ದೇವಿಯ ಚಿನ್ನಾಭರಣ, ಕಾಣಿಕೆ ಡಬ್ಬಿ ದೋಚಿ ಪರಾರಿಯಾದ ಕಳ್ಳರು! - Mahanayaka

ದೇವಿಯ ಚಿನ್ನಾಭರಣ, ಕಾಣಿಕೆ ಡಬ್ಬಿ ದೋಚಿ ಪರಾರಿಯಾದ ಕಳ್ಳರು!

crime
05/08/2022

ಹೆಬ್ರಿ: ಶಿವಪುರದ ಗ್ರಾಮದ ಬ್ಯಾಣ ಎಂಬಲ್ಲಿರುವ ಗದ್ದಿಗೆ ಅಮ್ಮನವರ ದೇವಸ್ಥಾನಕ್ಕೆ ಆ.4ರಂದು ರಾತ್ರಿ ವೇಳೆ ನುಗ್ಗಿದ ಕಳ್ಳರು ದೇವಿಯ ಚಿನ್ನಾಭರಣ ಕಳವುಗೈದಿರುವ ಘಟನೆ ನಡೆದಿದೆ.


Provided by

ದೇವಸ್ಥಾನದ ಎದುರಿನ ಬಾಗಿಲಿನ ಬೀಗ ಮುರಿದು ಒಳ ಪ್ರವೇಶಿಸಿದ ಕಳ್ಳರು, ದೇವಿಯ ಮೂರ್ತಿಗೆ ಹಾಕಿರುವ ಚಿನ್ನದ ಕರಿಮಣಿ, 3 ಚಿನ್ನದ ಸಣ್ಣ ಸರ ಹಾಗೂ ಚಿನ್ನದ ತಾಳಿ ಇರುವ ಬೆಳ್ಳಿಯ ಸರ ಹಾಗೂ ಎರಡು ಕಾಣಿಗೆ ಡಬ್ಬಿಗಳನ್ನು ಕಳವು ಮಾಡಿದ್ದಾರೆ.

ಇವುಗಳ ಒಟ್ಟು ಮೌಲ್ಯ 60,000ರೂ. ಎಂದು ದೂರಲಾಗಿದೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Provided by

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IaxQSuNxGHREVEoloSpDOO

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ