ಆಪ್ ಮೇಲೆ ಕೋಪ: ಬಿಜೆಪಿ ಸೇರಿದ ಎಎಪಿ ಮುಖಂಡ ಕೈಲಾಶ್‌ ಗೆಹ್ಲೋಟ್‌ - Mahanayaka

ಆಪ್ ಮೇಲೆ ಕೋಪ: ಬಿಜೆಪಿ ಸೇರಿದ ಎಎಪಿ ಮುಖಂಡ ಕೈಲಾಶ್‌ ಗೆಹ್ಲೋಟ್‌

18/11/2024

ಸರ್ಕಾರ ತಮ್ಮ ಬೇಡಿಕೆಗಳನ್ನು ಈಡೇರಿಸುತ್ತಿಲ್ಲ ಎಂದು ಅಸಮಾಧಾನಗೊಂಡಿದ್ದ, ಆಪ್‌ ನ ಪ್ರಭಾವಿ ಮುಖಂಡ, ಸಚಿವ ಕೈಲಾಶ್‌ ಗೆಹ್ಲೋಟ್‌, ಸೋಮವಾರ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ. ಆಮ್ ಆದ್ಮಿ ಪಕ್ಷದಲ್ಲಿ ಕೊನೆಗೂ ಆಪರೇಷನ್ ಕಮಾಲ್ ಮಾಡುವಲ್ಲಿ ಬಿಜೆಪಿ ಯಶಸ್ವಿಯಾಗಿದೆ.

ಹರ್ಯಾಣ ಮಾಜಿ ಮುಖ್ಯಮಂತ್ರಿ ಮನೋಹರ್‌ ಲಾಲ್‌ ಖಟ್ಟರ್‌, ದೆಹಲಿ ಬಿಜೆಪಿ ವರಿಷ್ಠ ವೀರೇಂದ್ರ ಸಚ್‌ ದೇವ್‌ ಹಾಗೂ ಇತರ ಬಿಜೆಪಿ ಮುಖಂಡರ ಸಮ್ಮುಖದಲ್ಲಿ ನಜಾಫ್‌ ಗಢ್‌ ಶಾಸಕ ಕೈಲಾಶ್‌ ಬಿಜೆಪಿಗೆ ಸೇರ್ಪಡೆಗೊಳ್ಳುವ ಮೂಲಕ ಅವರ ಮುಂದಿನ ರಾಜಕೀಯ ನಡೆ ಕುರಿತ ಊಹಾಪೋಹಕ್ಕೆ ತೆರೆ ಬಿದ್ದಂತಾಗಿದೆ.

ಆಮ್‌ ಆದ್ಮಿ ಸರ್ಕಾರದಲ್ಲಿ ಕೈಲಾಶ್‌ ಗೆಹ್ಲೋಟ್‌ ಅವರು ಸಾರಿಗೆ, ಆಡಳಿತ ಸುಧಾರಣೆ, ಮಾಹಿತಿ ಮತ್ತು ತಂತ್ರಜ್ಞಾನ, ಗೃಹ ಮತ್ತು ಮಹಿಳಾ ಹಾಗೂ ಮಕ್ಕಳ ಕಲ್ಯಾಣದಂತಹ ಪ್ರಮುಖ ಖಾತೆಯನ್ನು ಹೊಂದಿದ್ದರು.

ಈ ಬೆಳವಣಿಗೆ ಕುರಿತು ಮೌನ ಮುರಿದ ಕೇಜ್ರಿವಾಲ್‌, ಅವರಿಗೆ (ಗೆಹ್ಲೋಟ್)‌ ಮುಕ್ತ ಅವಕಾಶವಿದೆ. ಅವರು ಯಾವ ಪಕ್ಷಕ್ಕೂ ಬೇಕಾದರೂ ಸೇರ್ಪಡೆಯಾಗಬಹುದು ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಕಾಂಗ್ರೆಸ್‌ ಮುಖಂಡ, ಮಾಜಿ ಶಾಸಕ ಸುಮೇಶ್‌ ಶೂಕೀನ್‌ ಅವರು ಆಮ್‌ ಆದ್ಮಿ ಪಕ್ಷಕ್ಕೆ ಸೇರ್ಪಡೆಗೊಂಡ ವೇಳೆ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಕೇಜ್ರಿವಾಲ್‌ ಈ ಹೇಳಿಕೆ ನೀಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ