Dharmasthala Village Horror: ಧೂತ ಎಂ.ಡಿ.ಸಮೀರ್ ವಿರುದ್ಧ 10 ಕೋಟಿ  ಮಾನನಷ್ಟ ದಾವೆ - Mahanayaka

Dharmasthala Village Horror: ಧೂತ ಎಂ.ಡಿ.ಸಮೀರ್ ವಿರುದ್ಧ 10 ಕೋಟಿ  ಮಾನನಷ್ಟ ದಾವೆ

md sameer dharmasthala
12/04/2025

ಬೆಂಗಳೂರು: ಧರ್ಮಸ್ಥಳದ ಸೌಜನ್ಯ ಮೇಲಿನ ಅತ್ಯಾಚಾರ ಮತ್ತು ಕೊಲೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಶ್ರೀ ಕ್ಷೇತ್ರ ಧರ್ಮಸ್ಥಳ, ಅದರ ಮುಖ್ಯಸ್ಥರು ಹಾಗೂ ಕುಟುಂಬ ಸದಸ್ಯರ ವಿರುದ್ಧ ಮಾನಹಾನಿ ವೀಡಿಯೋ ಪ್ರಸಾರ ಮಾಡಿದ ಆರೋಪದ ಮೇಲೆ ಯುಟ್ಯೂಬರ್ ಎಂ.ಡಿ.ಸಮೀರ್ ವಿರುದ್ಧ 10 ಕೋಟಿ  ಮಾನನಷ್ಟ ದಾವೆ ದಾಖಲಿಸಲಾಗಿದೆ.


Provided by

ಡಿ. ನಿಶ್ಚಲ್ ಮತ್ತು ಡಿ.ಹರ್ಷೇಂದ್ರ ಕುಮಾರ್ ಅವರು ಮೂಲ ದಾವೆ ಸಲ್ಲಿಸಿದ್ದಾರೆ. ದಾವೆಯನ್ನು ವಿಚಾರಣೆ ನಡೆಸಿದ ಬೆಂಗಳೂರಿನ 4ನೇ ಹೆಚ್ಚುವರಿ ಸಿಟಿ ಸಿವಿಲ್ ಹಾಗೂ ಸೆಷನ್ಸ್ ಕೋರ್ಟ್ ನ್ಯಾಯಾಧೀಶ ಎಸ್.ನಟರಾಜ್ ಅವರು, ಯೂಟ್ಯೂಬರ್’ ಎಂ.ಡಿ. ಸಮೀರ್ ಅವರ ದೂತ ಯೂಟ್ಯೂಬ್ ಚಾನೆಲ್‌ಗೆ ನೋಟಿಸ್ ಜಾರಿ ಮಾಡಿ ಆಕ್ಷೇಪಣೆ ಸಲ್ಲಿಸುವಂತೆ ಸೂಚನೆ ನೀಡಿದ್ದು,   ವಿವಾದಿತ ವೀಡಿಯೋವನ್ನು ಯೂಟ್ಯೂಬ್ ನಿಂದ ತೆಗೆದು ಹಾಕುವಂತೆ ಸೂಚನೆ ನೀಡಿದೆ.

ಮಾನನಷ್ಟ ಮೊಕದ್ದಮೆಯ ದಾವೆಯ ವಿಚಾರಣೆಯನ್ನು ಜೂ.9ಕ್ಕೆ ಮುಂದೂಡಲಾಗಿದೆ. ದಾವೆಯಲ್ಲಿ,  ಶ್ರೀಕ್ಷೇತ್ರ ಧರ್ಮಸ್ಥಳ, ಅದರ ಮುಖ್ಯಸ್ಥರು ಮತ್ತು ಕುಟುಂಬ ಸದಸ್ಯರ ಘನತೆಗೆ ಹಾನಿಯಾಗುವಂತೆ ದೂತ ಯೂಟ್ಯೂಬ್ ಚಾನೆಲ್‌ ನಲ್ಲಿ ಧರ್ಮಸ್ಥಳ ಹರರ್  ಪಾರ್ಟ್–2/ಸಾಕ್ಷಿ ನಾಶ/ಸೌಜನ್ಯ ಕೇಸ್ ಹೆಸರಿನಲ್ಲಿ ವೀಡಿಯೋ ಅಪ್ಲೋಡ್ ಮಾಡಲಾಗಿದೆ. ಈ ವೀಡಿಯೋಗಳನ್ನು ಡಿಲೀಟ್ ಮಾಡಲು ನ್ಯಾಯಾಲಯ ಆದೇಶ ನೀಡಿತ್ತು. ಆದರೆ ಮತ್ತೆ ಅಪ್ಲೋಡ್ ಮಾಡಿ, ಮಾನನಷ್ಟ ಉಂಟು ಮಾಡಲಾಗಿದೆ. ಇದರಿಂದ 10 ಕೋಟಿ ರೂ. ನಷ್ಟ ಪರಿಹಾರ ಪಾವತಿಸಲು ಎಂ.ಡಿ. ಸಮೀರ್‌ ಗೆ  ಆದೇಶ ನೀಡಬೇಕು. ಮಧ್ಯಾಂತರ ಪರಿಹಾರವಾಗಿ ವಿವಾದಿತ ವೀಡಿಯೋವನ್ನು ಚಾನೆಲ್‌ ನಿಂದ ತೆಗೆದುಹಾಕಲು ಆದೇಶಿಸಬೇಕು ಎಂದು ಕೋರಲಾಗಿದೆ.


Provided by

ದಾವೆದಾರರಿಗೆ ಸರಿಪಡಿಸಲಾಗದ ಹಾನಿ ಉಂಟಾಗುವುದನ್ನು ತಪ್ಪಿಸುವ ದೃಷ್ಟಿಯಿಂದ ತುರ್ತಾಗಿ ಮಧ್ಯಾಂತರ ಪರಿಹಾರ ಆದೇಶ ಮಾಡುವ ಅಗತ್ಯವಿದೆ ಎಂದು ತೀರ್ಮಾನಿಸಿ, ವೀಡಿಯೋ ತೆಗೆದುಹಾಕಲು ಸಮೀರ್‌ ಗೆ ಸೂಚನೆ ನೀಡಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ