ರಾವಣನಿಗೆ ಉದ್ದಕ್ಕೆ 10 ತಲೆ ಇದ್ದವೇ, ಸುತ್ತಲೂ 10 ತಲೆಗಳಿದ್ದವೆ?
ರಾಮಾಯಣದ ಕಥೆಗಳನ್ನು ಆಧರಿಸಿದ ಆದಿಪುರುಷ್ ಚಿತ್ರ ಇದೀಗ ನಾನಾ ಕಾರಣಗಳಿಗೆ ಭಾರೀ ಟ್ರೋಲ್ ಆಗುತ್ತಿದೆ. ಈ ಪೈಕಿ 10 ತಲೆಯ ರಾವಣನ ಪಾತ್ರವಂತೂ ಭಾರೀ ಟ್ರೋಲ್ ಆಗಿದೆ. ಚಿತ್ರದಲ್ಲಿ ಬಳಸಿರುವ ಗ್ರಾಫಿಕ್ಸ್ ಗಳನ್ನು ನೋಡಿ ಚಿತ್ರ ಪ್ರಿಯರು ಬಿದ್ದು ಬಿದ್ದು ನಗುತ್ತಿದ್ದಾರೆ.
ರಾವಣನಿಗೆ 10 ತಲೆ ಇತ್ತು ಅನ್ನೋ ಕಲ್ಪನೆ ಪುರಾಣಗಳಿಂದ ಬಂದಿದೆ. ಆದ್ರೆ, ಆ 10 ತಲೆಗಳು ಉದ್ದಕ್ಕೆ ಇದ್ದವೇ? ಅಥವಾ ಸುತ್ತಲು ಇದ್ದವೇ ಅನ್ನೋ ವಿಚಾರ ಈವರೆಗೆ ಚರ್ಚೆಯಾಗಿರಲಿಲ್ಲ. 10 ತಲೆಗಳು ಮಲ್ಲಿಗೆ ಮುಡಿದಂತೆ ಉದ್ದಕ್ಕೆ ಇದ್ದವು ಅನ್ನೋದು ಹಳಬರ ಕಲ್ಪನೆಯಾದ್ರೆ, ಆದಿ ಪುರುಷ್ ನ ಹೊಸಬರ ಕಲ್ಪನೆಯ ಪ್ರಕಾರ, ರಾವಣನ ತಲೆಗಳು ಸುತ್ತಲೂ ಇದ್ದವು ಅನ್ನೋದಾಗಿದೆ.
ಒಬ್ಬ ಮನುಷ್ಯನಿಗೆ 10 ತಲೆಗಳು ನಿಜವಾಗಿ ಇರಲು ಸಾಧ್ಯವೇ ಎಂದು ಪ್ರಶ್ನಿದ್ರೆ, ಅದು ಸಾಧ್ಯವಿಲ್ಲದ ಮಾತಾಗಿದೆ. ಆದರೆ, ಪುರಾಣಗಳಲ್ಲಿ ಕಥೆಗಳ ಅನುಕೂಲತೆಗೆ ಇಂತಹ ವರ್ಣನೆಗಳನ್ನು ಮಾಡಲಾಗಿದೆ. ಹಳಬರ ಕಲ್ಪನೆಗೆ ವಿರುದ್ಧವಾಗಿರುವ ಆದಿ ಪುರುಷ್ ಅನ್ನೋ ಸಿನಿಮಾ ಸಹಜವಾಗಿ ಟ್ರೋಲ್ ಆಗಿದೆ.
ರಾವಣನಿಗೆ ಇರುವ 10 ತಲೆಗಳು ಜ್ಞಾನದ ಸಂಕೇತವಾಗಿವೆ. ರಾವಣಗೆ ಇದ್ದದ್ದು ಒಂದೇ ತಲೆ, ಆದ್ರೆ, 10 ತಲೆಗಳಲ್ಲಿ ಯೋಚಿಸಬಹುದಾಗಿರುವುದನ್ನು ಆತ ಒಂದು ತಲೆಯಲ್ಲಿ ಯೋಚಿಸುತ್ತಿದ್ದ. ಹಾಗಾಗಿ ರಾವಣನಿಗೆ 10 ತಲೆ ಇದೆ ಎನ್ನಲಾಗುತ್ತಿದೆ ಎಂದು ವಾದಿಸುವವರು ಕೂಡ ಇದ್ದಾರೆ. ಕಥೆಗಳು ಯಾವಾಗಲೂ ಕಥೆಗಳಾಗಿರುತ್ತವೆ. ಆದ್ರೆ ವಾಸ್ತವ ಬೇರೆಯೇ ಆಗಿರುತ್ತದೆ ಅನ್ನೋದು ಆದಿ ಪುರುಷ್ ಅನ್ನೋ ಸಿನಿಮಾ ಬಿಡುಗಡೆಯ ಬೆನ್ನಲ್ಲೇ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw