ದಲಿತ ಮಕ್ಕಳ ಊಟದ ತಟ್ಟೆಯನ್ನು ಇತರ ಮಕ್ಕಳು ಮುಟ್ಟುತ್ತಿಲ್ಲ | ದೇವರಂತ ಮಕ್ಕಳ ಮೇಲೆಯೂ ಅಸ್ಪೃಶ್ಯತೆಯ ಕರಿನೆರಳು

ಮಣಿಪುರಿ: ಮಕ್ಕಳು ದೇವರ ಸಮಾನ ಅನ್ನುತ್ತಲೇ, ಮಕ್ಕಳ ಮೇಲೆಯೂ ಅಸ್ಪೃಶ್ಯತೆ ಆಚರಿಸುವ ದುಷ್ಟರನ್ನು ನಾವು ದಿನನಿತ್ಯ ನೋಡುತ್ತಿರುತ್ತೇವೆ. ಇತ್ತೀಚೆಗಷ್ಟೇ ಕರ್ನಾಟಕದಲ್ಲಿಯೂ ಮಗುವೊಂದು ದೇವಸ್ಥಾನದೊಳಗೆ ಹೋಯಿತು ಎಂದು ಪೋಷಕರಿಗೆ ದಂಡ ಹಾಕಿದ ಪ್ರಕರಣ ಕೂಡ ನಡೆದಿತ್ತು. ಇದೀಗ ಉತ್ತರ ಪ್ರದೇಶದ ಮಣಿಪುರಿ ಜಿಲ್ಲೆಯ ದೌಡಾಪುರದಲ್ಲಿ ಮಕ್ಕಳ ನಡುವೆ ಅಸ್ಪೃಶ್ಯತೆ ಆಚರಿತ್ತಿರುವ ಘಟನೆ ಬೆಳಕಿಗೆ ಬಂದಿದೆ.’
ದೌಡಾಪುರ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ದಲಿತ ವಿದ್ಯಾರ್ಥಿಗಳು ಊಟ ಮಾಡಿದ ತಟ್ಟೆಯನ್ನು ಪ್ರತ್ಯೇಕವಾಗಿರಿಸುವ ಹೀನ ಕೆಲಸವನ್ನು ಸ್ವತಃ ಶಿಕ್ಷಕರುಗಳೇ ಮಾಡಿಸುತ್ತಿರುವುದು ಬೆಳಕಿಗೆ ಬಂದಿದ್ದು, ಈ ಸಂಬಂಧ ವಿಡಿಯೋವೊಂದು ವೈರಲ್ ಆದ ಬೆನ್ನಲ್ಲೇ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯನ್ನು ಅಮಾನತು ಮಾಡಲಾಗಿದೆ.
ಈ ಶಾಲೆಯಲ್ಲಿ ಒಟ್ಟು 80 ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಈ ಪೈಕಿ 60 ಮಕ್ಕಳು ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದಾರೆ. ಈ ಮಕ್ಕಳು ಸ್ವಚ್ಛತೆಯಲ್ಲಿ ಕೂಡ ಬೇರೆ ಜಾತಿಯವರ ಮಕ್ಕಳನ್ನೂ ಮೀರಿಸುವಂತಿದ್ದರೂ, ಇವರ ಮೇಲೆ ಅಸ್ಪೃಶ್ಯತೆ ಆಚರಿಸಲಾಗುತ್ತಿದೆ ಎಂದು ಮಕ್ಕಳು ನೋವಿನಿಂದ ಹೇಳಿಕೊಂಡಿದ್ದಾರೆ.
ನಾವು ಬಳಸಿದ ಪಾತ್ರೆಯನ್ನು ಯಾರು ಕೂಡ ಮುಟ್ಟುವುದಿಲ್ಲ. ನಮ್ಮ ಮೇಲೆ ಜಾತಿ ತಾರತಮ್ಯ ಮಾಡಲಾಗುತ್ತಿದೆ ಎಂದು ಆ ಮುಗ್ಧ ಮಕ್ಕಳು ಹೇಳಿದ್ದಾರೆ. ಶಾಲೆಯಲ್ಲಿ ಅಸ್ಪೃಶ್ಯತೆ ಆಚರಿಸಲಾಗುತ್ತಿದೆ ಎಂದು ನೂತನವಾಗಿ ಆಯ್ಕೆಯಾದ ಸರಪಂಚ್ ಮಂಜುದೇವಿ ಎಂಬವರ ಪತಿ ಸಹಾಬ್ ಸಿಂಗ್ ಅವರು ದೂರು ನೀಡಿದ್ದರು. ಈ ದೂರಿನನ್ವಯ ಮುಖ್ಯ ಅಭಿವೃದ್ಧಿ ಅಧಿಕಾರಿ ಕಮಲ್ ಸಿಂಗ್ ಇನ್ನಿತರ ಅಧಿಕಾರಿಗಳು ಶಾಲೆ ದಾಳಿ ನಡೆಸಿದಾಗ ಅಲ್ಲಿದ್ದ ಅಡುಗೆ ಸಿಬ್ಬಂದಿ ಸಹಿತ ಶಾಲೆಯ ಶಿಕ್ಷಕರು ಮಕ್ಕಳ ಪಾತ್ರೆಯನ್ನು ಮುಟ್ಟಲು ನಿರಾಕರಿಸುತ್ತಿರುವುದು ತಿಳಿದು ಬಂದಿದೆ.
ದೇಶಕ್ಕೆ ಸ್ವಾತಂತ್ರ್ಯ ಬಂದರೂ ದಲಿತರಿಗೆ ಇನ್ನೂ ಸ್ವಾತಂತ್ರ್ಯ ಎನ್ನುವುದೇ ಸಿಕ್ಕಿಲ್ಲ. ಹಿಂದೂ ಧರ್ಮ ಎಂದು ಭಾಷಣ ಬಿಗಿಯುವವರು ಜಾತಿ ತಾರಮ್ಯದ ಬಗ್ಗೆ ಪ್ರಶ್ನಿಸದೇ ಕೈಲಾಗದ ಹೇಡಿಗಳಂತಿದ್ದಾರೆ. ಕರ್ನಾಟಕದಲ್ಲಿ ಮೊನ್ನೆಯಷ್ಟೇ ನಡೆದ ಘಟನೆಯಲ್ಲಿ ಯಾವ ಹಿಂದೂ ನಾಯಕರು ಕೂಡ ಕನಿಷ್ಠ ಖಂಡಿಸುವ ಕೆಲಸವನ್ನು ಕೂಡ ಮಾಡಿಲ್ಲ. ಇಂದು ದೇಶದಲ್ಲಿ ಜನರು ಹಿಂದೂ ಧರ್ಮದಿಂದ ಬೇರೆ ಧರ್ಮಕ್ಕೆ ಮತಾಂತರವಾಗಲು ಜಾತಿ ತಾರತಮ್ಯ ಎನ್ನುವುದೇ ಮುಖ್ಯ ಕಾರಣವಾಗಿದೆ. ಆದರೆ, ಜಾತಿ ತಾರತಮ್ಯವನ್ನು ನಿವಾರಣೆ ಮಾಡದೇ ಚುನಾವಣೆ ಬಂದಾಗ ಮತಾಂತರದ ವಿಚಾರ ಹಿಡಿದುಕೊಂಡು ಬಿಜೆಪಿ ನಾಯಕರು ಮಾತನಾಡುತ್ತಿದ್ದಾರೆ. ಕಾಂಗ್ರೆಸ್ 70 ವರ್ಷಗಳಿಂದ ದೇಶವನ್ನು ಆಳಿತು. ಆದರೆ, ಅದು ಅಸ್ಪೃಶ್ಯತೆಯನ್ನು ಜೀವಂತವಾಗಿರಿಸಿ, ಮೇಲ್ವರ್ಗದವರ ಪರವಾಗಿ ಈಗಲೂ ನಿಂತಿದೆ. ಈಗ ದಲಿತ ಮಂತ್ರ ಜಪಿಸುತ್ತಿದೆ. ಆದರೆ, ಅಸ್ಪೃಶ್ಯತೆ ಕಳೆಯಲು ಕಾಂಗ್ರೆಸ್ ಪ್ರಯತ್ನಿಸಿದ್ದರೆ, ದೇಶ ಇಂದು ಈ ರೀತಿ ಇರುತ್ತಿರಲಿಲ್ಲ ಎನ್ನುವ ನೋವಿನ ಮಾತುಗಳು ದಲಿತ ಸಮುದಾಯದಿಂದ ಕೇಳಿ ಬಂದಿದೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/KPRE32QAEFL3ZvRW2wbYvj
ಇನ್ನಷ್ಟು ಸುದ್ದಿಗಳು…
ಅಕ್ಷರಸ್ಥರೇ ಇವತ್ತು ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಮೋಸ ಮಾಡುತ್ತಿದ್ದಾರೆ | ಡಾ.ಎಚ್.ಟಿ. ಪೋತೆ
ಅಮೆರಿಕಾ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ ಆದ ಪ್ರಧಾನಿ ನರೇಂದ್ರ ಮೋದಿ
ಸಿಎಂ ಬೊಮ್ಮಾಯಿಯನ್ನು ಡ್ರೈವಿಂಗ್ ಮಾಡೋದು ಯಡಿಯೂರಪ್ಪ | ಸಿದ್ದರಾಮಯ್ಯ
ಪ್ರೇಯಸಿಯ ಕೈಕಾಲು ಕಟ್ಟಿ ಸೂಟ್ ಕೇಸ್ ನಲ್ಲಿ ತುಂಬಿಸಿ ಕಾಡಿಗೆಸೆದ ಪ್ರಿಯಕರ!
ಪ್ರತಿಭಟನೆ ಹೆಸರಲ್ಲಿ ಜನರಿಗೆ ತೊಂದರೆ ಕೊಡುವುದು ಬೇಡ | ಭಾರತ್ ಬಂದ್ ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ
ಗೋ ಕಳ್ಳತನಕ್ಕೆ ಜಾತಿ ಇಲ್ಲ, ಧರ್ಮ ಇಲ್ಲ, ಬಿಜೆಪಿಯವರೇ ಬೀಫ್ ಎಕ್ಸ್ ಪೋರ್ಟ್ ಮಾಡ್ತಿದ್ದಾರೆ | ಮಿಥುನ್ ರೈ