ತಡರಾತ್ರಿ ಚಾಮರಾಜನಗರಕ್ಕೆ ತಲುಪಿದ ಧ್ರುವ ಪಾರ್ಥಿವ ಶರೀರ; ಜನಸಾಗರ, ಕಂಬನಿ‌ - Mahanayaka

ತಡರಾತ್ರಿ ಚಾಮರಾಜನಗರಕ್ಕೆ ತಲುಪಿದ ಧ್ರುವ ಪಾರ್ಥಿವ ಶರೀರ; ಜನಸಾಗರ, ಕಂಬನಿ‌

dhruvanarayan
12/03/2023

ಚಾಮರಾಜನಗರ: ಚಾಮರಾಜನಗರ ಮಾಜಿ ಸಂಸದ, ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ ಅವರ ಪಾರ್ಥೀವ ಶರೀರ ಚಾಮರಾಜನಗರಕ್ಕೆ ರಾತ್ರಿ 12.30 ರ ಸುಮಾರಿಗೆ ತಲುಪಿತು.

ಭುವನೇಶ್ವರಿ ವೃತ್ತದಲ್ಲಿ ಜಮಾಯಿಸಿದ್ದ ಕಾರ್ಯಕರ್ತರು, ಅಭಿಮಾನಿಗಳು ಭಜನೆ, ಹಾಡುಗಳ ಮೂಲಕ ದುಃಖ‌ ತೋಡಿಕೊಂಡರು. ಮಧ್ಯಾಹ್ನ 2 ರ ಹೊತ್ತಿಗೆ ಪಾರ್ಥಿವ ಶರೀರವನ್ನು ತರಬೇಕೆಂದು ಕೊಂಡಿದ್ದರೂ ಸಾವಿರಾರು ಮಂದಿ ಮೈಸೂರಿನಲ್ಲಿ ಅಂತಿಮ ದರ್ಶನ ಪಡೆಯಲು ಆಗಮಿಸಿದ್ದರಿಂದ ರಾತ್ರಿ 12.30 ರ ಸುಮಾರಿಗೆ ಚಾಮರಾಜನಗರಕ್ಕೆ ತಲುಪಿತು.

ಚಾಮರಾಜನಗರಕ್ಕೆ ಬರುವ ಮಾರ್ಗ ಮಧ್ಯ ಮುತ್ತಿಗೆ, ಬದನಗುಪ್ಪೆ, ಬೆಂಡರವಾಡಿ ಸೇರಿದಂತೆ ದಾರಿ ಉದ್ದಕ್ಕೂ ನೆಚ್ಚಿನ ನಾಯಕನಿಗೆ ಗ್ರಾಮಸ್ಥರು ಅಂತಿಮ‌ ನಮನ ಸಲ್ಲಿಸಿದರು.‌ ನೆಚ್ಚಿನ ನಾಯಕನಿಗೆ ಅಂತಿಮ‌ ನಮನ‌ ಸಲ್ಲಿಸಲೂ ಸಾವಿರಾರು ಮಂದಿ ಮಧ್ಯರಾತ್ರಿ ತನಕವೂ ಕಾದು ಕೊನೆಯ ದರ್ಶನ ಪಡೆದರು.


Provided by

ಚಾಮರಾಜನಗರದ ಸಂತೇಮರಹಳ್ಳಿ ವೃತ್ತದಿಂದ ಆರಂಭವಾದ ಮೆರವಣಿಗೆ ಸತ್ತಿ ರಸ್ತೆಯಲ್ಲಿನ ಕಾಂಗ್ರೆಸ್ ಕಚೇರಿಗೆ ತಲುಪಿ ಪಕ್ಷದ ವತಿಯಿಂದ ನಮನ‌ ಸಲ್ಲಿಸಿ ಹರವೆ ಗ್ರಾಮದ ಮಾರ್ಗವಾಗಿ ಸ್ವಗ್ರಾಮ ಹೆಗ್ಗವಾಡಿ ತಲುಪಿತು.

ಅಂತಿಮ ಯಾತ್ರೆಯಲ್ಲಿ ಧ್ರುವನಾರಾಯಣ ಪುತ್ರ ದರ್ಶನ್, ಚಾಮರಾಜನಗರ ಶಾಸಕ ಪುಟ್ಟರಂಗಶೆಟ್ಟಿ, ಎಚ್.ಡಿ‌.ಕೋಟೆ ಶಾಸಕ ಅನಿಲ್ ಚಿಕ್ಕಮಾದು ಹಾಗೂ ಇನ್ನಿತರರು ಇದ್ದರು.

ಚಾಮರಾಜನಗರ ಜಿಲ್ಲೆಯಾದ್ಯಂತ ಧ್ರುವನಾರಾಯಣ ಅವರ ಕೌಟೌಟ್ ಅಳವಡಿಸಿ ಮೌನಾಚರಣೆ ಮಾಡಿರುವ ಅಭಿಮಾನಿಗಳು ಅಶೃತರ್ಪಣ ಅರ್ಪಿಸಿದ್ದಾರೆ.‌ ಹೆಗ್ಗವಾಡಿ ಗ್ರಾಮದಲ್ಲಿ ಭಾನುವಾರ ಅಂತ್ಯಕ್ರಿಯೆ ನಡೆಯಲಿದ್ದು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ