ಶಾಸಕ ಹಾಲಪ್ಪ, ಬೇಳೂರು ಗೋಪಾಲಕೃಷ್ಣರಿಂದ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ - Mahanayaka
10:55 AM Wednesday 11 - December 2024

ಶಾಸಕ ಹಾಲಪ್ಪ, ಬೇಳೂರು ಗೋಪಾಲಕೃಷ್ಣರಿಂದ ಧರ್ಮಸ್ಥಳದಲ್ಲಿ ಆಣೆ ಪ್ರಮಾಣ

pramana
13/02/2022

ಬೆಳ್ತಂಗಡಿ: ಸಾಗರ ಹಾಗೂ ಹೊಸನಗರ ತಾಲೂಕಿನಲ್ಲಿ ಮರಳು ಸಾಗಣೆ ಲಾರಿ ಮಾಲೀಕರಿಂದ ಕಮಿಷನ್ ಪಡೆದಿದ್ದಾರೆ, ಪಡೆದಿಲ್ಲವಾದರೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಲಿ ಎಂದು ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರ ಆರೋಪ ಹಾಗೂ ಆಹ್ವಾನದ ಹಿನ್ನೆಲೆ, ಸವಾಲು ಸ್ವೀಕರಿಸಿದ ಶಾಸಕ ಹರತಾಳು ಹಾಲಪ್ಪ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಿದ್ದಾರೆ.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹರತಾಳು ಹಾಲಪ್ಪ, ಶ್ರೀ ಕ್ಷೇತ್ರ ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿಯ ಸಮ್ಮುಖದಲ್ಲಿ ನನ್ನ ಆತ್ಮಶುದ್ಧಿ ಹಾಗೂ ಪ್ರಾಮಾಣಿಕತೆಯನ್ನು ಪ್ರದರ್ಶಿಸುವ ಸಲುವಾಗಿ, ಮರಳು ಸಾಗಾಣಿಕೆ ಲಾರಿ ‌ಮಾಲೀಕರಿಂದ ಹಣ ಪಡೆದಿಲ್ಲ ಎಂದು‌ ಪ್ರಮಾಣ ಮಾಡಿದ್ದೇನೆ‌ ಎಂದು‌ ತಿಳಿಸಿದರು.

ಮಾಜಿ ಶಾಸಕರ ಆಹ್ವಾನದಂತೆ‌ ಆರು ದಿನಗಳ‌ ಮೊದಲೇ ಅವರಿಗೆ ತಿಳಿವಳಿಕೆ ಪತ್ರದ ಮೂಲಕ ನೋಟಿಸ್​ ನಿಡಿ ಇಂದಿಗೆ ದಿನ ನಿಗದಿಪಡಿಸಲಾಗಿತ್ತು. ಅವರು ದಿನಾಂಕ ಹಾಗೂ ಸಮಯ ಬದಲಾವಣೆ ಪ್ರಯತ್ನದ ಮೂಲಕ ಜಾರಿಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಆದರೂ ಇಂದು ಅವರು ಧರ್ಮಸ್ಥಳಕ್ಕೆ ಆಗಮಿಸುವ ಮಾಹಿತಿ ಲಭಿಸಿದೆ ಎಂದು ಬೇಳೂರು ಗೋಪಾಲಕೃಷ್ಣ ಆಮನಕ್ಕೂ ಮುನ್ನ ಈ ಹೇಳಿಕೆ ನೀಡಿದರು.

ನಾನು ಹಣ ಪಡೆಯದಿರುವ ಕುರಿತು ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದೇನೆ. ಆದರೆ, ಅವರಿಗೆ ಪ್ರಾಮಾಣಿಕವಾಗಿ ಒಪ್ಪಿಕೊಳ್ಳುವ ತಾಕತ್ತಿಲ್ಲ. ನಾನು‌ ಹಣ ಪಡೆದ ಕುರಿತು ಯಾವುದೇ ದಾಖಲೆಗಳಿದ್ದರೆ ನನ್ನ ವಿರುದ್ಧ ಕೇಸ್ ಹಾಕಲಿ‌‌ ಎಂದು ಸವಾಲು ಹಾಕಿದರು. ‌ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಆಪಾದನೆ ಮಾಡಿದ ಹಿನ್ನೆಲೆ, 40 ವರ್ಷಗಳಿಂದ ಸ್ನೇಹಿತರಾಗಿರುವ ವಿನಾಯಕ ರಾವ್ ಮತ್ತು ಅಣ್ಣಯ್ಯನ ಮಗ ರವೀಂದ್ರ ಅವರನ್ನೂ ಜೊತೆಗೆ ಕರೆದುಕೊಂಡು ಬಂದು ಪ್ರಮಾಣ ಮಾಡುವ ಮೂಲಕ ದೇವರ ಸಮ್ಮುಖದಲ್ಲಿ ನನ್ನ ಪ್ರಾಮಾಣಿಕತೆಯನ್ನು ತಿಳಿಸಿದ್ದೇನೆ ಎಂದರು‌.

ಇದಕ್ಕೆ ಪ್ರತಿಕ್ರಿಯಿಸಿದ ಬೇಳೂರು ಗೋಪಾಲಕೃಷ್ಣ, ಶಾಸಕ ಹರತಾಳು ಹಾಲಪ್ಪ ಅವರ ವಿರುದ್ಧ ಮರಳು ದಂಧೆಯಿಂದ ಕಮಿಷನ್ ತೆಗೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದೆ. ಅಕ್ರಮ ಮರಳುಗಾರಿಕೆ ನಡೆಸುತ್ತಿದ್ದಾರೆ ಎಂಬ ಬಗ್ಗೆ ಹೇಳಿದ್ದೆ. ಅದಲ್ಲದೇ ದುಡ್ಡು ಕೊಟ್ಟವರೂ ಕೂಡ ನನ್ನೊಟ್ಟಿಗೆ ಇದ್ದಾರೆ. ಇದು ನೂರಕ್ಕೆ ನೂರು ಸತ್ಯ. ಅವರು ಸುಮಾರು 300 ಲಾರಿ ಮಾಲೀಕರಿಂದ ಹಣ ಪಡೆದಿದ್ದಾರೆ. ಅದರಲ್ಲಿ 30 ಜನ ಅವರ ಪರವಾಗಿ ಸಾಕ್ಷಿ ನೀಡಬಹುದು ಎಂದರು.

ಹಲವು ದಿನಗಳ ವಾದ ವಿವಾದದ ಅಣೆ ಪ್ರಮಾಣವನ್ನು ಇವತ್ತು ಅಂತ್ಯಗೊಳಿಸಿದ್ದೇವೆ. ಇಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬಂದಿದ್ದೇವೆ ದೇವರ ದರ್ಶನ ಮಾಡಿದ್ದೇವೆ. ಆದರೆ ಹಾಲಪ್ಪ ನಮ್ಮನ್ನು ಇಲ್ಲಿಗೆ ಬರುವಂತೆ ತಿಳಿಸಿ, ಅವರೂ ಇರಬೇಕಿತ್ತು. ಆದರೆ ಅವರು ಬೇಗ ಆಗಮಿಸಿ, ಪ್ರಮಾಣ ಮಾಡಿ ಹೋಗಿದ್ದೇನೆ ಎಂದು ಹೇಳುತ್ತಿದ್ದಾರೆ. ಇಡೀ ರಾಜ್ಯ ನೋಡುತ್ತಿದೆ. ಈ ಸ್ಥಳ ನಂಬಿಕೆಯ ಮೂಲ ಸ್ಥಳವಾಗಿದೆ. ಇಲ್ಲಿ ಅವರು ಏನೂ ತಪ್ಪು ಮಾಡಿಲ್ಲ ಎಂದು ಹೇಳಿ ಹೋಗಿದ್ದಾರೆ. ಅದಕ್ಕೆ ಸಾಕ್ಷಿ ಮಂಜುನಾಥೇಶ್ವರ ಆಗಿದ್ದಾನೆ‌ ಎಂದು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಪೊಲೀಸ್ ಇನ್ಸ್​ಪೆಕ್ಟರ್ ಮೇಲೆಯೇ ಪೆಟ್ರೋಲ್ ಸುರಿದು ಬೆಂಕಿ ಹಚ್ಚಲು ಯತ್ನ

ಮನೆ ಬಿಟ್ಟು ಬಂದಿದ್ದ ಯುವತಿ ಮೇಲೆ ಅತ್ಯಾಚಾರವೆಸಗಿ ಮಾರಾಟಕ್ಕೆ ಯತ್ನ

ಮದುವೆ ಆರತಕ್ಷತೆ ವೇಳೆ ಕುಸಿದ ಬಿದ್ದ ವಧುವಿನ ಮೆದುಳು ನಿಷ್ಕಿಯ: ಪೋಷಕರಿಂದ ಅಂಗಾಂಗ ದಾನಕ್ಕೆ ನಿರ್ಧಾರ

ಮದುವೆ ಮಾಡಿಸಿಲ್ಲ ಎಂದು ತಂದೆಯನ್ನೇ ಕೊಂದ ಪಾಪಿ ಮಗ!

ಪಾರ್ಥೀವ ಶರೀರದಂತೆ ಮಲಗಿ ಟೋಲ್ ಗೇಟ್ ಅನ್ಯಾಯ ಪ್ರಶ್ನಿಸಿದ ಆಸಿಫ್ ಆಪತ್ಬಾಂಧವ

ಇತ್ತೀಚಿನ ಸುದ್ದಿ