ಧರ್ಮೇಗೌಡರದ್ದು ಆತ್ಮಹತ್ಯೆಯಲ್ಲ ಕೊಲೆ | ಕುಮಾರಸ್ವಾಮಿ ಹೇಳಿಕೆ
29/12/2020
ಬೆಂಗಳೂರು: ಧರ್ಮೇಗೌಡರದ್ದು ಆತ್ಮಹತ್ಯೆಯಲ್ಲ ರಾಜಕೀಯ ಕೊಲೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಕಣ್ಣೀರು ಹಾಕಿದ್ದು, ಧರ್ಮೇಗೌಡರ ಸಾವಿನಿಂದ ತೀವ್ರವಾಗಿ ದುಃಖಿತರಾಗಿರುವ ಅವರು ಕಣ್ಣೀರು ಹಾಕಿಕೊಂಡೇ ಮಾಧ್ಯಮಗಳ ಜೊತೆಗೆ ಮಾತನಾಡಿದರು.
ಇದು ರಾಜಕಾರಣದ ಕೊಲೆ ಎಂದು ಹೇಳಲು ನಾನು ಬಯಸುತ್ತೇನೆ. ನಮ್ಮಂತಹ ರಾಜಕಾರಣಿಗಳಿಂದ ಇಂತಹ ಸೂಕ್ಷ್ಮ ಮನಸ್ಸಿನವರು ದುಡುಕಿನ ನಿರ್ಧಾರ ಕೈಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಧರ್ಮೇಗೌಡರ ತಂದೆ ಲಕ್ಷ್ಮಯ್ಯ ನನಗೆ ಒಂದು ಮಾತು ಹೇಳಿದ್ದರು. ನಾನಂತೂ ಮಂತ್ರಿಯಾಗಲು ಆಗಲಿಲ್ಲ. ನಾನು ಬದುಕಿರುವಾಗಲೇ ನನ್ನ ಪುತ್ರ ಮಂತ್ರಿ ಆಗಬೇಕು ಎಂದು ಹೇಳಿದ್ದರು. ಅವರ ಆಸೆ ಈಡೇರಿಸಲು ಆಗಲಿಲ್ಲ ಎಂದು ಅವರು ಕಣ್ಣೀರಿಟ್ಟರು.
ನನ್ನ ಸ್ನೇಹಿತ ಧರ್ಮೇಗೌಡ ಇಂದು ನನ್ನನ್ನು ಅಗಲಿದ್ದಾರೆ. ಅವರು ಒಳ್ಳೆಯ ವ್ಯಕ್ತಿಯಾಗಿದ್ದರು. ಈ ಘಟನೆಯನ್ನು ನನ್ನಿಂದ ಸಹಿಸಲು ಸಾಧ್ಯವಾಗುತ್ತಿಲ್ಲ. ಇದು ಆತ್ಮಹತ್ಯೆಯಲ್ಲ ರಾಜಕೀಯ ಕೊಲೆ ಎಂದು ಅವರು ಪುನರುಚ್ಚರಿಸಿದರು.