ಡಯಾಲಿಸಿಸ್ ಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯ ಮೇಲೆ ವಾರ್ಡ್ ಬಾಯ್ ನಿಂದ ಅತ್ಯಾಚಾರ! - Mahanayaka
6:22 PM Tuesday 24 - December 2024

ಡಯಾಲಿಸಿಸ್ ಗಾಗಿ ಆಸ್ಪತ್ರೆಗೆ ಬಂದಿದ್ದ ಮಹಿಳೆಯ ಮೇಲೆ ವಾರ್ಡ್ ಬಾಯ್ ನಿಂದ ಅತ್ಯಾಚಾರ!

dialysis
03/08/2021

ಇಂದೋರ್: ಡಯಲಿಸಿಸ್ ಮಾಡಿಸಲೆಂದು ಆಸ್ಪತ್ರೆಗೆ ಆಗಮಿಸಿದ್ದ 50 ವರ್ಷ ವಯಸ್ಸಿನ ರೋಗಿಯ ಮೇಲೆ ವಾರ್ಡ್ ಬಾಯ್ ವೋರ್ವ ಅತ್ಯಾಚಾರ ನಡೆಸಿರುವ ಘಟನೆ ಮಧ್ಯಪ್ರದೇಶದ ಇಂದೋರ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ನಡೆಸಿದ್ದು, ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ.

ಜುಲೈ 28ರಂದು ಇಲ್ಲಿನ ಮಹಾರಾಜ ಯಶ್ವಂತ್ ರಾವ್ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದ್ದು, 32 ವರ್ಷ ವಯಸ್ಸಿನ ಆರೋಪಿ ಸೋಮವಾರ ರಾತ್ರಿ ಈ ಕೃತ್ಯ ನಡೆಸಿದ್ದಾನೆ ಎಂದು ತಿಳಿದು ಬಂದಿದ್ದು, ಆತನ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ ಎಂದು ಸಂಯೋಗಿತಗಂಜ್ ಪೊಲೀಸ್ ಠಾಣೆಯ ಅಧಿಕಾರಿ ರಾಜೀವ್ ತಿಪಾಠಿ ಹೇಳಿದ್ದಾರೆ.

ಸಂತ್ರಸ್ತ ಮಹಿಳೆಯು ನೆರೆಯ ಧಾರ್ ಜಿಲ್ಲೆಯವರಾಗಿದ್ದು, ಜುಲೈ 28ರಂದು ಎಂವೈಎಚ್ ಆಸ್ಪತ್ರೆಗೆ ಡಯಾಲಿಸಿಸ್ ಗೆಂದು ಬಂದಿದ್ದರು ಎನ್ನಲಾಗಿದ್ದು, ಈ ವೇಳೆ ವಾರ್ಡ್ ಬಾಯ್ ಆಕೆಯ ಬಟ್ಟೆ ಬದಲಿಸಲು ಪ್ರತ್ಯೇಕ ಕೋಣೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನೂ ಅತ್ಯಾಚಾರ ವೇಳೆ ಮಹಿಳೆ ವಿರೋಧ ವ್ಯಕ್ತಪಡಿಸಿದ ವೇಳೆ, ನಿನ್ನ ಮೇಲೆ ಅತ್ಯಾಚಾರ ನಡೆಸಲಾಗಿದೆ ಎಂದು ತಿಳಿದರೆ, ಸಮಾಜ ನಿನ್ನನ್ನು ಯಾವ ರೀತಿ ನೋಡುತ್ತೆ ಗೊತ್ತಾ ಎಂದು ಸಮಾಜದ ಭಯವನ್ನು ಸೃಷ್ಟಿಸಿದ್ದಾನೆ. ಇದಲ್ಲದೇ ಮಹಿಳೆ ದೂರು ನೀಡಬಾರದು ಎನ್ನುವ ಕಾರಣಕ್ಕೆ ಎರಡು ದಿನಗಳ ಕಾಲ ಮಹಿಳೆಯನ್ನು ಖಾಸಗಿ ವಾರ್ಡ್ ಗೆ ದಾಖಲಿಸಿದ್ದು, ಬಳಿಕ ಮಹಿಳೆಗೆ 1 ಸಾವಿರ ರೂಪಾಯಿ ನೀಡಿ ಮನೆಗೆ ವಾಪಸ್ ಕಳುಹಿಸಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನೂ ಘಟನೆ ನಡೆದ ಎರಡು ದಿನಗಳ ಬಳಿಕ ಅತ್ಯಾಚಾರದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.  ಪೊಲೀಸರು ಐಪಿಸಿ ಸೆಕ್ಷನ್ ಗಳಡಿಯಲ್ಲಿ ಅತ್ಯಾಚಾರದ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆ ಬೆಳಕಿಗೆ ಬಂದ ಬೆನ್ನಲ್ಲೇ ಆರೋಪಿಯೂ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇನ್ನಷ್ಟು ಸುದ್ದಿಗಳು…

 

ರಾತ್ರಿ ಫೋನ್ ನಲ್ಲಿ ಪತಿ-ಪತ್ನಿ ನಡುವೆ ವಾಗ್ವಾದ | ವಿವಾಹವಾಗಿ 8 ತಿಂಗಳಲ್ಲಿ ನಡೆಯಿತು ದುರಂತ!

ಚಟ್ನಿ ರುಚಿಕರವಾಗಿ ತಯಾರಿಸಿಲ್ಲ ಎಂದು ಪತ್ನಿಯನ್ನು ಹೊಡೆದುಕೊಂದ ಪತಿ!

ನನ್ನ ಸ್ನೇಹಿತರ ಲೈಂಗಿಕ ಬಯಕೆ ತೀರಿಸು ಎಂದು ಪ್ರಿಯಕರನಿಂದಲೇ ಬ್ಲ್ಯಾಕ್ ಮೇಲ್ | 40 ಅಡಿ ಎತ್ತರದಿಂದ ನದಿಗೆ ಹಾರಿದ ಯುವತಿ!

ಕೊರೊನಾ 3ನೇ ಅಲೆ ಭೀತಿ:  ಇಂದು ರಾತ್ರಿ 10ರಿಂದ ಬೆಂಗಳೂರಿನಲ್ಲಿ ನೈಟ್ ಕರ್ಫ್ಯೂ ಜಾರಿ

ಪ್ರೀತಿಸಿಲು ನಿರಾಕರಿಸಿದ ಬಾಲಕಿಯನ್ನು ದಾರಿ ಮಧ್ಯೆ ತಡೆದು ಯುವಕನಿಂದ ಘೋರ ಕೃತ್ಯ!

ಇತ್ತೀಚಿನ ಸುದ್ದಿ