ಧರ್ಮೇಗೌಡರು ದೇವೇಗೌಡರನ್ನು ಭೇಟಿ ಮಾಡಿದಾಗ ಏನು ಹೇಳಿದ್ದರು? | “ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು” ಎಂದು ದೇವೇಗೌಡ ಹೇಳಿದ್ದೇಕೆ? - Mahanayaka
2:27 AM Thursday 12 - December 2024

ಧರ್ಮೇಗೌಡರು ದೇವೇಗೌಡರನ್ನು ಭೇಟಿ ಮಾಡಿದಾಗ ಏನು ಹೇಳಿದ್ದರು? | “ಅವರು ಮಾನಸಿಕವಾಗಿ ಕುಗ್ಗಿ ಹೋಗಿದ್ದರು” ಎಂದು ದೇವೇಗೌಡ ಹೇಳಿದ್ದೇಕೆ?

29/12/2020

ಬೆಂಗಳೂರು: ವಿಧಾನಪರಿಷತ್ ಉಪಸಭಾಪತಿ ಧರ್ಮೇಗೌಡ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ವರಿಷ್ಠ ದೇವೇಗೌಡ ಹೇಳಿಕೆ ನೀಡಿದ್ದು, ಧರ್ಮೇಗೌಡರು ಮಾನಸಿಕವಾಗಿ ಬಹಳ ಕುಗ್ಗಿಹೋಗಿದ್ದರು ಎಂದು ಹೇಳಿದ್ದಾರೆ.

ಡಿಸೆಂಬರ್ 15ರಂದು ವಿಧಾನಪರಿಷತ್ ಗೆ ಹೋಗುವ ಮೊದಲು ಅವರು ನನ್ನನ್ನು ಭೇಟಿ ಮಾಡಿದ್ದರು. ಅವರು ಮಾನಸಿಕವಾಗಿ ತುಂಬಾ ಕುಗ್ಗಿಹೋಗಿದ್ದರು. ಮನಸ್ಸಿನಲ್ಲಿರುವ ನೋವನ್ನು ಯಾರಿಗೂ ತೋರಿಸಿಕೊಳ್ಳದಿರುವ ವ್ಯಕ್ತಿತ್ವ ಅವರದ್ದು ಎಂದು ದೇವೇಗೌಡರು ಹೇಳಿದ್ದರು.

ನನ್ನನ್ನು ಭೇಟಿ ಮಾಡಿದ ಸಂದರ್ಭದಲ್ಲಿ, “ಸಭಾಪತಿಯಾಗಿ ನಿಮ್ಮ ಸ್ಥಾನದಲ್ಲಿ ಯಾರ ಬಲವಂತಕ್ಕೂ ಕುಳಿತುಕೊಳ್ಳಬೇಡಿ” ಎಂದು ನಾನು ಅವರಿಗೆ ಹೇಳಿದ್ದೆ. ಆದರೆ ಅವರು ರಾಜಕೀಯ ಘಟ್ಟದಲ್ಲಿ ಎಂದೂ ಮರೆಯಲಾಗದ ನೋವು ಅನುಭವಿಸಿದ್ದಾರೆ. ಇದರಿಂದ ಹೊರಬರಲು ನಾನು ಕೆಲವು ಸಲಹೆ ನೀಡಿದ್ದೆ. ಆದರೆ, ಕೊನೆಯ ದಿನಗಳಲ್ಲಿ ನಡೆದ ಘಟನೆಯಿಂದ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೇವೇಗೌಡರು ಹೇಳಿದರು.

ಇತ್ತೀಚಿನ ಸುದ್ದಿ