ಚಾಮರಾಜೇಶ್ವರ ದೇವಾಲಯದಲ್ಲಿ ದೀಪೋತ್ಸವ ಸಂಭ್ರಮ - Mahanayaka
12:26 PM Saturday 4 - January 2025

ಚಾಮರಾಜೇಶ್ವರ ದೇವಾಲಯದಲ್ಲಿ ದೀಪೋತ್ಸವ ಸಂಭ್ರಮ

20/10/2023

ಚಾಮರಾಜನಗರ: ಇದೇ ಮೊದಲ ಬಾರಿಗೆ ಗಡಿಜಿಲ್ಲೆ ಚಾಮರಾಜನಗರದಲ್ಲಿ ಐತಿಹಾಸಿಕ ಶ್ರೀ ಚಾಮರಾಜೇಶ್ವರ ದೇವಾಲಯದಲ್ಲಿ ನವರಾತ್ರಿ ದೀಪೋತ್ಸವ ನಡೆಯಿತು.

ದೇವಾಲಯದ ಆವರಣದಲ್ಲಿ 5 ಸಾವಿರಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿ ಮಹಿಳೆಯರು, ಯುವತಿಯರು ನವರಾತ್ರಿ ಸಂಭ್ರಮ ಹೆಚ್ಚಿಸಿದರು. ಕಾರ್ಯಕ್ರಮಕ್ಕೆ ಡಿಸಿ ಶಿಲ್ಪಾನಾಗ್ ಎಡಿಸಿ ಗೀತಾ ಹುಡೇದಾ ದೀಪ ಬೆಳಗಿಸಿ ದೀಪೋತ್ಸವಕ್ಕೆ ಚಾಲನೆ ನೀಡಿದರು.

ದೇವಾಲಯದ ಸಾಲುಗುಡಿ, ನಂದಿ, ಪ್ರಾಂಗಣದಲ್ಲಿ 5 ಸಾವಿರಕ್ಕೂ ಹೆಚ್ಚು ದೀಪಗಳನ್ನು ಬೆಳಗಿಸಿ ನವರಾತ್ರಿ ದಿನದಂದು ಇಷ್ಟಾರ್ಥಗಳನ್ನು ಬೇಡಿದರು. ಅರ್ಚಕರಾದ ರಾಮಕೃಷ್ಣ ಭಾರದ್ವಾಜ್, ದರ್ಶನ್, ಸತೀಶ್, ಉಪ್ಪಾರ ಯುವ ಮುಖಂಡ ಜಯಕುಮಾರ್ ಇದ್ದರು.

ಇತ್ತೀಚಿನ ಸುದ್ದಿ