ಧ್ರುವನಾರಾಯಣ ಪತ್ನಿ ವಿಧಿವಶ: ಶನಿವಾರ ಅಂತ್ಯಕ್ರಿಯೆ

ಚಾಮರಾಜನಗರ: ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್. ಧ್ರುವನಾರಾಯಣ ನಿಧನರಾದ ಬೆನ್ನಲ್ಲೇ ಅವರ ಪತ್ನಿ ವೀಣಾ ಧ್ರುವನಾರಾಯಣ ಕೂಡ ಇಂದು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ವೀಣಾ (50) ಅವರು ಧ್ರುವ ಅವರಿಗೆ ಅಕ್ಕನ ಮಗಳಾಗಿದ್ದರು. ಬಿ.ಎಸ್.ಸಿ ವ್ಯಾಸಂಗ ಮಾಡಿದ್ದ ವೀಣಾ ಕಳೆದ 16 ವರ್ಷಗಳಿಂದ ಗಂಭೀರ ಆರೋಗ್ಯ ಸಮಸ್ಯೆಗೆ ತುತ್ತಾಗಿದ್ದರು. ರಾಜಕೀಯ ಮತ್ತು ಪತ್ನಿ ಕಡೆ ಗಮನ ಎರಡನೂ ಸಂಭಾಳಿಸಿಕೊಂಡು ಹೋಗುತ್ತಿದ್ದ ಧ್ರುವನಾರಾಯಣ ಅವರಿಗೂ ಪತ್ನಿ ನೈತಿಕ ಸ್ಥೈರ್ಯ ತುಂಬಿದ್ದರು. ಆದರೆ, ಧ್ರುವ ಅಗಲಿದ ಬೆನ್ನಲ್ಲೇ ಬೇಸರ ಮನೆ ಮಾಡಿ ಆರೋಗ್ಯ ಬಿಗಡಾಯಿಸಿತು.
ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಕಳೆದ 20 ದಿನಗಳಿಂದ ನಿರಂತರ ಚಿಕಿತ್ಸೆ ಕೊಟ್ಟರೂ ಫಲಿಸದೇ ಇಂದು ಅಗಲಿದ್ದಾರೆ. ದೆಹಲಿಯಿಂದ ಕೈ ನಾಯಕರು ಬರುವ ಹಿನ್ನೆಲೆಯಲ್ಲಿ ಮೈಸೂರಿನ ನಿವಾಸದಲ್ಲೇ ಸಂಜೆವರೆಗೂ ಅಂತಿಮ ದರ್ಶನ ಇರಲಿದ್ದು ಅದಾದ ಬಳಿಕ ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮಕ್ಕೆ ಪಾರ್ಥೀವ ಶರೀರ ತರಲಾಗುತ್ತದೆ. ಶನಿವಾರ 11 ರ ಸುಮಾರಿಗೆ ಹೆಗ್ಗವಾಡಿಯಲ್ಲಿ ಪತಿ ಸಮಾಧಿ ಬಳಿಯೇ ವೀಣಾ ಅವರ ಅಂತ್ಯಕ್ರಿಯೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw