ಜೆಡಿಎಸ್ ಸಭೆಗೆ  ಕರೆಯದೇ ಪಕ್ಷದ ಮುಖಂಡ, ಕಾರ್ಯಕರ್ತರ ಕಡೆಗಣನೆ ವಿರುದ್ಧ ಅಸಮಾಧಾನ - Mahanayaka
3:48 AM Wednesday 11 - December 2024

ಜೆಡಿಎಸ್ ಸಭೆಗೆ  ಕರೆಯದೇ ಪಕ್ಷದ ಮುಖಂಡ, ಕಾರ್ಯಕರ್ತರ ಕಡೆಗಣನೆ ವಿರುದ್ಧ ಅಸಮಾಧಾನ

thanu kottigehara
22/02/2023

ಕೊಟ್ಟಿಗೆಹಾರ: ಜೆಡಿಎಸ್ ಪಕ್ಷದ ಪಂಚರತ್ನ ಕಾರ್ಯಕ್ರಮದ ಅಂಗವಾಗಿ ಕೊಟ್ಟಿಗೆಹಾರದಲ್ಲಿ ನಡೆದ  ಬಣಕಲ್ ಹೋಬಳಿ ಘಟಕದ  ಸಭೆಗೆ ಸ್ಥಳೀಯ ಪಕ್ಷದ ಮುಖಂಡ ಹಾಗೂ ಕಾರ್ಯಕರ್ತರನ್ನು ಕರೆಯದೇ ಸಭೆ ನಡೆಸಿರುವುದರಿಂದ ಪಕ್ಷದ ಮುಖಂಡ ಹಾಗೂ ಕಾರ್ಯಕರ್ತರಲ್ಲಿ ಅಸಮಾಧಾನ ಉಂಟಾಗಿದೆ ಎಂದು ಜೆಡಿಎಸ್ ಮುಖಂಡ ತನುಕೊಟ್ಟಿಗೆಹಾರ ತಿಳಿಸಿದ್ದಾರೆ.

ಕೊಟ್ಟಿಗೆಹಾರದಲ್ಲಿ ಪತ್ರಿಕಾ ಹೇಳಿಕೆಯಲ್ಲಿ ಮಾಹಿತಿ ತಿಳಿಸಿರುವ ಅವರು ‘ಜೆಡಿಎಸ್ ಪಕ್ಷಕ್ಕೆ ಹಲವು ವರ್ಷಗಳಿಂದ ಗುರುತಿಸಿಕೊಂಡು ಕಾರ್ಯ ನಿರ್ವಹಿಸುತ್ತಾ ಪಕ್ಷದ ಮೇಲೆ ಅಭಿಮಾನ ಇಟ್ಟು ಪಕ್ಷದ ಸಂಘಟನೆಗಾಗಿ ಶ್ರಮಿಸುತ್ತಿದ್ದೇವೆ.

ಆದರೆ ಮಾರ್ಚ್ 1 ರಂದು ಮೂಡಿಗೆರೆಯಲ್ಲಿ ನಡೆಯುವ ಪಂಚರತ್ನ ಕಾರ್ಯಕ್ರಮಕ್ಕೆ ಹೋಬಳಿ ಘಟಕದಿಂದ ಕೊಟ್ಟಿಗೆಹಾರದ ನಿಸರ್ಗ ಗ್ರ್ಯಾಂಡ್ ಹೊಟೇಲ್ ನಲ್ಲಿ ಮಂಗಳವಾರ ಮುಖಂಡರು  ಸಭೆ ಏರ್ಪಡಿಸಿ ಸ್ಥಳೀಯ ಮುಖಂಡ ಹಾಗೂ ಕಾರ್ಯಕರ್ತರನ್ನು ಕರೆಯದೇ ಕಡೆಗಣಿಸಿರುವುದು ಮನಸ್ಸಿಗೆ ತುಂಬಾ ಬೇಸರ ತಂದಿದೆ.ಪಕ್ಷಕ್ಕೆ ಈಚೆಗೆ ಸೇರಿದವರನ್ನು ಕರೆದು ಹಿಂದಿನಿಂದಲೂ ಪಕ್ಷಕ್ಕೆ ದುಡಿದ ಸ್ಥಳೀಯ ಮುಖಂಡ ಹಾಗೂ ಕಾರ್ಯಕರ್ತರ ಕಡೆಗಣನೆ ಪಕ್ಷದಲ್ಲಿ ಅಸಮಾಧಾನ ತರಲು ಕಾರಣವಾಗಿದೆ ಎಂದು ಅವರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ