ದೇವೇಂದ್ರ ಫಡ್ನವೀಸ್ ನೇತೃತ್ವದ ಮಹಾರಾಷ್ಟ್ರ ಸಚಿವ ಸಂಪುಟ ವಿಸ್ತರಣೆ: 9 ಸಚಿವರ ಸೇರ್ಪಡೆ
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ನೇತೃತ್ವದ ರಾಜ್ಯ ಸಚಿವ ಸಂಪುಟವನ್ನು ಭಾನುವಾರ ವಿಸ್ತರಿಸಲಾಗಿದ್ದು, ಮಹಾಯುತಿ ನಾಯಕರು ನಾಗ್ಪುರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಫಡ್ನವೀಸ್ ಅವರಲ್ಲದೆ, ಉಪಮುಖ್ಯಮಂತ್ರಿಗಳಾದ ಏಕನಾಥ್ ಶಿಂಧೆ ಮತ್ತು ಅಜಿತ್ ಪವಾರ್ ಕೂಡ ಉಪಸ್ಥಿತರಿದ್ದರು.
ಒಟ್ಟು 39 ಸಚಿವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಯಿತು. ಅವರಲ್ಲಿ ಬಿಜೆಪಿಯ ಚಂದ್ರಶೇಖರ್ ಬವಾನ್ಕುಲೆ, ಪಂಕಜಾ ಮುಂಡೆ, ನಿತೇಶ್ ರಾಣೆ, ಶಿವಸೇನೆಯ ಗುಲಾಬ್ರಾವ್ ಪಾಟೀಲ್, ಉದಯ್ ಸಮಂತ್ ಮತ್ತು ಎನ್ಸಿಪಿಯ ಧನಂಜಯ್ ಮುಂಡೆ ಮತ್ತು ಬಾಬಾಸಾಹೇಬ್ ಪಾಟೀಲ್ ಸೇರಿದ್ದಾರೆ.
ಶಿಂಧೆ ಸೇನಾ ಸಚಿವರಲ್ಲಿ ಉದಯ್ ಸಮಂತ್, ಶಂಭುರಾಜೆ ದೇಸಾಯಿ, ಗುಲಾಬ್ರಾವ್ ಪಾಟೀಲ್, ದಾದಾ ಭೂಸೆ ಮತ್ತು ಸಂಜಯ್ ರಾಥೋಡ್ ಸೇರಿದ್ದಾರೆ. ಸಂಜಯ್ ಶಿರ್ಸಾತ್, ಭರತ್ ಗೋಗವಾಲೆ, ಪ್ರಕಾಶ್ ಅಬಿತ್ಕರ್, ಯೋಗೇಶ್ ಕದಮ್, ಆಶಿಶ್ ಜೈಸ್ವಾಲ್ ಮತ್ತು ಪ್ರತಾಪ್ ಸರ್ನಾಯಕ್ ಕೂಡ ಪ್ರಮಾಣ ವಚನ ಸ್ವೀಕರಿಸಿದರು.
ದೀಪಕ್ ಕೇಸರ್ಕರ್, ತಾನಾಜಿ ಸಾವಂತ್ ಮತ್ತು ಅಬ್ದುಲ್ ಸತ್ತಾರ್ ಸೇರಿದಂತೆ ಕೆಲವು ಗಮನಾರ್ಹ ಶಿವಸೇನೆ ನಾಯಕರು ಈ ಬಾರಿ ಕ್ಯಾಬಿನೆಟ್ ಗೆ ಮರಳಲಿಲ್ಲ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj