಥಾನಕ್ಕೆ 20 ಸಾವಿರ ದೇಣಿಗೆ ನೀಡಿ ತನ್ನ ಪಾಡಿಗೆ ತಾನು ಹೊರಟು ಹೋಗಿ ಅಚ್ಚರಿ ಮೂಡಿಸಿದರು.

ಕೊಳೆಯಾದ ಬಟ್ಟೆ, ಎಣ್ಣೆ ಕಾಣದ ಕೂದಲು, ನಿಸ್ತೇಜ ಕಣ್ಣುಗಳು, ನಡೆಯಲು ಕೈಯಲ್ಲೊಂದು ಊರುಗೋಲು ಹಿಡಿದು ಬಂದ ವೃದ್ಧೆ, ತಾನು ಬೇಡುವುದು ಮಾತ್ರವಲ್ಲ, ಕೊಡುವ ಗುಣ ಕೂಡ ತನ್ನ ಬಳಿ ಇದೆ ಎನ್ನುವುದನ್ನು ತೋರಿಸಿದ್ದಾರೆ. ಅವರ ಮುಗ್ದ ಮನಸ್ಸಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಸ್ಕೂಲ್ ಬಸ್ ತಪ್ಪಿ ಹೋಯಿತು ಎಂದು ಆತ್ಮಹತ್ಯೆ ಮಾಡಿಕೊಂಡ ಬಾಲಕ!

ಮಂಗಳೂರು: 8 ವರ್ಷದ ಬಾಲಕಿಯ ಹತ್ಯೆ ಪ್ರಕರಣ | 20 ಮಂದಿ ಪೊಲೀಸ್ ವಶಕ್ಕೆ

ಸೆಲ್ಫಿ ವಿಡಿಯೋಗಾಗಿ ಪ್ರಾಣವನ್ನೇ ಕಳೆದುಕೊಂಡ ಬಾಲಕ

ರಾಜ್ಯ ಪ್ರವಾಹ ಸಂಕಷ್ಟದಲ್ಲಿರುವಾಗ ಬಿಜೆಪಿ—ಕಾಂಗ್ರೆಸ್ ನ ಬೇಜವಾಬ್ದಾರಿಯ ಜನ‘ಜಾತ್ರೆ’

ಮಾಂಸಾಹಾರದ ಬಗ್ಗೆ ಹಿರಿಯ ಪೇಜಾವರ ಶ್ರೀಗಳು ಏನು ಹೇಳಿದ್ದರು? | ವಿಡಿಯೋ ವೈರಲ್

ಕಪ್ಪದ ಮಾನಿ ಹಂದ್ರನ ಬೇಟಿ/ ಪೊದು ಸಂಬಂಧ/ಮದುವೆ: ತುಳುನಾಡಿನ ಅವಳಿ ವೀರರು ಕಾನದ-ಕಟದರು: ಸಂಚಿಕೆ: 07

ಇತ್ತೀಚಿನ ಸುದ್ದಿ