2 ವರ್ಷದ ದಲಿತ ಮಗು ದೇವಸ್ಥಾನ ಪ್ರವೇಶಿಸಿದಕ್ಕೆ ದಂಡ: ಕ್ರಮಕೈಗೊಳ್ಳುವ ತಾಕತ್ ಇಲ್ಲದೇ ಭಾಷಣ ಬಿಗಿದು ಹೋದ ಅಧಿಕಾರಿಗಳು
ಕೊಪ್ಪಳ: ದಲಿತ ಮಗು ದೇಗುಲಕ್ಕೆ ಪ್ರವೇಶಿಸಿತು ಎಂದು ಊರಿಗೆ ಗ್ರಾಮಸ್ಥರು ಸೇರಿಕೊಂಡು ಮಗುವಿನ ಪೋಷಕರಿಗೆ ದಂಡ ವಿಧಿಸಿರುವ ಘಟನೆ ಕೊಪ್ಪಳ ಜಿಲ್ಲೆಯ ಹನುಮಸಾಗರ ಸಮೀಪದ ಮಿಯಾಪುರದಲ್ಲಿ ನಡೆದಿದ್ದು, ಈ ಘಟನೆಯ ಬಳಿಕ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸೂಕ್ತ ಕ್ರಮವನ್ನು ಕೈಗೊಳ್ಳದೇ ನಿರ್ಲಕ್ಷ್ಯವಹಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಸ್ಥಳಕ್ಕೆ ಆಗಮಿಸಿದ ಪೊಲೀಸ್, ಕಂದಾಯ, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ದಂಡ ವಿಧಿಸಿದಿವರಿಗೆ ಎಚ್ಚರಿಕೆ ನೀಡಿ, ಮುಂದೆ ಈ ರೀತಿ ಆದ್ರೆ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳಿ, ಪ್ರಕರಣವನ್ನು ಮುಚ್ಚಿ ಹಾಕಲು ಯತ್ನಿಸಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ. ಅಧಿಕಾರಿಗಳು ಆರೋಪಿಗಳ ವಿರುದ್ಧ ಕಾನೂನು ರೀತಿಯ ಕ್ರಮಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆಕ್ರೋಶಗಳು ಕೇಳಿ ಬಂದಿವೆ.
ಚನ್ನದಾಸ ಸಮುದಾಯದ 2 ವರ್ಷದ ಮಗುವನ್ನು ಸೆ.4ರಂದು ಪೋಷಕರು ದೇವಸ್ಥಾನಕ್ಕೆ ಕರೆತಂದಿದ್ದರು. ಈ ದೇವಸ್ಥಾನಕ್ಕೆ ದಲಿತ ಹಿಂದೂಗಳು ಪ್ರವೇಶಿಸಬಾರದು ಎನ್ನುವ ಅಸ್ಪೃಶ್ಯತಾ ಆಚರಣೆ ಇಲ್ಲಿ ನಡೆಯುತ್ತಿದೆ. ದಲಿತರು ಹೊರಗೆಯೇ ನಿಂತು ದೇವರಿಗೆ ನಮಸ್ಕರಿಸಿ ಅಲ್ಲಿಂದ ಹೋಗಬೇಕು. ಆದರೆ, ಪೋಷಕರೊಂದಿಗೆ ಬಂದಿದ್ದ 2 ವರ್ಷ ವಯಸ್ಸಿನ ಮಗು ದೇವಸ್ಥಾನದ ಒಳಗೆ ಹೋಗಿತ್ತು.
ಈ ವಿಚಾರಕ್ಕೆ ಸಂಬಂಧಿಸಿದಂತೆ ಸೆ.11ರಂದು ಗ್ರಾಮದ ಜಾತಿ ಪೀಡೆ ಮುಖಂಡರು ಸಭೆ ನಡೆಸಿ, ದಲಿತರ ಮಗು ದೇವಸ್ಥಾನಕ್ಕೆ ಪ್ರವೇಶಿಸಿದ್ದರಿಂದಾಗಿ ನಮ್ಮ ದೇವಾಲಯ ಅಪವಿತ್ರವಾಗಿದ್ದು, ಅದಕ್ಕೆ ಹೋಮ ಹವನ ಮಾಡಿಸಬೇಕು. ಹಾಗಾಗಿ 25 ಸಾವಿರ ದಂಡ ಮತ್ತು ಧಾರ್ಮಿಕ ಕಾರ್ಯಕ್ರಮಕ್ಕೆ ಆಗುವ ವೆಚ್ಚ ನೀಡಬೇಕು ಎಂದು ಮಗುವಿನ ತಂದೆಗೆ ಷರತ್ತು ವಿಧಿಸಿದ್ದರು.
ಈ ಹಿನ್ನೆಲೆಯಲ್ಲಿ ಮಗುವಿನ ಪೋಷಕರು ತಮ್ಮ ಸಮುದಾಯದ ಮುಖಂಡರ ನೇತೃತದಲ್ಲಿ ಪೊಲೀಸರು ಮೊರೆ ಹೋಗಿದ್ದರು. ಆದರೆ, ಪೊಲೀಸರು ಅಸ್ಪೃಶ್ಯತಾ ಆಚರಣೆ ಮಾಡುವವರ ವಿರುದ್ಧ ಕ್ರಮಕೈಗೊಳ್ಳುವುದನ್ನು ಬಿಟ್ಟು ಕೈಲಾಗದವರಂತೆ ಜಾಗೃತಿ ಸಭೆ ನಡೆಸಿ ದಲಿತರ ಕಣ್ಣಿಗೆ ಮಣ್ಣು ಹಾಕುವ ಕೆಲಸ ಮಾಡಿದ್ದಾರೆ. ಇವರಿಗೆ ಈ ಅಧಿಕಾರ ಕೊಟ್ಟವರು ಯಾರು? ಪ್ರಕರಣ ದಾಖಲಾದಾಗ ಕಾನೂನು ಹೇಗಿದೆಯೋ ಹಾಗೆ ಕ್ರಮಕೈಗೊಳ್ಳುವುದು ಬಿಟ್ಟು, ಸಭೆ ಮಾಡಿ, ಭಾಷಣ ಬಿಗಿದು ದಲಿತರ ಕಣ್ಣಿಗೆ ಮಣ್ಣೆರಚಲಾಗಿದೆ ಎನ್ನುವ ಆಕ್ರೋಶಗಳು ಕೇಳಿ ಬಂದಿವೆ.
ದಲಿತರ ಮಕ್ಕಳು ದೇವಸ್ಥಾನಕ್ಕೆ ಪ್ರವೇಶಿಸದರೆ, ಅಶುದ್ಧ ಆಗುತ್ತಂತೆ, ಆದರೆ, ಅದೇ ದಲಿತನ ಹಣದಲ್ಲಿ ಪೂಜೆ ಮಾಡಿದ್ರೆ, ಅವನ ದೇವರು ಶುದ್ಧ ಆಗ್ತಾನಂತೆ. ಇಂತಹ ಅವಮಾನಗಳನ್ನು ದಲಿತರು ಎಷ್ಟು ಸಹಿಸಿಕೊಳ್ಳಬೇಕು? ಅಧಿಕಾರಿಗಳು ಭಾಷಣ ಮಾಡುವುದನ್ನು ಬಿಟ್ಟು, ಕ್ರಮಕೈಗೊಳ್ಳಬೇಕು. ನಿಮ್ಮ ಭಾಷಣ ಕೇಳುವ ತಾಳ್ಮೆ ದಲಿತ ಸಮುದಾಯಕ್ಕಿಲ್ಲ. ಅಸ್ಪೃಶ್ಯತಾ ಆಚರಣೆ ನಡೆಸುವವರನ್ನು ನ್ಯಾಯಾಲಯದಲ್ಲಿ ನಿಲ್ಲಿಸಿ ಪ್ರಶ್ನಿಸಬೇಕು. ತಕ್ಷಣವೇ ಅವರನ್ನು ಬಂಧಿಸಬೇಕು ಎಂದು ರಾಜ್ಯಾದ್ಯಂತ ದಲಿತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/HpGUvPNd4TWBQJG8MXH5on
ಇನ್ನಷ್ಟು ಸುದ್ದಿಗಳು…
ಸುಳ್ಳು ಜಾತಿ ಪ್ರಮಾಣ ಪತ್ರ: ತಹಶೀಲ್ದಾರ್ ಸೇರಿದಂತೆ ಐವರ ವಿರುದ್ಧ ಎಫ್ ಐಆರ್
ಹಿಂದೂ ಧರ್ಮಕ್ಕೆ ಅಪಾಯ ಇದೆ ಎನ್ನುವುದು ಕಾಲ್ಪನಿಕ: ಕೇಂದ್ರ ಸರ್ಕಾರ ಸ್ಪಷ್ಟನೆ
ಗಣೇಶ ವಿಸರ್ಜನೆಗೆ ಸಮುದ್ರಕ್ಕೆ ಹಾರಿದ ಮೂವರು ಮಕ್ಕಳು ನೀರುಪಾಲು!
ಅಶ್ಲೀಲ ವಿಡಿಯೋ ಪ್ರಕರಣ: 2 ತಿಂಗಳ ಜೈಲುವಾಸದ ಬಳಿಕ ರಾಜ್ ಕುಂದ್ರಾಗೆ ಜಾಮೀನು
ಮಠದಲ್ಲಿಯೇ ಸ್ವಾಮೀಜಿಯ ಮರ್ಡರ್!? | ನೇಣು ಬಿಗಿದ ಸ್ಥಿತಿಯಲ್ಲಿ ಸ್ವಾಮೀಜಿಯ ಮೃತದೇಹ ಪತ್ತೆ
ನಾನು ಎರಡು ಬಾರಿ ರಾಜ್ಯಸಭಾ ಸ್ಥಾನವನ್ನು ನಿರಾಕರಿಸಿದ್ದೇನೆ | ನಟ ಸೋನು ಸೂದ್