ಮಗುಚಿ ಬಿದ್ದ ಟ್ರಕ್: 16 ಜನರ ದಾರುಣ ಸಾವು | ದೇವಸ್ಥಾನದ ಎದುರೇ ನಡೆಯಿತು ಘಟನೆ
15/02/2021
ಮುಂಬೈ: ಪಪ್ಪಾಯಿ ತುಂಬಿದ ಟ್ರಕ್ ಮಗುಚಿ ಬಿದ್ದ ಪರಿಣಾಮ 16 ಮಂದಿ ದಾರುಣವಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಜಲ್ಗಾಂವ್ ಜಿಲ್ಲೆಯಲ್ಲಿ ಭಾನುವಾರ ಮಧ್ಯರಾತ್ರಿ ನಡೆದಿದ್ದು, ಅಪಘಾತದಲ್ಲಿ 5 ಮಂದಿಯ ಸ್ಥಿತಿ ಗಂಭೀರವಾಗಿದೆ.
ಯವಾಲ್ ತಾಲೂಕಿನ ಕಿಂಗೌನ್ ಗ್ರಾಮದ ದೇವಸ್ಥಾನದ ಎದುರೇ ಈ ಘಟನೆ ಸಂಭವಿಸಿದೆ. ಪಪ್ಪಾಯಿ ತುಂಬಿದ ಟ್ರಕ್ ನಲ್ಲಿ 21 ಜನರು ಪ್ರಯಾಣಿಸುತ್ತಿದ್ದರು. ಈ ಪೈಕಿ 16 ಮಂದಿ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಮೃತರೆಲ್ಲರು ಜಲ್ಗಾಂವ್ ಜಿಲ್ಲೆಯ ಅಭೋದಾ, ಕೆರ್ಹಾಲಾ ಮತ್ತು ರೆವೆರಾ ಮೂಲದ ಕಾರ್ಮಿಕರು ಎಂದು ತಿಳಿದುಬಂದಿದೆ. ಘಟನೆಯಲ್ಲಿ 5 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ.