ಕರ್ನಾಟಕದಲ್ಲಿ ಡೀಸೆಲ್ ಇನ್ನು ದುಬಾರಿ: 2 ರೂಪಾಯಿ ಬೆಲೆ ಏರಿಕೆ

01/04/2025
ಬೆಂಗಳೂರು: ರಾಜ್ಯದಲ್ಲಿ ಜನರ ಮೇಲೆ ಒಂದರ ಹಿಂದೊಂದರಂತೆ ಬೆಲೆ ಏರಿಕೆ ಬರೆ ಬೀಳುತ್ತಿದ್ದು, ಇದೀಗ ಡೀಸೆಲ್ ಬೆಲೆ ಲೀಟರ್ ಗೆ 2 ರೂ.ಗಳಷ್ಟು ಹೆಚ್ಚಾಗಲಿದೆ.
ಕರ್ನಾಟಕ ಸರ್ಕಾರ ಡೀಸೆಲ್ ಮೇಲಿನ ತೆರಿಗೆಯನ್ನು ಶೇ 2.73 ರಷ್ಟು ಹೆಚ್ಚಳ ಮಾಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದೆ. ಹೀಗಾಗಿ ಡೀಸೆಲ್ ಬೆಲೆ ಲೀಟರ್ಗೆ 2 ರೂ.ಗಳಷ್ಟು ಹೆಚ್ಚಾಗಲಿದೆ.
ಈ ಹಿಂದೆ ಶೇ.18.44 ರಷ್ಟು ಇದ್ದ ತೆರಿಗೆ, ಇದೀಗ ಶೇ 21.17ಕ್ಕೆ ಏರಿಕೆಯಾಗಿದೆ. ಸದ್ಯ ಬೆಂಗಳೂರಲ್ಲಿ ಡಿಸೇಲ್ 88.99 ರೂ. ಮಾರಾಟವಾಗುತ್ತಿದೆ. ಬೆಲೆ ಏರಿಕೆಯಿಂದ ಡೀಸೆಲ್ ಬೆಲೆ 90 ರೂ. ಆಗಲಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/HEkqDgrW2BlJLad5kZ1DX7