ಜನಪ್ರಿಯ ಖಳನಟ ಧೀರೇಂದ್ರ ಗೋಪಾಲ್ ಅವರ ಪತ್ನಿ ನಿಧನ - Mahanayaka
3:14 PM Wednesday 5 - February 2025

ಜನಪ್ರಿಯ ಖಳನಟ ಧೀರೇಂದ್ರ ಗೋಪಾಲ್ ಅವರ ಪತ್ನಿ ನಿಧನ

dheerendra gopal wife sumangala
12/05/2021

ಸಿನಿಡೆಸ್ಕ್: ಕನ್ನಡ ಚಿತ್ರರಂಗದ ಜನಪ್ರಿಯ ಖಳನಟ ಧೀರೇಂದ್ರ ಗೋಪಾಲ್ ಅವರ ಪತ್ನಿ ಸುನಂದಮ್ಮ ಇಂದು ಮಧ್ಯಾಹ್ನ  ಹೃದಯಾಘಾತದಿಂದ ಮೃತಪಟ್ಟಿದ್ದು,  ಅವರ ಅಂತ್ಯಸಂಸ್ಕಾರ ಇಂದು ಸಂಜೆ ದಾಲ್ಮೀಯಾ ಘಾಟ್ ನಲ್ಲಿ ನಡೆಯಲಿದೆ.

ತಮ್ಮ ದಾವಣಗೆರೆ ಜಿಲ್ಲೆಯ ಹರಿಹರದ ಸ್ವಗೃಹದಲ್ಲಿ ಇಬ್ಬರು ಪುತ್ರರ ಜೊತೆಗೆ ಸುನಂದಮ್ಮ ವಾಸವಿದ್ದರು.  ರಂಗ ಕಲಾವಿದೆಯಾಗಿದ್ದ ಸುನಂದಮ್ಮ ಅವರನ್ನು ಧೀರೇಂದ್ರಗೋಪಾಲ್ ಅವರು ಪ್ರೀತಿಸಿ ವಿವಾಹವಾಗಿದ್ದರು.

ಇನ್ನೂ ಧೀರೇಂದ್ರ ಗೋಪಾಲ್ ಅವರು ಕೂಡ ಹೃದಯಾಘಾತದಿಂದ ನಿಧನ ಹೊಂದಿದ್ದರು. ಇದೀಗ ಅವರ ಪತ್ನಿ ಸುನಂದಮ್ಮ ಅವರು ಕೂಡ ಹೃದಯಾತದಿಂದ ಮೃತಪಟ್ಟಿದ್ದಾರೆ.

ಇತ್ತೀಚಿನ ಸುದ್ದಿ