ಸಾಯುವವರಿಗೆ ಏನು ಮಾಡಲು ಸಾಧ್ಯ? ನಾವು ಉಳಿದರೆ ಸಾಕು | ನಾಲಿಗೆ ಹರಿಬಿಟ್ಟ ಉಮೇಶ್ ಕತ್ತಿ - Mahanayaka

ಸಾಯುವವರಿಗೆ ಏನು ಮಾಡಲು ಸಾಧ್ಯ? ನಾವು ಉಳಿದರೆ ಸಾಕು | ನಾಲಿಗೆ ಹರಿಬಿಟ್ಟ ಉಮೇಶ್ ಕತ್ತಿ

umesh katti
09/05/2021

ಬಾಗಲಕೋಟೆ:  ಇಂತಹವರೆಲ್ಲ ಸಚಿವರಾದರೆ, ರಾಜ್ಯ ಎಲ್ಲಿಗೆ ಉದ್ದಾರ ಆಗೋದು? ಮೊನ್ನೆಯಷ್ಟೇ, ಪಡಿತರ ಅಕ್ಕಿ ಕೇಳಿದ್ದಕ್ಕೆ ಎಲ್ಲ ಸತ್ತೋಗಿ ಎಂದು ನಾಲಿಗೆ ಹರಿಯಬಿಟ್ಟಿದ್ದ ಆ(ಅಹಂಕಾರಿ)ಹಾರ ಸಚಿವ ಉಮೇಶ್ ಕತ್ತಿ ಇದೀಗ ಮತ್ತೆ ತನ್ನ ಹುಲುಕು ಬುದ್ಧಿ ತೋರಿಸಿದ್ದು, ಸಂವೇದನಾರಹಿತ ಮಾತುಗಳನ್ನಾಡಿದ್ದಾರೆ.


Provided by

 ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಸಚಿವ, ಕೋವಿಡ್ ನಿಂದ ಹಲವರು ಸಾಯುತ್ತಿದ್ದಾರೆ. ರೆಮ್ ಡಿಸಿವಿರ್ ಕೊಟ್ಟರೂ ಜನ ಸಾಯುತ್ತಾರೆ ಅದಕ್ಕೆ ಏನು ಮಾಡಲು ಸಾಧ್ಯ? ಅವರಿಗೆ ಹಾರ್ಟ್ ಸಮಸ್ಯೆ, ಶುಗರ್ ಇರುತ್ತೆ. ಧೈರ್ಯ ಇಲ್ಲದವರು ಸಾಯುತ್ತಾರೆ ಎಂದು ತೀರಾ  ನಿರ್ಲಕ್ಷ್ಯದ ಮಾತುಗಳನ್ನಾಡಿದ್ದಾರೆ.

ಸಾಯುವವರು ಏಕೆ ಸತ್ತರೆಂದು ಹೇಳಲಾಗದು. ನೀವು ಉಳಿಯುತ್ತೀರೋ ಬಿಡ್ತಿರೋ ಆದರೆ ನಾವಂತು ಉಳಿಯಬೇಕು. ದೇಶದಲ್ಲಿ 130 ಕೋಟಿ ಜನಸಂಖ್ಯೆಯಿದೆ ಯಾರ್ಯಾರು ಯಾಕೆ ಸಾಯುತ್ತಿದ್ದಾರೆ ಎಂದು ಹೇಳಲಾಗುತ್ತಾ? ಎಂದು ರಾಜ್ಯದ ಜನರ ಸಾವನ್ನು ಅಪಹಾಸ್ಯ ಮಾಡಿದ್ದಾರೆ.


Provided by

ಇಡೀ ರಾಜ್ಯಕ್ಕೆ ಕೊರೊನಾ ಒಂದು ಆತಂಕಕಾರಿ ವಿಚಾರವಾದರೆ, ಸಚಿವ ಉಮೇಶ್ ಕತ್ತಿಗೆ ಕೊರೊನಾದಿಂದಾಗುತ್ತಿರುವ ಸಾವು ಕೂಡ ಕಾಮಿಡಿ ರೀತಿಯಲ್ಲಿ ಕಾಣುತ್ತಿದೆ. ಸಾವನ್ನು ವ್ಯಂಗ್ಯ ಮಾಡಿ ಖುಷಿ ಪಡುತ್ತಿರುವ ಕತ್ತಿ ನಿಜಕ್ಕೂ ಬದುಕಿಯೂ ಸತ್ತಂತಾಗಿದ್ದಾರೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ