ದಲಿತರಿಗೆ ಜಮೀನು ಮಂಜೂರಾಗುವುದನ್ನು ಸಹಿಸದೇ  ಮಾರಣಾಂತಿಕ ಹಲ್ಲೆ ನಡೆಸಿದ ಮೇಲ್ವರ್ಗದ ಹಿಂದೂಗಳು! - Mahanayaka

ದಲಿತರಿಗೆ ಜಮೀನು ಮಂಜೂರಾಗುವುದನ್ನು ಸಹಿಸದೇ  ಮಾರಣಾಂತಿಕ ಹಲ್ಲೆ ನಡೆಸಿದ ಮೇಲ್ವರ್ಗದ ಹಿಂದೂಗಳು!

hassana crime news
17/02/2022

ಹಾಸನ: ಪರಿಶಿಷ್ಟ ಜಾತಿ, ಪಂಗಡದ ಸಮುದಾಯಕ್ಕೆ  ಸರ್ಕಾರಿ ಜಮೀನು ಮಂಜುರಾತಿ ವಿಚಾರವಾಗಿ ಸರ್ವೇ ಮಾಡುತ್ತಿದ್ದ ವೇಳೆ ಮೇಲ್ವರ್ಗದ ಹಿಂದೂಗಳು ದಲಿತ ಕುಟುಂಬದ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಹಾಸನ ಜಿಲ್ಲೆಯ ಬೇಲೂರು ತಾಲೂಕಿನ ಸಾಣೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸಾಣೇನಹಳ್ಳಿ ಗ್ರಾಮದ ಸರ್ವೇ ನಂಬರ್ 25ರಲ್ಲಿ ಪರಿಶಿಷ್ಟ ಜಾತಿ ಪಂಗಡ ಸಮುದಾಯಕ್ಕೆ 3.20 ಗುಂಟೆ ಜಮೀನು ಮಂಜೂರು ಮಾಡಲು ತಹಶೀಲ್ದಾರ್ ಪರಿಶೀಲನೆ ನಡೆಸುತ್ತಿದ್ದ ವೇಳೆ ಮೇಲ್ವರ್ಗದ ಹಿಂದೂಗಳ ಗುಂಪೊಂದು ದಲಿತ ಕುಟುಂಬಗಳ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.

ಘಟನೆಯಲ್ಲಿ ಹಲವು ದಲಿತರಿಗೆ ಗಂಭೀರವಾದ ಗಾಯಗಳಾಗಿವೆ ಎಂದು ವರದಿಗಳಿಂದ ತಿಳಿದು ಬಂದಿದೆ.  ಗಾಯಾಳುಗಳನ್ನು ಬೇಲೂರು ತಾಲೂಕಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.

ದಲಿತರು ಜಮೀನು ಹೊಂದುವುದನ್ನು ಸಹಿಸದೇ ಮೇಲ್ವರ್ಗದ ಹಿಂದೂಗಳು ಈ ಕೃತ್ಯ ನಡೆಸಿದ್ದಾರೆ ಎಂದು ಹೇಳಲಾಗಿದೆ. ಘಟನೆ ಸಂಬಂಧ ಹಳೆಬೀಡು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಗಾಯಾಳುಗಳನ್ನು ಭೇಟಿ ಮಾಡಿ, ಮಾಹಿತಿ ಪಡೆದುಕೊಂಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪುನೀತ್, ಸಂಚಾರಿ ವಿಜಯ್ ಅವರಿಗೆ ಗೌರವ

ಮುಸ್ಲಿಮ್ ವಿದ್ಯಾರ್ಥಿನಿಗೆ ಬೆಂಗಾವಲಾಗಿ ನಿಂತ ನಾಲ್ವರು ಹಿಂದೂ ವಿದ್ಯಾರ್ಥಿನಿಯರು!

30 ಕೋಟಿ ರೂ. ವಂಚನೆ: ಪಂಚಮುಖಿ ಚಿಟ್ ಫಂಡ್ ಡೈರೆಕ್ಟರ್ ಬಂಧನ

ಹಿಜಾಬ್ ವಿವಾದ: ಶಾಲೆಗೆ ನಾಗಸಾಧುಗಳ ಥರ ಬರ್ತೀನಿ ಅನ್ನೋಕ್ಕಾಗಲ್ಲ:  ಸಿ.ಟಿ.ರವಿ

ಮಲಯಾಳಂನ ಖ್ಯಾತ ನಟ ಕೊಟ್ಟಾಯಂ ಪ್ರದೀಪ್ ನಿಧನ

ಇತ್ತೀಚಿನ ಸುದ್ದಿ