ಅಣಕು ಕಾರ್ಯಾಚರಣೆ ವೇಳೆ ಯಡವಟ್ಟು: ವಿಪತ್ತು ನಿರ್ವಹಣಾ ದಳದ ಸ್ವಯಂ ಸೇವಕ ದಾರುಣ ಸಾವು - Mahanayaka
12:04 AM Saturday 14 - December 2024

ಅಣಕು ಕಾರ್ಯಾಚರಣೆ ವೇಳೆ ಯಡವಟ್ಟು: ವಿಪತ್ತು ನಿರ್ವಹಣಾ ದಳದ ಸ್ವಯಂ ಸೇವಕ ದಾರುಣ ಸಾವು

benu soman
30/12/2022

ಕೊಚ್ಚಿನ್: ಕೇರಳದಲ್ಲಿ ಆಯೋಜಿಸಲಾಗಿದ್ದ ಅಣುಕು ಕಾರ್ಯಾಚರಣೆ ವೇಳೆ ವಿಪತ್ತು ನಿರ್ವಹಣಾ ದಳದ ಸ್ವಯಂ ಸೇವಕರೊಬ್ಬರು ಮೃತಪಟ್ಟ ದಾರುಣ ಘಟನೆ ನಡೆದಿದೆ.

ಬಿನು ಸೋಮನ್(34) ಮೃತಪಟ್ಟ ವಿಪತ್ತು ನಿರ್ವಹಣಾ ದಳದ ಸ್ವಯಂ ಸೇವಕರಾಗಿದ್ದಾರೆ. ಕೇರಳದ ಪಥನಂತಿಟ್ಟ ಜಿಲ್ಲೆಯ ಕೀಳ್ವೈಪುರದ ಮಣಿಮಾಲಾ ನದಿಯಲ್ಲಿ ಆಯೋಜಿಸಲಾಗಿದ್ದ ಪ್ರವಾಹ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನದ ವೇಳೆ ಈ ದುರ್ಘಟನೆ ನಡೆದಿದೆ.

ಪ್ರವಾಹ ರಕ್ಷಣಾ ಕಾರ್ಯಾಚರಣೆಯ ಅಣಕು ಪ್ರದರ್ಶನ ನಡೆಯುತ್ತಿದ್ದ ವೇಳೆ ಬಿನು ಸೋಮನ್ ನೀರಲ್ಲಿ ಮುಳುಗಿದ್ದು, ಈ ವೇಳೆ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧಿಕಾರಿಗಳು ಅವರನ್ನು ರಕ್ಷಿಸಿ ತಿರುವಲ್ಲಾದ ಖಾಸಗಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದರು. ಆದರೆ ಚಿಕಿತ್ಸೆ ಫಲಿಸದೇ ಅವರು ಸಾವನ್ನಪ್ಪಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರವಾಹ ಮತ್ತು ಭೂಕುಸಿತವನ್ನು ಎದುರಿಸಲು ವಿಪತ್ತು ನಿರ್ವಹಣಾ ತಂಡದ ಸನ್ನದ್ಧತೆಯನ್ನು ನಿರ್ಣಯಿಸುವ ಭಾಗವಾಗಿ ಗುರುವಾರ ಪಥನಂತಿಟ್ಟ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಅಣಕು ಪ್ರದರ್ಶನಗಳನ್ನು ಆಯೋಜಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HeAiP3WAQfT6ajtrJVJ4kP

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

 

ಇತ್ತೀಚಿನ ಸುದ್ದಿ