ಎಂತ ಕಾಲವಯ್ಯ: ಪೋನ್ ಪೇ ಕ್ಯೂಆರ್ ಕೋಡ್ ಬೋರ್ಡ್ ಮೂಲಕ ಭಿಕ್ಷೆ ಬೇಡಿದ ಯುವಕ..!
ಈಗ ಭಿಕ್ಷಾಟನೆ ಎನ್ನುವುದು ಕೆಲವರಿಗೆ ಉದ್ಯೋಗವಾಗಿಬಿಟ್ಟಿದೆ. ಅದರಲ್ಲೂ ಈಗಂತೂ ಡಿಜಿಟಲ್ ಯುಗ. ಈ ಡಿಜಿಟಲ್ ಯುಗದಲ್ಲಿ ಭಿಕ್ಷುಕರು ಡಿಜಿಟಲ್ ಆಗಿ ಭಿಕ್ಷೆ ಬೇಡುವಂತಹ ದೃಶ್ಯಗಳು ಬೇರೆ ಬೇರೆ ದೇಶಗಳಲ್ಲಿ ಕೂಡ ಕಾಣ್ತಾ ಇದೆ. ಅಂತಹದೊಂದು ದೃಶ್ಯ ನಮ್ಮ ದೇಶದಲ್ಲಿ ಕೂಡಾ ಕಂಡುಬಂದಿದೆ.
ಇದಕ್ಕೆ ಪೂರಕವಾದಂತಹ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಇದರಲ್ಲಿ ಓರ್ವ ಭಿಕ್ಷುಕನು ವಿಭಿನ್ನವಾಗಿ ಭಿಕ್ಷೆ ಬೇಡುತ್ತಿರುವುದು ಕಂಡು ಬಂದಿದೆ. ಅದು ಪೋನ್ ಪೇ ಕ್ಯೂಆರ್ ಕೋಡ್ ಬೋರ್ಡ್ ಮೂಲಕ..!
ಮುಂಬೈನಲ್ಲಿ ಯುವ ಭಿಕ್ಷುಕನೊಬ್ಬ ತನ್ನ ಕೈಯಲ್ಲಿ ಕ್ಯೂಆರ್ ಕೋಡ್ ಬೋರ್ಡ್ ಅನ್ನು ಹಿಡಿದು ಜನರ ಬಳಿ ಭಿಕ್ಷೆ ಬೇಡುತ್ತಾನೆ. ರೈಲಿನಲ್ಲಿದ್ದ ಪ್ರಯಾಣಿಕರೊಬ್ಬರು ಆ ವ್ಯಕ್ತಿ ಭಿಕ್ಷೆ ಬೇಡುವ ವರ್ತನೆಯನ್ನು ವಿಡಿಯೋ ಮೂಲಕ ದಾಖಲಿಸಿದ್ದಾರೆ. ಇದೀಗ ಆ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.
ಮುಂಬೈನ ಲೋಕಲ್ ರೈಲಿನಲ್ಲಿ ಭಾರೀ ಜನಸಂದಣಿಯ ನಡುವೆ ಈ ಯುವಕ ಕೈಯಲ್ಲಿ ಕ್ಯೂಆರ್ ಕೋಡ್ ಹಿಡಿದು ಭಿಕ್ಷೆ ಬೇಡುತ್ತಿರುವ ದೃಶ್ಯ ವೈರಲ್ ಆಗಿದೆ. ಅಲ್ಲಿ ನಿಂತಿದ್ದ ಪ್ರಯಾಣಿಕರು ಭಿಕ್ಷುಕನನ್ನು ನೋಡಿ ಅಚ್ಚರಿಪಟ್ರೆ ಕೆಲವರು ನಗಾಡುತ್ತಿದ್ದಾರೆ.
ಕ್ಯೂಆರ್ ಕೋಡ್ ಹಿಡಿದುಕೊಂಡು ರಸ್ತೆಬದಿಯಲ್ಲಿ ನಿಂತಿರುವ ಭಿಕ್ಷುಕರ ವಿಡಿಯೋಗಳು ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಸದ್ಯ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ಈ ವಿಡಿಯೋವನ್ನು ಮುಂಬೈನಲ್ಲಿ ಚಿತ್ರೀಕರಿಸಲಾಗಿದೆ. ಈ ಯುವ ಭಿಕ್ಷುಕ ವಿಚಿತ್ರ ಧ್ವನಿಯಲ್ಲಿ ಹಾಡು ಹಾಡುತ್ತಾ ಭಿಕ್ಷೆ ಬೇಡುವುದನ್ನು ಕಾಣಬಹುದು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DwpZfHgaZak34xk58taiWR
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw