ಡಿವೋರ್ಸ್ ನಿರ್ಧಾರದಿಂದ ಹಿಂದಕ್ಕೆ ಸರಿದ ಧನುಷ್—ಐಶ್ವರ್ಯ - Mahanayaka

ಡಿವೋರ್ಸ್ ನಿರ್ಧಾರದಿಂದ ಹಿಂದಕ್ಕೆ ಸರಿದ ಧನುಷ್—ಐಶ್ವರ್ಯ

dhanush aishwarya
06/10/2022

ತಮಿಳು ಸ್ಟಾರ್ ನಟ ಧನುಶ್ ಹಾಗೂ ಸೂಪರ್ ಸ್ಟಾರ್ ರಜನಿ ಕಾಂತ್ ಪುತ್ರಿ ಐಶ್ವರ್ಯ  ತಮ್ಮ ಡಿವೋರ್ಸ್ ನಿರ್ಧಾರದಿಂದ ಹಿಂದೆ ಸರಿಯಲು ಮುಂದಾಗಿದ್ದು, ಮತ್ತೆ ಜೊತೆಯಾಗಿ ಬದುಕಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಇತ್ತೀಚೆಗಷ್ಟೇ ಧನುಷ್ ಮತ್ತು ಐಶ್ವರ್ಯ ಪ್ರತ್ಯೇಕವಾಗಿರುವುದಾಗಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಘೋಷಿಸಿಕೊಂಡು ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಇದೀಗ ಮತ್ತೆ ತಮ್ಮ ವೈಮನಸ್ಸನ್ನು ಬಗೆಹರಿಸಿಕೊಂಡು ಜೊತೆಯಾಗಿ ಬದುಕಲು ನಿರ್ಧರಿಸಿದ್ದಾರೆಂದು ಹೇಳಲಾಗಿದೆ.

ಧನುಷ್ ಹಾಗೂ ಐಶ್ವರ್ಯ ಕುಟುಂಬಸ್ಥರು ನಡೆಸಿದ ಸಂಧಾನದಲ್ಲಿ ಇಬ್ಬರು ಜೊತೆಯಾಗಿ ಬದುಕುವಂತೆ ಹಿರಿಯರು ಸಲಹೆ ನೀಡಿದ್ದು, ಸಂಧಾನ ಯಶಸ್ವಿಯಾಗಿದ್ದು, ಡಿವೋರ್ಸ್ ನಿಂದ ಇಬ್ಬರೂ ಹಿಂದಕ್ಕೆ ಸರಿಯಲಿದ್ದಾರೆ ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ