ಯಾವುದೇ ಸಮುದಾಯ ಅಥವಾ ಧರ್ಮಗಳಿಗೆ ನೋವುಂಟು ಮಾಡಿದರೆ ಒಳ್ಳೆಯದಾಗುವುದಿಲ್ಲ | ಶೋಭಾ ಕರಂದ್ಲಾಜೆ - Mahanayaka
6:09 PM Wednesday 11 - December 2024

ಯಾವುದೇ ಸಮುದಾಯ ಅಥವಾ ಧರ್ಮಗಳಿಗೆ ನೋವುಂಟು ಮಾಡಿದರೆ ಒಳ್ಳೆಯದಾಗುವುದಿಲ್ಲ | ಶೋಭಾ ಕರಂದ್ಲಾಜೆ

shobha karandlaje
18/09/2021

ಉಡುಪಿ: ಯಾವುದೇ ಸಮುದಾಯ ಅಥವಾ ಧರ್ಮಗಳಿಗೆ ನೋವುಂಟು ಮಾಡಿದರೆ ನಮಗೆ ಒಳ್ಳೆಯದಾಗುವುದಿಲ್ಲ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದು, ರಾಜ್ಯದ ಶ್ರದ್ಧಾ ಕೇಂದ್ರಗಳ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನಲ್ಲಿ ದೇವಸ್ಥಾನ ಧ್ವಂಸ ವಿಚಾರದಲ್ಲಿ ಹಿಂದೂ ಸಂಘಟನೆಗಳ ಪ್ರತಿಭಟನೆಯ ವಿಚಾರವಾಗಿ ಉಡುಪಿಯಲ್ಲಿ ಶುಕ್ರವಾರ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯದಲ್ಲಿ ದೇವಸ್ಥಾನ, ಮಸೀದಿ, ಚರ್ಚ್‌ಗಳ ಮೇಲೆ ಜನರು ಹೆಚ್ಚು ನಂಬಿಕೆ ಇಟ್ಟುಕೊಂಡಿರುತ್ತಾರೆ. ಭಕ್ತಿ ಭಾವ ಹೆಚ್ಚಾಗಿರುತ್ತದೆ. ಶ್ರದ್ಧಾ ಕೇಂದ್ರಗಳು ತೆರವಾದಾಗ ಜನರ ಭಾವನೆಗಳಿಗೆ ಸಹಜವಾಗಿ ನೋವಾಗುತ್ತದೆ ಎಂದು ಹೇಳಿದ್ದಾರೆ.

ಅಕ್ರಮ ದೇವಾಲಯಗಳ ನಿರ್ಮಾಣ ಮಾಡಿರುವುದು ಕಂಡು ಬಂದರೆ ಸ್ಥಳೀಯ ಊರಿನ ಜನರ ಮನವೊಲಿಸಬೇಕು. ದೇವಸ್ಥಾನಗಳ ನಿರ್ಮಾಣಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕಲ್ಪಿಸಬೇಕು. ಆನಂತರ ತೆರವು ಮಾಡುವ ಬಗ್ಗೆ ಸರ್ಕಾರ ಯೋಚಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮತಾಂತರ: ದೇಶದ ಹಲವು ಭಾಗಗಳಲ್ಲಿ ಮತಾಂತರ ನಡೆಯುತ್ತಿದೆ. ಹಿಂದೂಗಳ ದುರ್ಬಲತೆಯನ್ನು ದುರುಪಯೋಗಪಡಿಸಿಕೊಂಡು ಮತಾಂತರ ನಡೆಸಲಾಗುತ್ತಿದೆ. ಮತಾಂತರ ತಡೆಗೆ ಕಾನೂನು ಕಠಿಣವಾಗಬೇಕು. ಮತಾಂತರ ತಡೆಗೆ ಅಗತ್ಯವಿರುವ ಎಲ್ಲ ಕಾನೂನು ಕ್ರಮಗಳನ್ನು ಜಾರಿಗೊಳಿಸಬೇಕು ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ.

ಇನ್ನಷ್ಟು ಸುದ್ದಿಗಳು…

ದೇವಸ್ಥಾನದಲ್ಲಿ ಕೇಳಬಾರದ ಪ್ರಶ್ನೆ ಕೇಳಿದ ಪತ್ರಕರ್ತನ ವಿರುದ್ಧ ನಟಿ ಸಮಂತಾ ಆಕ್ರೋಶ!

ನಟ ಸೋನುಸೂದ್ ಅವರಿಂದ 20 ಕೋಟಿಗೂ ಅಧಿಕ ತೆರಿಗೆ ವಂಚನೆ!

ಪ್ರಧಾನಿ ಮೋದಿಗೆ ಪರ್ಯಾಯ ರಾಹುಲ್ ಅಲ್ಲ, ಮಮತಾ ಬ್ಯಾನರ್ಜಿ | ಜಾಗೋ ಬಾಂಗ್ಲಾ ವರದಿ

ಮತ್ತೆ ಮೈತ್ರಿಯಾಗುತ್ತಾ ಶಿವಸೇನೆ, ಬಿಜೆಪಿ | ಕುತೂಹಲಕ್ಕೆ ಕಾರಣವಾದ ಠಾಕ್ರೆ ಹೇಳಿಕೆ

ಮಕ್ಕಳಲ್ಲಿ ಹೆಚ್ಚುತ್ತಿದೆ ವೈರಲ್ ಜ್ವರ: ಪೋಷಕರಲ್ಲಿ ಆತಂಕ

ಒಂದೇ ಕುಟುಂಬದ ಐವರು ಆತ್ಮಹತ್ಯೆ: ಮನೆಯೊಳಗೆ ಒಬ್ಬಂಟಿಯಾಗಿತ್ತು 3 ವರ್ಷದ ಮಗು!

ಇತ್ತೀಚಿನ ಸುದ್ದಿ