ದಲಿತರ ಮದುವೆ ದಿಬ್ಬಣದ ಮೇಲೆ ಹಿಂದೂಗಳಿಂದ ಕಲ್ಲೆಸೆತ! - Mahanayaka

ದಲಿತರ ಮದುವೆ ದಿಬ್ಬಣದ ಮೇಲೆ ಹಿಂದೂಗಳಿಂದ ಕಲ್ಲೆಸೆತ!

25/02/2021

ಅಹ್ಮದಾಬಾದ್: ದಲಿತರ ಮದುವೆ ದಿಬ್ಬಣದ ಮೇಲೆ ಹಿಂದೂಗಳ ಗುಂಪೊಂದು ಕಲ್ಲೆಸೆದ ಘಟನೆ ಗುಜರಾತ್ ನ ಅರಾವಳಿ ಜಿಲ್ಲೆಯ ಲಿಂಚ್ ಗ್ರಾಮದಲ್ಲಿ ಬುಧವಾರ ನಡೆದಿದ್ದು, ಹಿಂದೂ ಧರ್ಮದ ಪ್ರಕಾರ ದಲಿತರು ಸಾಂಪ್ರದಾಯಿಕ ಪೇಟಾ ಧರಿಸುವುದು, ಡಿಜೆ ಹಾಕಿ ಸಂಭ್ರಮಿಸುವುದಕ್ಕೆ ನಿಷೇಧ ಇದೆ ಎಂದು ಆಕ್ಷೇಪಿಸಿ ಕಲ್ಲೆಸೆಯಲಾಗಿದೆ.

ಬಾಯಾಡ್ ಪಟ್ಟಣದಲ್ಲಿ ಮಂಗಳವಾರ ಸಂಜೆ ವಿವಾಹ ಸಮಾರಂಭ ನಡೆಯುತ್ತಿತ್ತು. ವರನ ದಿಬ್ಬಣವು ಅಂದು ಬೆಳಗ್ಗೆ  ಲಿಂಚ್ ಗ್ರಾಮದಿಂದ ಹಾದುಹೋಗುತ್ತಿದ್ದಾಗ. ರಜಪೂತ ಸಮುದಾಯಕ್ಕೆ ಸೇರಿದ ಹಿಂದೂಗಳು  ದಲಿತರ ಮೇಲೆ ಕಲ್ಲೆಸೆತ ನಡೆಸಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ  9 ಮಂದಿಯನ್ನು ಬಂಧಿಸಲಾಗಿದೆ ಎಂದು ಅಂಬಲಿಯಾರ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಆರ್.ಎಂ.ದಾಮೋದರ್ ತಿಳಿಸಿದ್ದಾರೆ. ಮದುವೆ ದಿಬ್ಬಣದಲ್ಲಿ ದಲಿತರು ಸಫಾ ಎಂಬ ಹೆಸರಿನ ಪೇಟಾವನ್ನು ಧರಿಸಿದ್ದರು. ಇದನ್ನು ದಲಿತರು ಧರಿಸಬಾರದು ಎನ್ನುವುದು ಹಿಂದೂ  ಜಾತಿ ಪದ್ಧತಿಯಾಗಿದ್ದು, ಹೀಗಾಗಿ ದಲಿತರ ಮೇಲೆ ಕಲ್ಲೆಸೆತ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ