ದೇವಿ ವೇಷ ಧರಿಸಿ ತ್ರಿಶೂಲ ಹಿಡಿದು ನಿಂತ ಸಂಜನಾ ಗಲ್ರಾನಿ: ಏನ್ ವಿಶೇಷ?
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಸಂಜನಾ ಗಲ್ರಾನಿ(Sanjana Galrani )ಇದೀಗ ದೇವಿ ವೇಷದಲ್ಲಿ ಕಾಣಿಸಿಕೊಂಡಿದ್ದು, ಇಂದಿನಿಂದ ನವರಾತ್ರಿ ಆರಂಭಗೊಂಡಿದ್ದು, ಹೀಗಾಗಿ ವಿಶೇಷವಾಗಿ ಅವರು ಹಬ್ಬದ ಶುಭಾಶಯಗಳನ್ನು ಹೇಳಿದ್ದಾರೆ. ಸೀರೆ ಧರಿಸಿ ದೇವಿಯಂತೆ ತ್ರಿಶೂಲ ಹಿಡಿದು ಅವರು ಫೋಟೋಗೆ ಪೋಸ್ ನೀಡಿದ್ದಾರೆ.
ಇನ್ನೂ ಕೆಲವು ದಿನಗಳ ಹಿಂದೆ ಕ್ಯಾಬ್ ಡ್ರೈವರ್ ಜೊತೆಗೆ ನಡೆದ ಸಣ್ಣ ಗಲಾಟೆ ಮಾಧ್ಯಮಗಳಲ್ಲಿ ದೊಡ್ಡ ಸುದ್ದಿಯಾಗಿತ್ತು. ಈ ವಿಚಾರವಾಗಿ ಲೈವ್ ನಲ್ಲಿ ಕರೆ ಮಾಡಿ ಸಂಜನಾ ಜೊತೆಗೆ ಒರಟು ಭಾಷೆಯಲ್ಲಿ ಮಾತನಾಡಿದ್ದ ಸುದ್ದಿವಾಹಿನಿಯೊಂದರ ಪ್ರಮುಖ ನಿರೂಪಕ ವಿರುದ್ಧ ಸಂಜನಾ ತಿರುಗಿ ಬಿದ್ದಿದ್ದರು. ನಮ್ಮ ಕೈ ಕಾಲು ಹಿಡಿದು ಚಾನೆಲ್ ನಲ್ಲಿ ಮಾತನಾಡಿಸುತ್ತೀರಿ. ಮಾತನಾಡುವ ವೇಳೆ ಕನಿಷ್ಟ ಮರ್ಯಾದೆ ಕೊಡದೇ ಮಾತನಾಡಿಸುತ್ತೀರಿ. ಮೊದಲು ಹೇಗೆ ಮಾತನಾಡಬೇಕು ಎಂದು ಕಲಿಯಿರಿ ಎಂದು ನಿರೂಪಕಗೆ ಪಾಠ ಮಾಡಿದ್ದರು. ಇದಕ್ಕೆ ನಿರೂಪಕ ಕೂಡ, ನೀವು ನನಗೆ ಹೇಗೆ ಮಾತನಾಡಬೇಕು ಎಂದು ಹೇಳಬೇಡಿ ಎಂದ ಘಟನೆ ಕೂಡ ನಡೆದಿತ್ತು.
ಇದರ ಬೆನ್ನಲ್ಲೇ ಇದೀಗ ಸಂಜನಾ ಇನ್ ಸ್ಟಾ ಗ್ರಾಮ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಕೆಂಪು ಬಣ್ಣದ ಸೀರೆ, ಆಭರಣಗಳನ್ನು ಉಟ್ಟು, ಕೈಯಲ್ಲಿ ಕಮಲ, ತ್ರಿಶೂಲ ಹಿಡಿದು, ಕಿರೀಟ ತೊಟ್ಟು ದೇವಿಯಂತೆ ಕಾಣಿಸಿಕೊಂಡಿದ್ದಾರೆ. ಈ ವಿಡಿಯೋವನ್ನು ಪ್ರತಿಭಾವಂತರ ತಂಡದೊಂದಿಗೆ ಸೇರಿ ಮಾಡಿರುವುದಾಗಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/GprkhpfFmuL8YDKlAEmru9
ಇನ್ನಷ್ಟು ಸುದ್ದಿಗಳು…
ಪ್ರಚೋದನಾತ್ಮಕ ಅವಹೇಳನಾಕಾರಿ ಭಾಷಣ: ಚೈತ್ರಾ ಕುಂದಾಪುರ ವಿರುದ್ಧ ದೂರು ದಾಖಲು
ಬಡ ಕುಟುಂಬದ ಪುಟಾಣಿ ರಿಷಿಕಾಳ ಚಿಕಿತ್ಸೆಗೆ ನೀವು ನೆರವಾಗುವಿರಾ?
ಅಪ್ರಾಪ್ತ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ ಎಸಗಿ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹರಿಯಬಿಟ್ಟ ಕಿಡಿಗೇಡಿ
ಟೈಟ್ ಹಾಫ್ ಜೀನ್ಸ್ ಧರಿಸಿ ಡೇಟ್ ಗೆ ಹೋಗಿದ್ದ ಯುವತಿ ಸಮಸ್ಯೆಗಳಲ್ಲಿ ಸಿಲುಕಿಕೊಂಡಳು!
ಆಸ್ಪತ್ರೆ ಸ್ಟಾಫ್ ನರ್ಸ್ ಆತ್ಮಹತ್ಯೆಗೆ ಹೊಸ ತಿರುವು: ಮೊಬೈಲ್ ನಲ್ಲಿ ಪತ್ತೆಯಾದ ಫೋಟೋಗಳಿಂದ ರಹಸ್ಯ ಬಯಲು
ಅರ್ಜಿ ನೀಡಲು ಬಂದ ಮಹಿಳೆಗೆ ಕಿರುಕುಳ: ಗ್ರಾ.ಪಂ. ಸದಸ್ಯನ ವಿರುದ್ಧ ದೂರು
2,700 ವರ್ಷದ ಹಳೆಯ ಪುರಾತನ ಐಶಾರಾಮಿ ಶೌಚಾಲಯ ಪತ್ತೆ!
ಅಣಬೆ ಸೇವಿಸಿ ಒಂದೇ ಕುಟುಂಬದ 10 ಮಂದಿ ಅಸ್ವಸ್ಥ | ಮಹಿಳೆಯ ಸ್ಥಿತಿ ಗಂಭೀರ