ಡಿ.ಕೆ.ಶಿವಕುಮಾರ್‌ಗೆ ಮತಾಂತರವಾದ ಹೆಣ್ಣುಮಕ್ಕಳ ಕಷ್ಟದ ಅರಿವಿಲ್ಲ: ಸಚಿವ ಈಶ್ವರಪ್ಪ - Mahanayaka
10:14 AM Tuesday 4 - February 2025

ಡಿ.ಕೆ.ಶಿವಕುಮಾರ್‌ಗೆ ಮತಾಂತರವಾದ ಹೆಣ್ಣುಮಕ್ಕಳ ಕಷ್ಟದ ಅರಿವಿಲ್ಲ: ಸಚಿವ ಈಶ್ವರಪ್ಪ

eshwarappa
22/12/2021

ಬೆಂಗಳೂರು: ಡಿ.ಕೆ.ಶಿವಕುಮಾರ್‌ಗೆ ಮತಾಂತರವಾದ ಹೆಣ್ಣುಮಕ್ಕಳ ಕಷ್ಟ ಗೊತ್ತಿಲ್ಲ. ಮತಾಂತರ ಮಾಡಿ ದೇಹ ದುರ್ಬಳಕೆ ಮಾಡಿಕೊಂಡಿದ್ದಾರೆ. ಡಿಕೆಶಿ ಬಂದರೆ ಅವರನ್ನ ತೋರಿಸುತ್ತೇನೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಾಂತರ ಕಾಯ್ದೆ ತರುವ ಉದ್ದೇಶ ಸ್ಪಷ್ಟ. ಯಾರನ್ನೂ ಬಲವಂತ ಮತಾಂತರ ಮಾಡಬಾರದು. ಆಸೆ, ಆಮಿಷ ತೋರಿಸಿ ಮತಾಂತರ ಮಾಡಲಾಗುತ್ತಿದೆ. ವಿಕಲಾಂಗರಿಗೆ ಆಮಿಷ ತೋರಿಸಿ ಮತಾಂತರ ಮಾಡ್ತಿದ್ದಾರೆ. ಕಾನೂನು ಬದ್ದವಾಗಿ ಯಾರು ಯಾವ ಧರ್ಮಕ್ಕೆ ಬೇಕಾದರೂ ಹೋಗಬಹುದು ಎಂದರು.

ಮತಾಂತರ ಆಗಲು ಜಿಲ್ಲಾಧಿಕಾರಿ ಬಳಿ ಅರ್ಜಿ ಹಾಕಬಹುದು. ಒಂದು ವೇಳೆ ಬೇಡ ಅಂದರೆ, ಹಿಂದಕ್ಕೆ ಬರಬಹುದು. ಕಾಂಗ್ರೆಸ್ ಹಾಗೂ ಜೆಡಿಎಸ್​ ನವರು ಏಕೆ ವಿರೋಧ ಮಾಡುತ್ತಿದ್ದಾರೆ ಗೊತ್ತಿಲ್ಲ. ನಾವು ಕಾನೂನು ಬದ್ದವಾಗಿ ಮತಾಂತರ ಕಾಯ್ದೆ ತರುತ್ತಿದ್ದೇವೆ ಎಂದು ಸಚಿವ ಕೆ.ಎಸ್​.ಈಶ್ವರಪ್ಪ ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಮತಾಂತರ ನಿಷೇಧ ವಿಧೇಯಕ ಚರ್ಚೆ ಹಿನ್ನೆಲೆ: ಸುವರ್ಣಸೌಧಕ್ಕೆ ಮಾಧ್ಯಮಗಳಿಗೆ ನಿರ್ಬಂಧ; ಸ್ಪೀಕರ್‌ ಕಾಗೇರಿ ಸೂಚನೆ

ಯುವಕನ ಬರ್ಬರ ಹತ್ಯೆ: 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ಅರೆಸ್ಟ್!

ನಿಮ್ಮ ಅಪ್ಪನ ಕಾಲದಲ್ಲಿ ಅತೀ ದೊಡ್ಡ ಗುಂಪು ಹತ್ಯೆ ನಡೆದಿತ್ತು: ರಾಹುಲ್ ಗಾಂಧಿಗೆ ಬಿಜೆಪಿ ನಾಯಕರ ತಿರುಗೇಟು

ಚಿಕ್ಕಬಳ್ಳಾಪುರ: ಕಂಪಿಸಿದ ಭೂಮಿ, ಮನೆಯಿಂದ ಹೊರಗೆ ಓಡಿ ಬಂದ ಜನರು

“ಇದು ಪ್ರೀತಿ ಅಂತ ತಿಳಿದ ಮೇಲೆ ನೀನೆ ಎಲ್ಲಾ…” | ಅಪ್ಪುವನ್ನು ನೆನೆದು ವಿಶೇಷ ಪೋಸ್ಟ್ ಮಾಡಿದ ನಟಿ ರಮ್ಯಾ

ಕ್ರಿಸ್ ಮಸ್, ಹೊಸ ವರ್ಷಾಚರಣೆಗೆ ನಿರ್ಬಂಧ ಇದೆಯೇ? | ಸಿಎಂ ಬೊಮ್ಮಾಯಿ ಹೇಳಿದ್ದೇನು?

ಇತ್ತೀಚಿನ ಸುದ್ದಿ