ಬುದ್ಧಿಮಾಂದ್ಯತೆ, ಹೃದ್ರೋಗ, ಕ್ಯಾನ್ಸರ್, ಅಕಾಲಿಕ ಮರಣದಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?
07/04/2021
ವಯಸ್ಸಾಗುತ್ತಿದ್ದಂತೆಯೇ ಆರೋಗ್ಯವಂತ ದೇಹ ಇದ್ದರು ಕೂಡ ಬಹುತೇಕರು ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಳ್ಳುತ್ತಾರೆ. ಮನುಷ್ಯನಿಗೆ 40 ದಾಟಿದ ಬಳಿಕ ಅವರಲ್ಲಿ ನೆನಪಿನ ಶಕ್ತಿ ಕಡಿಮೆಯಾಗುತ್ತಾ ಹೋಗುತ್ತದೆ. ಈ ಆಧಾರದಲ್ಲಿ ನಡೆಸಲಾದ ಅಧ್ಯಯನವೊಂದು ಇದೀಗ 40 ವರ್ಷದಿಂದ ಮೇಲ್ಪಟ್ಟ ನಾಗರಿಕರಿಗೆ ಸಿಹಿ ಸುದ್ದಿ ನೀಡಿದೆ.
ಸಿಂಗಾಪುರದ ರಾಷ್ಟ್ರೀಯ ವಿಶ್ವವಿದ್ಯಾಲಯವು 1993 ಮತ್ತು 2016 ರ ನಡುವೆ 17,000 ಜನರ ಮೇಲೆ ನಡೆಸಲಾದ ಈ ಅಧ್ಯಯನದಲ್ಲಿ ತಿಳಿದು ಬಂದ ವಿಚಾರ ಏನೆಂದರೆ, ವಾರದಲ್ಲಿ ಕನಿಷ್ಠ 2 ದಿನ ಡ್ರೈಫ್ರುಟ್ಸ್ (Nuts ಅಥವಾ ಬೀಜಗಳು) ತಿನ್ನುವುದರಿಂದ 60 ವರ್ಷಗಳವರೆಗೆ ಅವರಿಗೆ ಬುದ್ಧಿಮಾಂಧ್ಯತೆ ಕಾಡುವುದಿಲ್ಲ.
ಡ್ರೈಫುಡ್ಸ್ ತಿನ್ನುವುದರಿಂದ ವಯೋ ವೃದ್ಧರಲ್ಲಿ ಕೂಡ ನೆನಪಿನ ಶಕ್ತಿ ಶೇ.60ರಷ್ಟು ಹೆಚ್ಚಳವಾಗುತ್ತದೆ. ಹೃದ್ರೋಗ, ಕ್ಯಾನ್ಸರ್, ಅಕಾಲಿಕ ಮರಣ ಅಪಾಯ ಕಡಿಮೆಯಾಗುತ್ತದೆ. ಅಲ್ಲದೇ ಉಸಿರಾಟದ ಸಮಸ್ಯೆ ಹಾಗೂ ಮಧುಮೇಹ(ಶುಗರ್) ಶೇ.40ರಷ್ಟು ಕಡಿಮೆಯಾಗುತ್ತದೆ ಎಂದು ಅಧ್ಯಯನದಿಂದ ತಿಳಿದು ಬಂದಿದೆ.