ಡೀಸೆಲ್ ವಾಹನಗಳು ನಿಷೇಧವಾಗುತ್ತಾ?: ವಿದ್ಯುತ್–ಗ್ಯಾಸ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ!
ನವದೆಹಲಿ: ವಿದ್ಯುತ್ ಮತ್ತು ಗ್ಯಾಸ್ ಚಾಲಿತ ವಾಹನಗಳ ಬಳಕೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ದೇಶದ ಪ್ರಮುಖ ನಗರಗಳಲ್ಲಿ 2017ರೊಳಗೆ ನಾಲ್ಕು ಚಕ್ರಗಳ ಡೀಸೆಲ್ ಚಾಲಿತ ವಾಹನಗಳ ಬಳಕೆ ನಿಷೇಧಿಸುವ ಶಿಫಾರಸು ಮಾಡಲಾಗಿದೆ ಎಂದು ವರದಿಯಾಗಿದೆ.
ಕೇಂದ್ರ ಇಂಧನ ಸಚಿವಾಲಯದ ಸಮಿತಿಯೊಂದು ಈ ಶಿಫಾರಸು ಮಾಡಿದ್ದು, 2030ರ ವೇಳೆಗೆ ಎಲೆಕ್ಟ್ರಿಕ್ ಅಲ್ಲದ ಯಾವುದೇ ಹೊಸ ಸಿಟಿ ಬಸ್ಗಳನ್ನು ಸೇರಿಸಬಾರದು. 2024 ರಿಂದ ನಗರ ಸಾರಿಗೆಗೆ ಡೀಸೆಲ್ ಬಸ್ಗಳನ್ನು ಸೇರಿಸಬಾರದು ಎಂದು ಸಮಿತಿಯು ಇಂಧನ ಸಚಿವಾಲಯದ ವೆಬ್ಸೈಟ್ನಲ್ಲಿ ಪೋಸ್ಟ್ ಮಾಡಲಾದದ ವರದಿಯಲ್ಲಿ ತಿಳಿಸಲಾಗಿದೆ.
ಮಾಜಿ ಇಂಧನ ಕಾರ್ಯದರ್ಶಿ ತರುಣ್ ಕಪೂರ್ ನೇತೃತ್ವದ ಇಂಧನ ಪರಿವರ್ತನಾ ಸಲಹಾ ಸಮಿತಿಯ ಈ ಶಿಫಾರಸುಗಳನ್ನು ಜಾರಿಗೆ ತರಲು ಪ್ರಸ್ತಾಪ ಇಟ್ಟಿದ್ದು, ಪೆಟ್ರೋಲಿಯಂ ಸಚಿವಾಲಯ ಕೇಂದ್ರ ಕ್ಯಾಬಿನೆಟ್ ಅನುಮೋದನೆಯನ್ನು ಪಡೆಯುತ್ತದೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟತೆ ಸಿಕ್ಕಿಲ್ಲ.
2024ರಿಂದ ನಗರಗಳಲ್ಲಿ ವಿದ್ಯುತ್ ಚಾಲಿತ ವಾಹನಗಳ ಹೊಸ ನೋಂದಣಿಗಳನ್ನು ಅನುಮತಿಸಬೇಕು. ಸರಕು ಸಾಗಣೆಗೆ ರೈಲ್ವೆ ಮತ್ತು ಅನಿಲ ಚಾಲಿತ ಟ್ರಕ್ಗಳನ್ನು ಹೆಚ್ಚೆಚ್ಚು ಬಳಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ. ಎರಡರಿಂದ ಮೂರು ವರ್ಷಗಳಲ್ಲಿ ರೈಲ್ವೆ ಜಾಲ ಸಂಪೂರ್ಣ ವಿದ್ಯುದೀಕರಣಗೊಳ್ಳುವ ನಿರೀಕ್ಷೆಯಿದೆ. ದೀರ್ಘ ಪ್ರಯಾಣಕ್ಕೂ ವಿದ್ಯುಚ್ಛಕ್ತಿಯಿಂದ ಚಲಿಸಲ್ಪಡುವ ಬಸ್ಗಳನ್ನು ಬಳಸಲು ಮುಂದಾಗಬೇಕು ಎಂದು ಸಮಿತಿ ಹೇಳಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw