ದೆವ್ವದಂತೆ ವೇಷ ಧರಿಸಿ ಹೆದರಿಸಲು ಹೋದ ಯುವತಿಯ ದುರಂತ ಅಂತ್ಯ! - Mahanayaka

ದೆವ್ವದಂತೆ ವೇಷ ಧರಿಸಿ ಹೆದರಿಸಲು ಹೋದ ಯುವತಿಯ ದುರಂತ ಅಂತ್ಯ!

mexico
23/10/2021

ಮೆಕ್ಸಿಕೋ: ದೆವ್ವದ ವೇಷದಲ್ಲಿ ಸಾರ್ವಜನಿಕರನ್ನು ಹೆದರಿಸಲು ಹೋದ ಯುವತಿಯೋರ್ವಳು ಅನ್ಯಾಯವಾಗಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಮೆಕ್ಸಿಕೋದ ನೌಕಲ್ಪಾನ್ ಡಿ ಜುವಾರೆಜ್ ನಡೆದಿದೆ. ರಾತ್ರಿ ದೆವ್ವದಂತೆ ವೇಷ ಧರಿಸಿ ರಸ್ತೆಯಲ್ಲಿ ಅಡ್ಡ ಬರುತ್ತಿದ್ದ ವೇಳೆ ಹೆದರಿದ ವ್ಯಕ್ತಿಯೋರ್ವ ಗುಂಡು ಹಾರಿಸಿದ್ದು, ಪರಿಣಾಮವಾಗಿ ಯುವತಿ ಸಾವನ್ನಪ್ಪಿದ್ದಾಳೆ.

ಬಿಳಿ ಸೀರೆ ಉಟ್ಟು ದೆವ್ವದಂತೆ ಮೇಕಪ್ ಮಾಡಿ ಯುವತಿ ರಸ್ತೆಯ ಬದಿಯಲ್ಲಿ ಅಡ್ಡ ಬಂದಿದ್ದಾಳೆ ಎನ್ನಲಾಗಿದೆ. ಈ ವೇಳೆ ವ್ಯಕ್ತಿಯು ಭೀತಿಯಿದ ಒಂದೇ ಸಮನೆ ನಾಲ್ಕೈದು ಗುಂಡು ಹಾರಿಸಿದ್ದು, ಪರಿಣಾಮವಾಗಿ ಯುವತಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.

20ರಿಂದ 25 ವರ್ಷ ವಯಸ್ಸಿನ ಯುವತಿ ಮೃತ ಯುವತಿ ಎಂದು ಗುರುತಿಸಲಾಗಿದೆ. ಲಾ ಲೊರೋನಾ ಎಂಬ ದೆವ್ವದ ಕಥೆಯನ್ನು ಆಧರಿಸಿ ಯುವತಿ ವೇಷ ಹಾಕುತ್ತಿದ್ದಳು. ಮೆಕ್ಸಿಕೋ ಪಟ್ಟಣದ ಬೀದಿಯಲ್ಲಿ ಸುತ್ತುತ್ತಾ, ದೆವ್ವದಂತೆ ಜನರನ್ನು ಭೀತಿ ಸೃಷ್ಟಿಸುತ್ತಿದ್ದಳು. ಆದರೆ, ಅಕ್ಟೋಬರ್ 15ರಂದು ನಡೆದ ಅನಿರೀಕ್ಷಿತ ಘಟನೆಯಲ್ಲಿ ಆಕೆಯ ಜೀವನವೇ ದೆವ್ವದ ವೇಷದೊಂದಿಗೆ ಮುಕ್ತಾಯಗೊಂಡಿದೆ.

ಇನ್ನೂ ಗುಂಡು ಹಾರಿಸಿದ ವ್ಯಕ್ತಿ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ದೆವ್ವದ ವೇಷವನ್ನು ಈ ಯುವತಿ ಹವ್ಯಾಸವಾಗಿ ಮಾಡಿಕೊಂಡಿರಲಿಲ್ಲ. ಅಕ್ಟೋಬರ್ 31ರಂದು ಹ್ಯಾಲೋವೀನ್ ದಿನಾಚರಣೆ ಮೆಕ್ಸಿಕೋದಲ್ಲಿ ನಡೆಯುತ್ತಿದ್ದು, ಇದರಲ್ಲಿ ಜನರು ದೆವ್ವ ಮತ್ತು ಆತ್ಮಗಳಂತೆ ವೇಷ ಹಾಕುವುದು ಇಲ್ಲಿನ ಸಂಪ್ರದಾಯವಾಗಿದೆ. ಆದರೆ, ಇದೀಗ ಹ್ಯಾಲೋವೀನ್ ದಿನಾಚರಣೆಗೆ ಮೊದಲೇ ಯುವತಿ ಬರ್ಬರವಾಗಿ ಹತ್ಯೆಗೀಡಾಗಿದ್ದಾಳೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DvHWsFS1hwLKfIX9njyNyb

ಇನ್ನಷ್ಟು ಸುದ್ದಿಗಳು…

ತುಮಕೂರು: ಬಜರಂಗದಳದ ಬಂದ್ ಗೆ ತಡೆಯೊಡ್ಡಿದ ಬಿಜೆಪಿ | ಅಷ್ಟಕ್ಕೂ ನಡೆದ ಯಡವಟ್ಟೇನು?

“ರತ್ನನ್ ಪ್ರಪಂಚ” ವರ್ಣಿಸಲು ಪದಗಳೇ ಇಲ್ಲ | ಒಂದು ಒಳ್ಳೆಯ ಸಿನಿಮಾ ನೋಡಿದೆ: ಹಾಸನದ ಯುವಕ ಸಚಿನ್ ಸರಗೂರು

ಮೋದಿಯಿಂದಾಗಿ ಕಾಂಗ್ರೆಸ್ ಧೂಳೀಪಟವಾಯ್ತು, ಇನ್ನೂ ಕಾಂಗ್ರೆಸ್ ನ ಅಡ್ರೆಸ್ಸೆ ಇರಲ್ಲ | ಯಡಿಯೂರಪ್ಪ ವಾಗ್ದಾಳಿ

ರಾಜ್ಯದಲ್ಲಿ 378 ಕೊವಿಡ್ ಪ್ರಕರಣ ಪತ್ತೆ: 11 ಮಂದಿ ಸಾವು

ಲೈಂಗಿಕ ದೌರ್ಜನ್ಯ: ಆರೋಪಿ ವಕೀಲ ರಾಜೇಶ್ ಭಟ್ ನನ್ನು ರಕ್ಷಿಸಲು ನಡೆದಿತ್ತು ಭಾರೀ ಷಡ್ಯಂತ್ರ!

“ಬಾಯಿ ತೊಳೆದುಕೊಳ್ಳಿ” ಎಂದು ನಳಿನ್ ಕುಮಾರ್ ಗೆ ಫಿನಾಯಿಲ್ ಪಾರ್ಸೆಲ್!

ಮಂಗಳೂರಿನ ಸಂಘದ ಪ್ರಚಾರಕರ ಕುಟುಂಬದ ಹೆಣ್ಣು ಮಗಳೊಬ್ಬರನ್ನು ಹಾಳು ಮಾಡಿ ಬಾಂಬೆಗೆ ಓಡಿ ಹೋಗಿದ್ದವರು ಯಾರು? | ಕುಮಾರಸ್ವಾಮಿ ಪ್ರಶ್ನೆ

 

ಇತ್ತೀಚಿನ ಸುದ್ದಿ