ದೇವೇಗೌಡ ಪ್ರಧಾನಿಯಾಗಲು ಕಾಂಗ್ರೆಸ್ ಕಾರಣ: ಡಿ.ಕೆ. ಶಿವಕುಮಾರ್ - Mahanayaka
5:02 AM Wednesday 11 - December 2024

ದೇವೇಗೌಡ ಪ್ರಧಾನಿಯಾಗಲು ಕಾಂಗ್ರೆಸ್ ಕಾರಣ: ಡಿ.ಕೆ. ಶಿವಕುಮಾರ್

dk shivakumar
25/12/2021

ಹಾಸನ: ಜೆಡಿಎಸ್‌ನ ಎಚ್.ಡಿ. ದೇವೇಗೌಡರನ್ನು ಪ್ರಧಾನಿ ಮಾಡಲು ಕಾಂಗ್ರೆಸ್ ಪಕ್ಷ ಕಾರಣ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಹೇಳಿದ್ದಾರೆ.

ಹೊಳೆನರಸೀಪುರದಲ್ಲಿ ಮೇಕೆದಾಟು ಯೋಜನೆ ಸಂಬಂಧ ಪಾದಯಾತ್ರೆ ಹಮ್ಮಿಕೊಳ್ಳುವ ಬಗ್ಗೆ ಕರೆದಿರುವುದು ಸಭೆಯಲ್ಲಿ ಮಾತನಾಡಿದ ಅವರು, ನಮ್ಮ‌ ರೇವಣ್ಣ ಯಾವಾಗಲೂ ನಿಂಬೆಹಣ್ಣು ಇಟ್ಟುಕೊಂಡಿರುತ್ತಾರೆ ನೋಡಿದ್ದೀರಾ ಎಂದು ಕಾರ್ಯಕರ್ತರಿಗೆ ಕೇಳಿದರು.

ಎಲ್ಲಾ ಹುಳಿಗಿಂತ ನಿಂಬೆಹಣ್ಣಿನ ಹುಳಿ ಶ್ರೇಷ್ಠ, ಎಲ್ಲ ದೇವರಲ್ಲಿ ಪರಮ ದೇವರು ಈಶ್ವರ. ಆದರೆ ಜನರ ನಂಬಿಕೆಗಿಂತ ದೊಡ್ಡಗುಣ ಬೇರೆ ಇಲ್ಲ. ಇನ್ನು ಈ ಡಿ.ಕೆ. ಶಿವಕುಮಾರ್ ಜೊತೆ ನೀವು ನಿಲ್ಲುತ್ತೀರಿ ಎಂದು ಹೊಳೆನರಸೀಪುರಕ್ಕೆ ನಂಬಿಕೆಯಿಂದ ಬಂದಿದ್ದೇನೆ ಎಂದರು.

ಹೊಳೆನರಸೀಪುರದ ಜನರ ಜೊತೆ ರಾಜಕೀಯವಾಗಿ ನಿಲ್ಲಲು ನಿಮ್ಮ ಮುಂದೆ ಭಿಕ್ಷೆ ಕೇಳಲು ಬಂದಿದ್ದೇನೆ, ನಾವು ಸರಿಯಾಗಿ ಅಧಿಕಾರ ನಡೆಸಲಿಲ್ಲ ಎಂದು ಸೋಲಿಸಿದರು, ನಾನು ಸೋತಿದ್ದೇನೆ, ಇದೆಲ್ಲ ರಾಜಕಾರಣದ ಇತಿಹಾಸದಲ್ಲಿ ಬೇಕಾದಷ್ಟು ಆಗಿದೆ. ದೇವೇಗೌಡರು, ಶ್ರೀಕಂಠಯ್ಯ, ಪುಟ್ಟಸ್ವಾಮಿಗೌಡ ಎಲ್ಲರೂ ಈ ಜಿಲ್ಲೆಯಲ್ಲಿ ರಾಜಕಾರಣ ಮಾಡಿದ್ದಾರೆ ಎಂದು ಹೇಳಿದರು.

ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬಂದರೆ ಯಾವುದೋ ಒಂದು ವರ್ಗ ಅಧಿಕಾರಕ್ಕೆ ಬಂದ ಹಾಗೆ, ನಿಮ್ಮ‌ ನೋವನ್ನು ಅನೇಕ ನಾಯಕರು ನಮ್ಮ ಬಳಿ ಬಂದು ಹೇಳುತ್ತಿದ್ದಾರೆ. ನಿಮ್ಮ ರಕ್ಷಣೆ ಮಾಡುವ ಕೆಲಸ ಕಾಂಗ್ರೆಸ್ ಪಕ್ಷ ಮಾಡಲಿದೆ ಎಂದರು.

ಇನ್ನು ಬೆಂಗಳೂರಿನಿಂದ ಮೇಕೆದಾಟುವರೆಗೂ ಪಾದಯಾತ್ರೆ ಮಾಡಲು ಹೇಳಲು ಇಲ್ಲಿಗೆ ಬಂದಿದ್ದೇನೆ, ನಾನು ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆ ಇಟ್ಟಿದ್ದೇನೆ. ನೀವೆಲ್ಲ ದೊಡ್ಡ ಮನಸ್ಸು ಮಾಡಿ ನೀವು ನನಗೆ ಆಶೀರ್ವಾದ ಮಾಡಬೇಕು, ನೀವೆಲ್ಲ ಮೇಕೆದಾಟು ಪಾದಯಾತ್ರೆಗೆ ಬರಬೇಕು ಎಂದು ಕೈಮುಗಿದು ಹೊಳೆನರಸೀಪುರದ ಜನರಲ್ಲಿ ಡಿ.ಕೆ. ಶಿವಕುಮಾರ್ ಮನವಿ ಮಾಡಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DbJM9kayC1K4utc3ntXPdh

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮೂಡುಬಿದಿರೆ: ಎಸ್​ ಕೆಎಫ್​ ಕಾರ್ಖಾನೆಯಿಂದ ತೊಂದರೆ: ಗ್ರಾಮಸ್ಥರಿಂದ ಅಹೋರಾತ್ರಿ ಪ್ರತಿಭಟನೆ

ಉತ್ತರಾಖಂಡ್: ಸಚಿವ ಹರಕ್ ಸಿಂಗ್, ಶಾಸಕರೊಬ್ಬರ ದಿಢೀರ್ ರಾಜೀನಾಮೆ

ಒಂದೇ ಕಾಲೇಜಿನ 33 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ದೃಢ

ಸ್ನೇಹಿತನಿಂದಲೇ ಯುವಕನ ಕೊಲೆ: ಆರೋಪಿಯ ಬಂಧನ

ತಿಮಿಂಗಿಲ ವಾಂತಿ ಮಾರಾಟಕ್ಕೆ ಯತ್ನ: ಮೂವರ ಬಂಧನ​

ಚಾರ್ಮಾಡಿ ಘಾಟ್:  ಬಸ್ಸಿನಲ್ಲಿಯೇ ಕಂಡೆಕ್ಟರ್ ಗೆ ಹೃದಯಾಘಾತ

ಇತ್ತೀಚಿನ ಸುದ್ದಿ