ದೇವೇಂದ್ರ ಫಡ್ನವೀಸ್ ಔರಂಗಜೇಬ್ ನಷ್ಟೇ ಕ್ರೂರ: ಕಾಂಗ್ರೆಸ್ ಆಪಾದನೆ

ಮಹಾರಾಷ್ಟ್ರ ಕಾಂಗ್ರೆಸ್ ಮುಖ್ಯಸ್ಥ ಹರ್ಷವರ್ಧನ್ ಸಪ್ಕಲ್ ಅವರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರನ್ನು ಮೊಘಲ್ ಚಕ್ರವರ್ತಿ ಔರಂಗಜೇಬಲ್ಬ್ ಗೆ ಹೋಲಿಸುವ ಮೂಲಕ ರಾಜಕೀಯ ಬಿರುಗಾಳಿಯನ್ನು ಹುಟ್ಟುಹಾಕಿದ್ದಾರೆ. ಅವರ ಹೇಳಿಕೆಗೆ ಬಿಜೆಪಿಯಿಂದ ತೀವ್ರ ವಿರೋಧ ವ್ಯಕ್ತವಾಗಿದ್ದು, ಕಾಂಗ್ರೆಸ್ ಮಹಾರಾಷ್ಟ್ರದ ಅಸ್ಮಿತೆಯನ್ನು ಅವಮಾನಿಸುತ್ತಿದೆ ಮತ್ತು ರಾಜಕೀಯ ಚರ್ಚೆಯಲ್ಲಿ ಹೊಸ ಕೆಳಮಟ್ಟಕ್ಕೆ ಇಳಿದಿದೆ ಎಂದು ಆರೋಪಿಸಿದೆ.
ಔರಂಗಜೇಬನು ಒಬ್ಬ ಕ್ರೂರ ಆಡಳಿತಗಾರನಾಗಿದ್ದನು. ಅವರು ತಮ್ಮ ಸ್ವಂತ ತಂದೆಯನ್ನು ಜೈಲಿಗೆ ಹಾಕಿದವ್ರು ಮತ್ತು ಯಾವಾಗಲೂ ಧರ್ಮವನ್ನು ಸಾಧನವಾಗಿ ಬಳಸಿದ್ದರು ಎಂದು ಸಪ್ಕಲ್ ಹೇಳಿದ್ದಾರೆ. “ಇಂದು, ದೇವೇಂದ್ರ ಫಡ್ನವೀಸ್ ಅಷ್ಟೇ ಕ್ರೂರರಾಗಿದ್ದಾರೆ. ಅವನು ಧರ್ಮದ ಸಹಾಯವನ್ನೂ ತೆಗೆದುಕೊಳ್ಳುತ್ತಾನೆ. ಆದ್ದರಿಂದ, ಔರಂಗಜೇಬ್ ಮತ್ತು ದೇವೇಂದ್ರ ಫಡ್ನವೀಸ್ ಅವರ ಆಡಳಿತವು ಒಂದೇ ಆಗಿದೆ” ಎಂದು ಅವರು ಹೇಳಿದ್ದಾರೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಬಿಜೆಪಿ ಮುಖ್ಯಸ್ಥ ಚಂದ್ರಶೇಖರ್ ಬವಾನ್ಕುಲೆ, ಸಪ್ಕಲ್ ಅವರ ಹೇಳಿಕೆಯನ್ನು “ಅತ್ಯಂತ ಬಾಲಿಶ ಮತ್ತು ಬೇಜವಾಬ್ದಾರಿಯುತ” ಎಂದು ತಳ್ಳಿಹಾಕಿದ್ದಾರೆ. ಕಾಂಗ್ರೆಸ್ ರಾಜ್ಯದ ರಾಜಕೀಯ ಸಂಸ್ಕೃತಿಗೆ ಕಳಂಕ ತಂದಿದೆ ಎಂದು ವಾದಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj