ಡಿ.ಕೆ.ಸುರೇಶ್ ಗೆ ಶಾಕ್ ನೀಡಿದ ಡಾ. ಮಂಜುನಾಥ್!: ಡಿ.ಕೆ.ಶಿವಕುಮಾರ್ ಗೆ ಫುಲ್ ಟೆನ್ಷನ್! - Mahanayaka
3:45 PM Thursday 6 - February 2025

ಡಿ.ಕೆ.ಸುರೇಶ್ ಗೆ ಶಾಕ್ ನೀಡಿದ ಡಾ. ಮಂಜುನಾಥ್!: ಡಿ.ಕೆ.ಶಿವಕುಮಾರ್ ಗೆ ಫುಲ್ ಟೆನ್ಷನ್!

d.k suresh
04/06/2024

ಬೆಂಗಳೂರು: ಗ್ರಾಮಾಂತರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಡಿ.ಕೆ.ಸುರೇಶ್ ಗೆ ಬಿಜೆಪಿ ಅಭ್ಯರ್ಥಿ ಡಾ. ಮಂಜುನಾಥ್ ಶಾಕ್ ಮೇಲೆ ಶಾಕ್ ನೀಡುತ್ತಿದ್ದು, ಇದೀಗ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಫಲಿತಾಂಶ ಹಾವು ಏಣಿಯಾಟದಂತಾಗಿದೆ.

ಬೆಳಗ್ಗೆ ಅಂಚೆ ಮತ ಎಣಿಕೆಯಲ್ಲಿ ಡಾ ಮುಂಜುನಾಥ್ ಮುನ್ನಡೆ ಸಾಧಿಸಿದ್ದರು. ನಂತರ ನಡೆದ ಇವಿಎಂ ಮತ ಎಣಿಕೆಯಲ್ಲಿ ಡಿ.ಕೆ. ಸುರೇಶ್ ಮುನ್ನಡೆ ಸಾಧಿಸಿದ್ರು. ಇದೀಗ ಡಾ. ಮಂಜುನಾಥ್ ಭಾರೀ ಮುನ್ನಡೆ ಕಾಯ್ದುಕೊಂಡಿದ್ದಾರೆ. 50,466 ಮತಗಳ ಮುನ್ನಡೆ ಸಾಧಿಸಿದ್ದಾರೆ.

ಇನ್ನೂ ಡಿ.ಕೆ.ಸುರೇಶ್ ಗೆ ಹಿನ್ನಡೆ ವರದಿ ಬರುತ್ತಿದ್ದಂತೆಯೇ ಆಪ್ತರಿಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ಮಾಡಿ ಮಾಹಿತಿ ಪಡೆದಿದ್ದಾರೆ. ಮತ ಎಣಿಕೆ ಕೇಂದ್ರದಲ್ಲಿರುವ ಆಪ್ತರಿಗೆ ಫೋನ್ ಕರೆ ಮಾಡಿದ್ದಾರೆ. ಯಾವ ಕ್ಷೇತ್ರದಲ್ಲಿ ಮತ ಎಣಿಕೆ ಆಗಿದೆ, ಯಾವುದು ಮುಗಿದಿದೆ, ಮುಂದೆ ಯಾವ ಕ್ಷೇತ್ರ ಇದೆ, ಇನ್ನೂ ಎಷ್ಟು ರೌಂಡ್ಸ್ ಗಳಿದೆ ಎಂಬುದರ ಬಗ್ಗೆ ಮಾಹಿತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಸದ್ಯ ಸದಾಶಿವನಗರದ ಮನೆಯಲ್ಲಿ ಕುಳಿತು ಡಿ.ಕೆ.ಸುರೇಶ್ ಫಲಿತಾಂಶ ವೀಕ್ಷಣೆ ಮಾಡುತ್ತಿದ್ದಾರೆ. ಮನೆಯೊಳಗೆ ಯಾರನ್ನೂ ಬಿಡದಂತೆ ಸೂಚನೆ ನೀಡಲಾಗಿದೆ ಎಂದು ಹೇಳಲಾಗಿದೆ.

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

 

ಇತ್ತೀಚಿನ ಸುದ್ದಿ