ದೇವನಹಳ್ಳಿ: ಜಿಲ್ಲಾ ಮಟ್ಟದ ಕೃಷಿ ಉದ್ಯೋಗ ಸಖಿ, ವನಸಖಿ ಸಾಮರ್ಥ್ಯಭಿವೃದ್ಧಿ ತರಬೇತಿ ಕಾರ್ಯಕ್ರಮ

ದೇವನಹಳ್ಳಿ: ಜಿಲ್ಲಾ ಮಟ್ಟದ ಕೃಷಿ ಉದ್ಯೋಗ ಸಖಿ ಮತ್ತು ವನಸಖಿ ಸಾಮರ್ಥ್ಯಭಿವೃದ್ಧಿ ತರಬೇತಿಯನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲ್ಲೂಕಿನಲ್ಲಿ ಎಲಿಯೂರು ಗ್ರಾಮದಲ್ಲಿ ಪ್ರಾರಂಭಿಸಲಾಯಿತು.
6 ದಿನಗಳ ತರಬೇತಿ ಕಾರ್ಯಕ್ರಮವನ್ನು ಯೋಜನಾ ನಿರ್ದೇಶಕರಾದ ವಿಠ್ಠಲ್ ಕಾವಳೆ ರವರು ಉದ್ಘಾಟಿಸಿದರು. ಜಿಲ್ಲಾ ಪಂಚಾಯತ್ ವತಿಯಿಂದ ಪ್ರತೀ ಹಳ್ಳಿಗಳಲ್ಲಿರುವ ನಿರುದ್ಯೋಗಿ ಸ್ವ ಸಹಾಯ ಸಂಘದ ಮತ್ತು ಒಕ್ಕೂಟದ ಮಹಿಳೆಯರಿಗೆ ಸ್ವ ಉದ್ಯೋಗ ಕಂಡುಕೊಳ್ಳಲು 15 ರಿಂದ 20 ಲಕ್ಷ ರೂಪಾಯಿಗಳವರೆವಿಗೂ ನೆರವು ನೀಡಲಾಗುತ್ತಿದ್ದು, ಕೃಷಿ ಮತ್ತು ಕೃಷಿಯೇತರ ಚಟುವಟಿಕೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕು ಎಂದು ಭರವಸೆಯ ಮಾತುಗಳನ್ನಾಡಿದರು.
ಇದೆ ಸಂದರ್ಭದಲ್ಲಿ RSETI ಸೊಣ್ಣಹಳ್ಳಿಪುರ ಸಂಸ್ಥೆಯ ನಿರ್ದೇಶಕರಾದ ಗಿರಿಯಪ್ಪ ನವರು ಮಾತನಾಡಿ, ಬದುಕಿನಲ್ಲಿ ಭರವಸೆಗಳಿರಬೇಕು, ಆಗಿದ್ದಾಗಲೇ ಮಾತ್ರ ಸ್ವಾಭಿಮಾನದ ಜೀವನ ನಡೆಸಲು ಸಾಧ್ಯ ಎಂದರು.
ನಿಮ್ಮ ಸ್ವಾಭಿಮಾನದ ಜೀವನ ನಿಮ್ಮ ಮಕ್ಕಳಿಗೆ ಉತ್ತಮ ಭವಿಷ್ಯ ರೂಪಿಸಬಲ್ಲದು. ಉತ್ತಮ ಪುಸ್ತಕಗಳನ್ನು ಓದಲು ನಿಮ್ಮ ಮಕ್ಕಳಲ್ಲಿ ಭರವಸೆಗಳನ್ನು ತುಂಬಬೇಕು ಎಂದು ಸ್ವಸಹಾಯ ಸಂಘದ ಮಹಿಳೆಯರಿಗೆ ಕಿವಿ ಮಾತುಗಳನ್ನು ಹೇಳಿದರು.
ಮಹಿಳೆ ಮಕ್ಕಳ ಭವಿಷ್ಯ ರೂಪಿಸುವಲ್ಲಿ ಕಂಕಣ ಬದ್ಧಳಾಗುತ್ತಾಳೋ ಅಂದು ಈ ದೇಶ ಮಾತೃ ಪಧಾನ ರಾಷ್ಟ್ರವೆಂದು ಹೇಳಲು ಹೆಮ್ಮೆಯಾಗುತ್ತದೆ. ಒಬ್ಬ ಭೀಮಾಬಾಯಿ, ಒಬ್ಬ ರಮಾಬಾಯಿಯವರಿಂದ ಬಾಬಾಸಾಹೇಬರಂತಹ ದೈತ್ಯ ಪ್ರತಿಭೆ ಇಡೀ ಜಗತ್ತಿಗೆ ಮಾದರಿಯಾಗಲು ಸಾಧ್ಯವಾಯಿತು. ಒಬ್ಬ ಸಾವಿತ್ರಿಬಾಯಿಫುಲೆಯಿಂದ ಹೆಣ್ಣುಮಕ್ಕಳ ವಿಮೋಚನೆ ಸಾಧ್ಯವಾಗಲು ಅಡಿಗಲ್ಲಾಯಿತು ಎಂದು ಭರವಸೆಯ ಮಾತುಗಳನ್ನಾಡಿದರು.
ಸಹಾಯ ಯೋಜನಾ ಅಧಿಕಾರಿಗಳು ನಾಗಮಣಿ ಹಾಗೂ ದೇವನಹಳ್ಳಿ ತಾಲ್ಲೂಕಿನ ಸಂಜೀವಿನಿ ಸಿಬ್ಬಂದಿಗಳು ಉಪಸ್ಥಿತರಿದ್ದರು. ನಾಲ್ಕು ತಾಲ್ಲೂಕಿನಿಂದ 35 ಜನ ಕೃಷಿ ಉದ್ಯೋಗ ಸಖಿಗಳು ಭಾಗವಹಿಸಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw