ದಿನೇಶ್ ಕಲ್ಲಹಳ್ಳಿಗೆ ರಾಸಲೀಲೆ ವಿಡಿಯೋ ದೊರಕಿದ್ದು ಬೆಂಗಳೂರಿನ ಲಾಡ್ಜ್ ನಲ್ಲಿ!?
ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸಿಡಿ ದೊರಕಿದ್ದು, ಲಾಡ್ಜ್ ವೊಂದರಿಂದ ದೊರಕಿರುವುದು ಎಂದು ಹೇಳಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಳಿಸಿರುವ ಪೊಲೀಸರಿಗೆ ಈ ಮಹತ್ವದ ಮಾಹಿತಿ ಲಭ್ಯವಾಗಿದೆ.
ಸಿಸಿಬಿ, ಕಬ್ಬನ್ ಪಾರ್ಕ್ ಪೊಲೀಸರು, ದಿನೇಶ್ ಕಲ್ಲಹಳ್ಳಿ ಯಾವ ಸ್ಥಳದಿಂದ ಈ ರಾಸಲೀಲೆ ಸಿಡಿಯನ್ನು ಪಡೆದಿದ್ದಾರೆ ಎಂಬ ಬಗ್ಗೆ ತನಿಖೆ ಆರಂಭಿಸಿದ್ದು, ಈ ವೇಳೆ ಬೆಂಗಳೂರಿನ ಗಾಂಧಿನಗರದಲ್ಲಿರುವ ರಾಮಕೃಷ್ಣ ಲಾಡ್ಜ್ ನಲ್ಲಿ ದಿನೇಶ್ ಕಲ್ಲಹಳ್ಳಿ, ಸಂತ್ರಸ್ತೆ ಕುಟುಂಬದ ಸ್ನೇಹಿತನನ್ನು ಭೇಟಿ ಮಾಡಿದ್ದರು. ಆ ಸ್ಥಳದಲ್ಲೇ ವ್ಯಕ್ತಿ ಓರ್ವನಿಂದ ದಿನೇಶ್ ಸಿಡಿ ಪಡೆದಿದ್ದಾರೆ ಎಂಬ ಮಾಹಿತಿ ದೊರಕಿದೆ ಎಂದು ಹೇಳಲಾಗಿದೆ.
ಮಾರ್ಚ್ 1ರಂದು ದಿನೇಶ್ ಕಲ್ಲಹಳ್ಳಿಯನ್ನು ಭೇಟಿ ಮಾಡಿದ ವ್ಯಕ್ತಿ ಈ ಸಿಡಿಯನ್ನು ನೀಡಿದ್ದಾನೆ ಎಂದ ಹೇಳಲಾಗಿದೆ. ಇವರಿಬ್ಬರು ಮಾತನಾಡುತ್ತಿರುವ ದೃಶ್ಯಾವಳಿಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಇನ್ನೂ ಈ ಲಾಡ್ಜ್ ನಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯನ್ನು ಪೊಲೀಸರು ವಿಚಾರಣೆ ನಡೆಸಿದ್ದು, ಸದ್ಯ ಪೊಲೀಸರು ವಶಪಡಿಸಿಕೊಂಡಿರುವ ದೃಶ್ಯಗಳನ್ನು ಯಾರಿಗೂ ನೀಡದಂತೆ ತಾಕೀತು ಮಾಡಿದ್ದಾರೆ ಎಂದು ತಿಳಿದು ಬಂದಿದೆ.