‘ಗೌಳಿ’ ಫಸ್ಟ್ ಲುಕ್ ಬಿಡುಗಡೆ: ಧೂಳೆಬ್ಬಿಸಿದ ಶ್ರೀನಗರ ಕಿಟ್ಟಿ

Shreenagara kitty
27/03/2021

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕೇವಲ ಪೋಷಕ ಪಾತ್ರಕ್ಕೆ ಮಾತ್ರವೇ ಸೀಮಿತವಾಗಿದ್ದ ಶ್ರೀನಗರ ಕಿಟ್ಟಿ ಇದೀಗ ಹೊಸ ಅವತಾರದಲ್ಲಿ ಪ್ರತ್ಯಕ್ಷರಾಗಿದ್ದು, ಅವರು ಹಲವು ಸಮಯಗಳ ನಂತರ ‘ಗೌಳಿ’ ಎಂಬ ಚಿತ್ರದಲ್ಲಿ ನಟಿಸಲಿದ್ದಾರೆ.

ಗೌಳಿ ಚಿತ್ರದ ಫಸ್ಟ್ ಲುಕ್ ಶುಕ್ರವಾರ ಬಿಡುಗಡೆಯಾಗಿದ್ದು, ಶ್ರೀನಗರ ಕಿಟ್ಟಿ ಗಂಭೀರವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರೀನಗರ ಕಿಟ್ಟಿ ಅವರ ಈ ಲುಕ್ ಚಿತ್ರದ ಬಗ್ಗೆ ಹೊಸ ನಿರೀಕ್ಷೆಗಳು ಹುಟ್ಟಲು ಕಾರಣವಾಗಿದೆ. ಆದರೆ, ಚಿತ್ರದ ಕಥೆಯ ಬಗ್ಗೆ ಯಾವುದೇ ರಹಸ್ಯವನ್ನು ಚಿತ್ರ ತಂಡ ಬಿಟ್ಟುಕೊಟ್ಟಿಲ್ಲ.

ಹಲವು ಚಿತ್ರಗಳಲ್ಲಿ ನಿರ್ದೇಶಕರ ಜೊತೆಗೆ ಕೆಲಸ ಮಾಡಿ ಅನುಭವ ಹೊಂದಿರುವ  ಸೂರ ಎನ್ನುವವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶ ಮಾಡುತ್ತಿದ್ದಾರೆ. ಸೋಹನ್ ಫಿಲಂ ಫ್ಯಾಕ್ಟರಿ ಮೂಲಕ ರಘು ಸಿಂಗಂ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಅಂದ ಹಾಗೆ ಈ ಚಿತ್ರಕ್ಕೆ ಶಶಾಂಕ್ ಶೇಷಗಿರಿ ಸಂಗೀತ ಸಂಯೋಜಿಸಿದ್ದಾರೆ.

ರಾಬರ್ಟ್ ಚಿತ್ರದ ನಾಯಕಿ ಎಂತಹ ಚಿತ್ರ ಶೇರ್ ಮಾಡಿದ್ದಾರೆ ನೋಡಿ

ಇತ್ತೀಚಿನ ಸುದ್ದಿ

Exit mobile version