ಮಗಳನ್ನು ಸಾಕಲು 36 ವರ್ಷಗಳಿಂದ ಪುರುಷ ವೇಷ ಧರಿಸಿ ಬದುಕುತ್ತಿರುವ ಮಹಿಳೆ! - Mahanayaka
3:23 PM Wednesday 5 - February 2025

ಮಗಳನ್ನು ಸಾಕಲು 36 ವರ್ಷಗಳಿಂದ ಪುರುಷ ವೇಷ ಧರಿಸಿ ಬದುಕುತ್ತಿರುವ ಮಹಿಳೆ!

petchiammal
15/05/2022

ಚೆನ್ನೈ: ಪತಿಯನ್ನು ಕಳೆದುಕೊಂಡ ಮಹಿಳೆಯೊಬ್ಬರು ತಮ್ಮ ಮಗಳನ್ನು ಸಾಕಲು ಪುರುಷರ ವೇಷ ಧರಿಸಿ ಬರೋಬ್ಬರಿ 36 ವರ್ಷಗಳ ಕಾಲ ಪುರುಷನಂತೆ ಜೀವಿಸಿದ ಘಟನೆ ತಮಿಳುನಾಡಿನ ತೂತುಕುಡಿ ಜಿಲ್ಲೆಯ ನಡೆದಿದೆ.

ಪೆಚಿಯಮ್ಮಾಳ್ ಎಂಬ ಮಹಿಳೆ ಪುರುಷನಂತೆ ಬದುಕಿದ ಮಹಿಳೆಯಾಗಿದ್ದು, 20 ವರ್ಷದಲ್ಲಿರುವಾಗ ಪೆಚಿಯಮ್ಮಾಳ್ ಅವರಿಗೆ ಮದುವೆಯಾಗಿತ್ತು. ಮದುವೆಯಾಗಿ 15 ದಿನಗಳ ನಂತರ ಅವರ ಪತಿ ಹೃದಯಾಘಾತ ಸಾವನ್ನಪ್ಪಿದ್ದರು.

ಇದಾದ ಬಳಿಕ ಪೆಚಿಯಮ್ಮಾಳ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಪತಿ ಇಲ್ಲದ ಕಾರಣ ಮಗುವನ್ನು ಸಲಹುವ ಸಂಪೂರ್ಣ ಜವಾಬ್ದಾರಿ ಇವರ ಮೇಲೆ ಬಿತ್ತು. ಆದರೆ, ಪುರುಷ ಪ್ರಧಾನ ಸಮಾಜದ ಲೈಂಗಿಕ ಶೋಷಣೆಯನ್ನು ಎದುರಿಸಿ  ಹೊರಗಡೆ ಬದುಕುವುದು ಹೇಗೆ ಎನ್ನುವ ಪ್ರಶ್ನೆ ಎದುರಾದಾಗ ಪೆಚಿಯಮ್ಮಾಳ್, ಪುರುಷನ ವೇಷ ಧರಿಸಿ, ತನ್ನನ್ನು ಮುತ್ತು ಎನ್ನುವ ಹೆಸರಿನಿಂದ ಎಲ್ಲರಿಗೂ ಪರಿಚಯಿಸಿಕೊಳ್ಳಲು ಆರಂಭಿಸಿದ್ದಳು.

ಅಂದಿನಿಂದ ಪೆಚಿಯಮ್ಮಾಳ್(S Petchiammal ) ಪುರುಷರಂತೆ ಕಾಣಲು ತನ್ನ ಕೂದಲು ಕತ್ತರಿಸಿ, ಲುಂಗಿ ಮತ್ತು ಶರ್ಟ್ ಧರಿಸಲು ಆರಂಭಿಸಿದ್ದರು.  ಕಳೆದ ಮೂರು ದಶಕಗಳಿಂದ ಮುತ್ತು ಚೆನ್ನೈ ಮತ್ತು ತೂತುಕುಡಿಯ ಹೋಟೆಲ್ ಗಳು, ಚಹಾ ಅಂಗಡಿಗಳು ಮುಂತಾದ ಅನೇಕ ಸ್ಥಳಗಳಲ್ಲಿ ಕೆಲಸ ಮಾಡಿದ್ದಾರೆ. ಅವಳು ಕೆಲಸ ಮಾಡಿದಲ್ಲೆಲ್ಲಾ, ಅವರನ್ನು  ‘ಅನ್ನಾಚಿ’  ಎಂದು ಕರೆಯುತ್ತಿದ್ದರು. ಆಕೆ ಮಹಿಳೆ ಅನ್ನೋದನ್ನು 36 ವರ್ಷಗಳು ಕಳೆದರೂ ಯಾರೂ ಕಂಡು ಹಿಡಿಯಲಿಲ್ಲ. ಪರೋಟಾ ಮತ್ತು ಚಹಾ ಅಂಗಡಿಗಳಲ್ಲಿ ಕೆಲಸ ಮಾಡುತ್ತಿದ್ದರಿಂದ ಅವರನ್ನು ನಂತರ ‘ಮುತ್ತು ಮಾಸ್ಟರ್’ ಎಂದು ಜನರು ಕರೆಯುತ್ತಿದ್ದರಂತೆ.

ಪುರುಷರು ಮಾಡುವ ಎಲ್ಲ ಕೆಲಸಗಳನ್ನು ಪೆಚಿಯಮ್ಮಾಳ್ ಮಾಡುತ್ತಿದ್ದರು. ನನ್ನ ಮಗಳ ಜೀವನವನ್ನು ಸುರಕ್ಷಿತಗೊಳಿಸುವುದಕ್ಕಾಗಿ ನಾನು ಈ ರೀತಿಯಾಗಿ ಬದಲಾಗಬೇಕಾಯಿತು. ನನ್ನ ಆಧಾರ್, ವೋಟರ್ ಐಡಿ ಮತ್ತು ಬ್ಯಾಂಕ್ ಖಾತೆ ಸೇರಿದಂತೆ ಅಲ್ಲ ದಾಖಲೆಗಳನ್ನು  ಮುತ್ತು ಎಂಬ ಹೆಸರಿನಿಂದಲೇ ನಾನು ಗುರುತಿಸಿಕೊಂಡೆ ಎಂದು ಪೆಚಿಯಮ್ಮಾಳ್ ಹೇಳಿದ್ದಾರೆ.

ಪುರುಷರಂತೆ ನಾನು ವೇಷ ಧರಿಸಿ ಬದುಕಿದ್ದರಿಂದಾಗಿ ನಾನು ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ನಾನು ಸುರಕ್ಷಿತವಾಗಿದ್ದೆ. ನಾನು ಯಾವಾಗಲು ಬಸ್ಸಿನಲ್ಲಿ ಪುರುಷರು ಕುಳಿತುಕೊಳ್ಳುವ ಬಲಭಾಗದಲ್ಲಿಯೇ ಕುಳಿತುಕೊಳ್ಳುತ್ತಿದೆ. ಶೌಚಾಲಯಕ್ಕೆ ಹೋದರೆ, ಪುರುಷರ ಶೌಚಾಲಯವನ್ನೇ ಬಳಸುತ್ತಿದೆ.  ಬಸ್ಸಿನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಇದ್ದರೂ ನಾನು ಹಣ ಪಾವತಿಸಿ ಪುರುಷರಂತೆ ಪ್ರಯಾಣಿಸುತ್ತಿದ್ದೆ ಎಂದು ಪೆಚಿಯಮ್ಮಾಳ್ ಹೇಳಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ed8Qj9yS882JNjUvoz0kbs

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬಾಲಕಿಗೆ ಡಿಕ್ಕಿ ಹೊಡೆದ ಪಿಕಪ್ ಚಾಲಕನನ್ನು ಸಜೀವ ದಹನ ಮಾಡಿದ ಗ್ರಾಮಸ್ಥರು

ಬಾಹ್ಯಾಕಾಶದಿಂದ ಬಿದ್ದ ಬೃಹತ್ ಲೋಹದ ಚೆಂಡುಗಳು: ಬೆಚ್ಚಿಬಿದ್ದ ಜನ

ಶಾಸಕ ಜಿ.ಟಿ. ದೇವೇಗೌಡರ ಮೊಮ್ಮಗಳು ನಿಧನ: ಕಂಬನಿ ಮಿಡಿದ ಸಿದ್ದರಾಮಯ್ಯ, ಕುಮಾರಸ್ವಾಮಿ, ಡಿ.ಕೆ.ಶಿ.

ಖ್ಯಾತ ನಟ ಕಮಲ್ ಹಾಸನ್ ವಿರುದ್ಧ ಹೊಸ ವಿವಾದ

ಆ್ಯಸಿಡ್ ದಾಳಿಗೊಳಗಾದ ಸಂತ್ರಸ್ತರು ನೋವು ಹೇಗೆ ಸಹಿಸುತ್ತಾರೆ?: ಭಾವುಕ ನುಡಿಗಳನ್ನಾಡಿದ ಸಿಎಂ ಬೊಮ್ಮಾಯಿ

ಇತ್ತೀಚಿನ ಸುದ್ದಿ