ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಉ.ಪ್ರ. ನಿಯೋಜಿತ ಸಿಎಂ ಯೋಗಿ ಆದಿತ್ಯನಾಥ್​ಗೆ ನೋಟಿಸ್​ ಜಾರಿ - Mahanayaka
1:16 PM Thursday 19 - September 2024

ಧಾರ್ಮಿಕ ಭಾವನೆಗಳಿಗೆ ಧಕ್ಕೆ ಆರೋಪ: ಉ.ಪ್ರ. ನಿಯೋಜಿತ ಸಿಎಂ ಯೋಗಿ ಆದಿತ್ಯನಾಥ್​ಗೆ ನೋಟಿಸ್​ ಜಾರಿ

yogi adithyanath
23/03/2022

ಲಕ್ನೋ: 4 ವರ್ಷಗಳ ಹಿಂದೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುವ ಹೇಳಿಕೆ ನೀಡಿರುವ ಆರೋಪದಡಿ ಉತ್ತರ ಪ್ರದೇಶದ ನಿಯೋಜಿತ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್​ ಅವರಿಗೆ ಮೌ ಜಿಲ್ಲಾ ನ್ಯಾಯಾಲಯ ಜಾರಿ ಮಾಡಿದೆ. ಈ ಪ್ರಕರಣದ ಮುಂದಿನ ವಿಚಾರಣೆಯನ್ನು ಏ.26ಕ್ಕೆ ಕೋರ್ಟ್​ ಮುಂದೂಡಿದೆ.

2018ರ ನ. 8ರಂದು ರಾಜಸ್ಥಾನದ ಅಲ್ವಾರ ಜಿಲ್ಲೆಯ ಮಳಖೇಡದಲ್ಲಿ ನಡೆದ ಕಾರ್ಯಕ್ರಮದಲ್ಲಿ ಹನುಮಾನ್ ದೇವರ ಕುರಿತಂತೆ ಯೋಗಿ ಆದಿತ್ಯನಾಥ್​ ಮಾತನಾಡಿದ್ದರು. ಹನುಮಾನ್ ಅರಣ್ಯವಾಸಿ, ವಂಚಿತ ಮತ್ತು ದಲಿತ ಎಂದು ಯೋಗಿ ಹೇಳಿದ್ದರು. ಅಲ್ಲದೇ, ಬಜರಂಗಬಲಿ ಹನುಮಾನ್​ ಉತ್ತರದಿಂದ ದಕ್ಷಿಣಕ್ಕೆ ಮತ್ತು ಪೂರ್ವದಿಂದ ಪಶ್ಚಿಮಕ್ಕೆ ಎಲ್ಲ ಭಾರತೀಯ ಸಮುದಾಯಗಳನ್ನು ಒಟ್ಟಿಗೆ ಸೇರಿಸಿದ ಕೆಲಸ ಮಾಡಿದ್ದರು ಎಂದು ಅವರು ಹೇಳಿದ್ದರು.

ಯೋಗಿ ಆದಿತ್ಯನಾಥ್​ ಅವರ ‘ಹನುಮಾನ್ ವಂಚಿತ ಹಾಗೂ ದಲಿತ’ ಎಂಬ ಹೇಳಿಕೆಯು ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ಕಿಶೋರ್​ ಶರ್ಮಾ ಎಂಬವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮೌ ಜಿಲ್ಲಾ ನ್ಯಾಯಾಲಯವು ಯೋಗಿ ಅವರಿಗೆ ನೋಟಿಸ್​ ಜಾರಿ ಮಾಡಿದೆ. ಈ ಮೊದಲು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್​​ ಮುಂದೆ ಕಿಶೋರ್​ ಶರ್ಮಾ ದೂರು ದಾಖಲಿಸಿದ್ದರು.


Provided by

ಆದರೆ, ಅರ್ಜಿಯನ್ನು ಮ್ಯಾಜಿಸ್ಟ್ರೇಟ್ ವಜಾಗೊಳಿಸಿದ್ದರು. ಹೀಗಾಗಿ ತಮ್ಮ ಅರ್ಜಿ ವಜಾ ಮಾಡಿದ್ದನ್ನು ಪ್ರಶ್ನಿಸಿ ಕಿಶೋರ್​ ಶರ್ಮಾ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ಮೌ ಜಿಲ್ಲಾ ನ್ಯಾಯಾಲಯವು ಯೋಗಿ ಆದಿತ್ಯನಾಥ್​ ಅವರಿಗೆ ನೋಸ್​ ಜಾರಿ ಮಾಡಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಟಿಂಬರ್ ಗೋದಾಮಿನಲ್ಲಿ ಭಾರೀ ಅಗ್ನಿ ಅನಾಹುತ: 11 ಮಂದಿ ಸಜೀವ ದಹನ

ಉತ್ತರ ಪ್ರದೇಶ: ಗುಂಡಿಟ್ಟು ಬಿಜೆಪಿ ನಾಯಕನ ಹತ್ಯೆ

ವಿಶ್ವದ ನಂಬರ್ 1 ಟೆನಿಸ್‌ ಆಟಗಾರ್ತಿ ಆಶ್ಲೆ ಬಾರ್ಟಿ ನಿವೃತ್ತಿ

‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಮೂಲಕ ಜನರನ್ನು ಸಂಘ ಪರಿವಾರ ಬೇರ್ಪಡಿಸುತ್ತಿದೆ: ಬೃಂದಾ ಕಾರಟ್ ಆರೋಪ

ಇತ್ತೀಚಿನ ಸುದ್ದಿ